ಬೆಂಗಳೂರು: ಚಿತ್ರರಂಗದಲ್ಲಿ ಪ್ಯಾನ್‌ ಇಂಡಿಯಾ ಸಿನಿಮಾಗಳ ಸದ್ದು ಹೆಚ್ಚಾಗಿದೆ. ತೆಲುಗು ರಾಜ್ಯಗಳಲ್ಲಿ ಬಾಕ್ಸ್‌ ಆಫೀಸ್‌ನಲ್ಲಿ ಬೇರೆ ಭಾಷೆಯ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಕಲೆಕ್ಷನ್‌ ಮಾಡುತ್ತಿದೆ. ಈ ನಿಟ್ಟಿನಲ್ಲಿ ತೆಲುಗು ಸಿನಿಮಾಗಳಿಗೆ (Telugu Film) ಮೊದಲ ಆದ್ಯತೆ ಆಂಧ್ರಪ್ರದೇಶದಲ್ಲಿ ಸಿಗಬೇಕು ಎಂದು ಹೊಸ ಚರ್ಚೆ ಒಂದು ಶುರುವಾಗಿದೆ. ತೆಲುಗು ಚಲನಚಿತ್ರ ನಿರ್ಮಾಪಕರ ಮಂಡಳಿ ಈಗಾಗಲೇ ಪ್ರೆಸ್‌ ನೋಟ್‌ ಒಂದನ್ನು ಶೇರ್‌ ಮಾಡಿಕೊಂಡಿದೆ.

Telugu Film Producers Council Press Note.#TFPC#PRESSNOTEpic.twitter.com/uu9oqqc0uc— Telugu Film Producers Council (@tfpcin) November 13, 2022

ಇತ್ತೀಚಿನ ದಿನಗಳಲ್ಲಿ ಸಿನಿಮಾಗಳು ಬೇರೆ ಭಾಷೆಯಲ್ಲಿ ಡಬ್‌ ಆಗುತ್ತಿದೆ. ಆಂಧ್ರದಲ್ಲಿ ಸಂಕ್ರಾಂತಿ ಮತ್ತು ದಸರಾ, ದೀಪಾವಳಿಗೆ ಹೆಚ್ಚಾಗಿ ತೆಲುಗು ಸಿನಿಮಾಗಳಿಗೆ ಆದ್ಯತೆ ನೀಡಬೇಕು ಎನ್ನುವ ಚರ್ಚೆ ಶುರುವಾಗಿದೆ. ಆಂಧ್ರದಲ್ಲಿ ಸಂಕ್ರಾಂತಿ ಮತ್ತು ದೀಪಾವಳಿ ದೊಡ್ಡ ಹಬ್ಬ. ಆ ಸಂದರ್ಭದಲ್ಲಿ ಪ್ರೇಕ್ಷಕರಿಗೆ ರಜೆಗಳು ಸಿಗುವುದರಿಂದ ಚಿತ್ರಮಂದಿರಕ್ಕೆ ಬರುತ್ತಾರೆ. ಈ ಹಬ್ಬಗಳ ಸಂದರ್ಭದಲ್ಲಿ ಸಿನಿಮಾಗಳನ್ನು ಹೆಚ್ಚಾಗಿ ಆಂಧ್ರದಲ್ಲಿ ಬಿಡುಗಡೆ ಮಾಡುತ್ತಾರೆ. ಇದೀಗ ತೆಲುಗು ಚಲನಚಿತ್ರ ನಿರ್ಮಾಪಕರ ಮಂಡಳಿ ಪತ್ರಿಕಾ ಪ್ರಕಟಣೆ ಹೊರಡಿಸಿದೆ.