ಕಾಂತಾರ ಸಿನಿಮಾ ನಟ ನಿರ್ದೇಶಕ ರಿಷಬ್ ಶೆಟ್ಟಿಗೆ ಭರ್ಜರಿ ಯಶಸ್ಸು ತಂದು ಕೊಟ್ಟಿದ್ದು ಸೆಪ್ಟಂಬರ್ 30 ರಂದು ರಿಲೀಸ್ ಆಗಿದ್ದ ಕಾಂತಾರ ಸಿನಿಮಾ 300 ಕೋಟಿ ರೂ. ಕಲೆಕ್ಷನ್ ಮಾಡಿದೆ ಎನ್ನಲಾಗುತ್ತಿದೆ. ಹೌದು ತಮಿಳು ತೆಲುಗು ಮಲಯಾಳಂ ಮತ್ತು ಹಿಂದಿ ಭಾಷೆಗಳಿಗೆ ಡಬ್ ಆಗಿದ್ದು ಪ್ಯಾನ್-ಇಂಡಿಯನ್ ಚಲನಚಿತ್ರವನ್ನಾಗಿ ಮಾಡಿದೆ.

ಇನ್ನು ಬಾಕ್ಸ್ ಆಫೀಸ್ ನಲ್ಲಿ ದಾಖಲೆಗಳನ್ನು ಮುರಿಯುತ್ತಿದ್ದು ಕಳೆದ ತಿಂಗಳು 25 ದಿನಗಳಲ್ಲಿ 77 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ದಾಖಲಿಸುವ ಮೂಲಕ ಕರ್ನಾಟಕದಲ್ಲಿ ಅತಿ ಹೆಚ್ಚು ವೀಕ್ಷಿಸಿದ ಚಿತ್ರ ಎಂಬ ಹೆಗ್ಗಳಿಕೆಗೆ ಕೂಡ ಪಾತ್ರವಾಗಿರುವ ಚಿತ್ರ ಈಗ ಮತ್ತೊಂದು ಮೈಲಿಗಲ್ಲು ಮೀರಿದೆ.

ಪ್ರೊಡಕ್ಷನ್ ಹೌಸ್ ಹೊಂಬಾಳೆ ಫಿಲಂಸ್‌ನ ಆಪ್ತ ಮೂಲಗಳು ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 300 ಕೋಟಿ ರೂಪಾಯಿಗಳ ಗಡಿಯನ್ನು ಮುಟ್ಟಿದ್ದು ಕರ್ನಾಟಕದಲ್ಲಿ ಅರ್ಧದಷ್ಟು ಕಲೆಕ್ಷನ್ ಗಳಿಸಿದೆ ಎಂದು ತಿಳಿದು ಬಂದಿದೆ.

ಇನ್ನು ತಮ್ಮ ಡ್ರೀಮ್ ವಾರಿಯರ್ ಪಿಕ್ಚರ್ಸ್ ಮೂಲಕ ತಮಿಳುನಾಡಿನಲ್ಲಿ ಚಿತ್ರವನ್ನು ವಿತರಿಸಿರುವ ನಿರ್ಮಾಪಕ ಎಸ್‌ಆರ್ ಪ್ರಭು ಅವರು ಅಕ್ಟೋಬರ್ 30 ರಂದು ಚಿತ್ರವು ತನ್ನ ಅತ್ಯಧಿಕ ಕಲೆಕ್ಷನ್‌ಗಳನ್ನು ದಾಖಲಿಸಿದೆ ಎಂದು ಹರ್ಷ ವ್ಯಕ್ತಪಡಿಸಿದ್ದು ಇದು ಪ್ರಶಂಸನೀಯ ಸಾಧನೆಯಾಗಿದೆ.

ದೈವದ ಸೀನ್ ಹೇಗೆ ಮಾಡಬೇಕು ಎಂದು ಹೇಳಿಕೊಟ್ಟ ರಿಷಬ್ ಶೆಟ್ಟಿ…ನೋಡಿ ವಿಡಿಯೋ