LPG Gas Price Update: ಈಗ ಗ್ಯಾಸ್ ಸಿಲಿಂಡರ್ ಖರೀದಿಸಲು ಇನ್ನೂ ಹೆಚ್ಚಿನ ಹಣವನ್ನು ಖರ್ಚು ಮಾಡಬೇಕಾಗುತ್ತದೆ. LPG ಸಿಲಿಂಡರ್ ಮೇಲಿನ ರಿಯಾಯಿತಿಯನ್ನು ಈಗ ರದ್ದುಗೊಳಿಸಲಾಗಿದೆ. 

  • ಸರ್ಕಾರಿ ತೈಲ ಕಂಪನಿಗಳು ಮಹತ್ವದ ನಿರ್ಧಾರ
  • ಗ್ಯಾಸ್ ಸಿಲಿಂಡರ್ ಖರೀದಿಸಲು ವ್ಯಯಿಸಬೇಕು ಅಧಿಕ ಹಣ 
  • ಇನ್ನು ಸಿಗುವುದಿಲ್ಲ ರಿಯಾಯಿತಿ

LPG Gas Price Update : ದೇಶಾದ್ಯಂತ ಏರುತ್ತಿರುವ ಗ್ಯಾಸ್ ಸಿಲಿಂಡರ್ ಬೆಲೆಗಳ ನಡುವೆಯೇ ಸರ್ಕಾರಿ ತೈಲ ಕಂಪನಿಗಳು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿವೆ. ಈ ನಿರ್ಧಾರದ ನಂತರ ಇದೀಗ,  ಗ್ಯಾಸ್ ಸಿಲಿಂಡರ್ ಖರೀದಿಸಲು ಇನ್ನೂ ಹೆಚ್ಚಿನ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಹೌದು, LPG ಸಿಲಿಂಡರ್ ಮೇಲಿನ ರಿಯಾಯಿತಿಯನ್ನು ಈಗ ರದ್ದುಗೊಳಿಸಲಾಗಿದೆ.  ಅಂದರೆ, ಇನ್ನು ಮುಂದೆ ಎಲ್‌ಪಿಜಿ ಬುಕ್ ಮಾಡುವಾಗ ಹೆಚ್ಚಿನ ಹಣವನ್ನು ವ್ಯಯಿಸಬೇಕಾಗುತ್ತದೆ. 

ಇನ್ನು ಸಿಗುವುದಿಲ್ಲ ರಿಯಾಯಿತಿ : 
ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಮೇಲೆ ಸರ್ಕಾರಿ ತೈಲ ಕಂಪನಿಗಳು 200 ರಿಂದ 300 ರೂಪಾಯಿಗಳ ರಿಯಾಯಿತಿಯನ್ನು ನೀಡುತ್ತಿದ್ದವು.  ಆದರೆ ಈಗ ಈ ರಿಯಾಯಿತಿಯನ್ನು ರದ್ದುಗೊಳಿಸಲಾಗಿದೆ. ವಾಣಿಜ್ಯ ಸಿಲಿಂಡರ್‌ಗಳ ಮೇಲೆ ವಿತರಕರು ಹೆಚ್ಚಿನ ರಿಯಾಯಿತಿ ನೀಡುತ್ತಿರುವ ದೂರಿನ ಆಧಾರದ ಮೇಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಸರ್ಕಾರಿ ತೈಲ ಕಂಪನಿಗಳಿಂದ ಹೊರಬಿತ್ತು ಆದೇಶ : 
ದೇಶದ ಮೂರು ಸರ್ಕಾರಿ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಮತ್ತು ಎಚ್‌ಪಿಸಿಎಲ್ (ಎಚ್‌ಪಿಸಿಎಲ್) ಮತ್ತು ಬಿಪಿಸಿಎಲ್ (ಬಿಪಿಸಿಎಲ್) ಇನ್ನು ಮುಂದೆ ಯಾವುದೇ ವಾಣಿಜ್ಯ ಗ್ಯಾಸ್ ಸಿಲಿಂಡರ್ ಹೊಂದಿರುವ ಗ್ರಾಹಕರಿಗೆ, ರಿಯಾಯಿತಿ ಸಿಗುವುದಿಲ್ಲ ಎಂದು ತಿಳಿಸಿವೆ. ಈ ನಿರ್ಧಾರ ನವೆಂಬರ್ 8 ರಿಂದಲೇ ಜಾರಿಗೆ ಬಂದಿದೆ. 

ಯಾವ ಸಿಲಿಂಡರ್‌ಗಳ ಮೇಲೆ ಇರುವುದಿಲ್ಲ ರಿಯಾಯಿತಿ :
ಇಂಡಿಯನ್ ಆಯಿಲ್‌ ಮಾಹಿತಿಯ ಪ್ರಕಾರ, 19 ಕೆಜಿ ಮತ್ತು 47.5 ಕೆಜಿ ಸಿಲಿಂಡರ್‌ಗಳನ್ನು ರಿಯಾಯಿತಿ ಇಲ್ಲದೆ ಮಾರಾಟ ಮಾಡಲಾಗುತ್ತದೆ.  ಈ ನಡುವೆ, 19  ಕೆಜಿ, 35 ಕೆಜಿ, 47.5 ಕೆಜಿ ಮತ್ತು 425 ಕೆಜಿ ಸಿಲಿಂಡರ್‌ಗಳ ಮೇಲಿನ ಎಲ್ಲಾ ರಿಯಾಯಿತಿಗಳನ್ನು ರದ್ದುಗೊಳಿಸಲಾಗುತ್ತಿದೆ ಎಂದು HPCL ಹೇಳಿದೆ.