ಜಾಲತಾಣಗಳಲ್ಲಿ ವೈರಲ್ ಆಗಿ ಹಂಚಲಾಗುತ್ತಿರುವ ಕೆಳಕಂಡ ಚಿತ್ರವೂ ಅದರಲ್ಲಿ ಇರುವ ಲಂಡನ್ ಟು ಕಲ್ಕತ್ತ, ಕಲ್ಕತ್ತ ಟು ಲಂಡನ್ ಎಂಬ ಪದಗಳೂ, ಲಂಡನ್ ನಿಂದ ಕೋಲ್ಕತಾಗೆ ಸಾರಿಗೆ ಸೇವೆ ಇತ್ತೇ ಎಂಬ ಆಶ್ಚರ್ಯವನ್ನು ಏರ್ಪಡಿಸಿತ್ತು.ಆದರೆ ಅದು ಸತ್ಯ ಎಂಬುದು ನಮ್ಮಲ್ಲಿ ಬಹಳಷ್ಟು ಜನರಿಗೆ ಗೊತ್ತಿಲ್ಲ. ನನಗೂ ಕೂಡ!
ಹೌದು. ಲಂಡನ್ ನಿಂದ ಕೋಲ್ಕತಾಗೆ ಬಸ್ ಸೇವೆ ಇತ್ತು. ಜಗತ್ತಿನ ಅತೀ ದೂರದ ಸಾರಿಗೆ ವ್ಯವಸ್ಥೆ ಒದಗಿಸಿದ ಬಸ್ ನ ಹೆಸರು ಆಲ್ಬರ್ಟ್ ಟ್ರಾವೆಲ್ ಬಸ್. ಈ ಬಸ್ ಲಂಡನ್ ವಿಕ್ಟೋರಿಯಾ ಬಸ್ ನಿಲ್ದಾಣದಿಂದ ಕೋಲ್ಕತ್ತಾಗೆ 1957 ರ ಏಪ್ರಿಲ್ 15 ನೇ ತಾರೀಕು ತನ್ನ ಸೇವೆಯನ್ನು ಪ್ರಾರಂಭಿಸಿತು.

ಲಂಡನ್ ನಿಂದ ಹೊರಡುವ ಈ ಬಸ್ ಬೆಲ್ಜಿಯಂ, ಜರ್ಮನಿ, ಆಸ್ಟ್ರಿಯಾ, ಯುಗಸ್ಲಾವಿಯಾ, ಬಲ್ಗೇರಿಯ, ಟರ್ಕಿ, ಇರಾನ್, ಅಫಘಾನಿಸ್ತಾನ, ಪಾಕಿಸ್ತಾನ ಮಾರ್ಗವಾಗಿ ಇಂಡಿಯಾ ಒಳಗೆ ಪ್ರವೇಶಿಸಿ ನಂತರ ಡೆಲ್ಲಿ, ಆಗ್ರಾ, ಅಲಹಾಬಾದ್, ಬನಾರಸ್ ಮಾರ್ಗವಾಗಿ ಕೊಲ್ಕತ್ತಾ ತಲುಪುತ್ತಿತ್ತು.
7957 ಕಿಮಿ ಅಂತರದ ಈ ಪಯಣ ಕೊಲ್ಕತ್ತಾ ತಲುಪಲು ಸುಮಾರು 48 ದಿನ ತಗೆದುಕೊಳ್ಳುವುದಂತೆ. ಆಲ್ಬರ್ಟ್ ಟ್ರಾವೆಲ್ ಬಸ್ ನಲ್ಲಿ ಲಂಡನ್ ನಿಂದ ಕೊಲ್ಕತ್ತಾ ಗೆ ಪ್ರಯಾಣಿಸಲು ಶುಲ್ಕವಾಗಿ 85 ಪೌಂಡ್ ವಸೂಲಿಸಲಾಗುತ್ತಿತ್ತು. ಭಾರತೀಯ ಮೌಲ್ಯದಲ್ಲಿ ಇದು ಸುಮಾರು 8000 ರೂಪಾಯಿ. ದ್ವಿಮುಖ ಪ್ರವಾಸಕ್ಕೆ ಸುಮಾರು 145 ಪೌಂಡ್ ಖರ್ಚಾಗುವುದು. ಭಾರತೀಯ ಮೌಲ್ಯದಲ್ಲಿ ಇದು ಸುಮಾರು 13644.

ಇದರಲ್ಲಿ ಹಾಸಿಗೆ, ರುಚಿಯಾದ ಆಹಾರ, ರೇಡಿಯೋ, ಎಲೆಕ್ಟ್ರಿಕಲ್ ಫ್ಯಾನ್ ಒಳಗೊಂಡ ಸಕಲ ಸೌಲಭ್ಯಗಳಿದ್ದವು. ಈ ಬಸ್ ನಲ್ಲಿ ಪ್ರಯಾಣಿಸಿದರೆ ತಮ್ಮ ಮನೆಯಲ್ಲಿರುವ ಅನುಭವ ನೀಡುವುದು ಎಂಬ ಜಾಹಿರಾತು ನೀಡಲಾಯಿತು.
ಈ ದೂರದ ಪ್ರಯಾಣದ ಸಮಯದಲ್ಲಿ ಇಸ್ತಾಂಬುಲ್, ಕಾಬುಲ್, ಸಾಲ್ಜ್‌ಬರ್ಗ್,ಡೆಲ್ಲಿ ನಗರಗಳಲ್ಲಿ ಪಯಣಿಗಳು ಶಾಪಿಂಗ್ ಮಾಡಲು ಅನುಮತಿಸಿಲಾಗುತ್ತಿತ್ತು. 1976 ರ ವರೆಗೂ ಕಾರ್ಯನಿರ್ವಹಿಸುತ್ತಿದ್ದ ಈ ಬಸ್ ಸೇವೆ, ಎಲ್ಲಾ ರಾಷ್ಟ್ರಗಳ ಸದ್ಭಾವನಾ ರಾಯಭಾರಿಯಾಗಿ ವಿಶ್ವವ್ಯಾಪಿ ಗೌರವ ಪಡೆದಿತ್ತು.
ಪ್ರಸ್ತುತ ಟ್ವಿಟ್ಟರ್ ಫೇಸ್ಬುಕ್ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿರುವ ಈ ಫೋಟೋಗಳು ಎಲ್ಲರನ್ನು ಬೆರಗುಗೊಳಿಸಿವೆ.
ಚಿತ್ರಗಳು: ಗೂಗಲ್ ಕೃಪೆ

