ಸುಮಾರು 40 ಮಕ್ಕಳನ್ನು ಸಾಲಾಗಿ ನಿಲ್ಲಿಸಿ ಬೆಲ್ಟ್ ಮತ್ತು ದೊಣ್ಣೆಯಿಂದ ಹಲ್ಲೆ ನಡೆಸಲಾಗಿದೆ. ಈ ವೇಳೆ ಮಕ್ಕಳು ದಮ್ಮಯ್ಯ ಹೊಡೀಬೇಡಿ ಎಂದು ಕಾಲಿಗೆ ಬಿದ್ದರೂ ಆರೋಪಿಯು ಹೊಡೆತ ನಿಲ್ಲಿಸಿಲ್ಲ.

ಆರೋಪಿ ಭರತ್ ಮತ್ತು ಪೆಟ್ಟು ತಿಂದ ಮಗು

ತುಮಕೂರು: ನಗರದ ಹೊರವಲಯದಲ್ಲಿರುವ ವಸತಿ ಶಾಲಾ ಮಕ್ಕಳ ಮೇಲೆ ಪಾನಮತ್ತ ವ್ಯಕ್ತಿಯೊಬ್ಬ ಮಾರಣಾಂತಿಕ ಹಲ್ಲೆ ನಡೆಸಿದ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಲ್ಲಸಂದ್ರ ಗ್ರಾಮದ ವಿಶ್ವಭಾರತಿ ಸರ್ಕಾರಿ ಅನುದಾನಿತ ಶಾಲೆಯಲ್ಲಿ ಕೃತ್ಯ ನಡೆದಿದೆ. ಶಾಲೆಯ ಕಾರ್ಯದರ್ಶಿ ಎನ್.ಮೂರ್ತಿ ಅವರ ಪುತ್ರ ಭರತ್ ಮಕ್ಕಳನ್ನು ಥಳಿಸಿರುವ ಆರೋಪಿ ಎಂದು ಪೋಷಕರು ದೂರಿದ್ದಾರೆ. ಕುಡಿದ ಮತ್ತಿನಲ್ಲಿ ಮಕ್ಕಳ ಮೇಲೆ ಬೆಲ್ಟ್ ಮತ್ತು ದೊಣ್ಣೆಯಿಂದ ಆರೋಪಿಯು ಹಲ್ಲೆ ನಡೆಸಿದ್ದಾನೆ. ನಾಲ್ಕು ದಿನಗಳ ಹಿಂದೆ (ನ 21) ರಾತ್ರಿ 10 ಗಂಟೆ ವೇಳೆಯಲ್ಲಿ ಈ ಘಟನೆ ನಡೆದಿದೆ. ಆದರೆ ಮಕ್ಕಳಿಗೆ ಚಿಕಿತ್ಸೆಯನ್ನೂ ಕೊಡಿಸದ ಆಡಳಿತ ಮಂಡಳಿಯು ಹಲ್ಲೆಯ ವಿಚಾರವನ್ನೇ ಮುಚ್ಚಿಟ್ಟಿತ್ತು ಎಂದು ದೂರಲಾಗಿದೆ.

ಸುಮಾರು 40 ಮಕ್ಕಳನ್ನು ಸಾಲಾಗಿ ನಿಲ್ಲಿಸಿ ಮನಬಂದಂತೆ ಹಲ್ಲೆ ಮಾಡಲಾಗಿದೆ. ಮಕ್ಕಳ ತೊಡೆ‌, ಮರ್ಮಾಂಗಗಳಿಗೂ ಹೊಡೆದ ಬಿದ್ದಿದೆ. ಘಟನೆ ನಡೆದು 3 ದಿನಗಳ ಬಳಿಕ ಮಕ್ಕಳಿಗೆ ಪೋಷಕರಿಗೆ ಕರೆ ಮಾಡಲು ಅವಕಾಶ ಸಿಕ್ಕಿದೆ. ವಿಚಾರ ತಿಳಿಯುತ್ತಿದ್ದಂತೆ ರಾತ್ರೋರಾತ್ರಿ ಶಾಲೆಗೆ ಬಂದ ಪೋಷಕರು ಆರೋಪಿ ಭರತ್​ಗಾಗಿ ಹುಡುಕಾಡಿದರು. ತುಮಕೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸಹ ಆರೋಪಿಯ ಬಂಧನಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಸುಮಾರು 40 ಮಕ್ಕಳನ್ನು ಸಾಲಾಗಿ ನಿಲ್ಲಿಸಿ ಬೆಲ್ಟ್ ಮತ್ತು ದೊಣ್ಣೆಯಿಂದ ಹಲ್ಲೆ ನಡೆಸಲಾಗಿದೆ. ಈ ವೇಳೆ ಮಕ್ಕಳು ದಮ್ಮಯ್ಯ ಹೊಡೀಬೇಡಿ ಎಂದು ಕಾಲಿಗೆ ಬಿದ್ದರೂ ಆರೋಪಿಯು ಹೊಡೆತ ನಿಲ್ಲಿಸಿಲ್ಲ. ಮಕ್ಕಳು ಬೇಗ ಮಲಗಿದ್ದೇ ಹೊಡೆತಕ್ಕೆ ಕಾರಣ ಎಂದು ದೂರಲಾಗಿದೆ. ಘಟನೆ ವೇಳೆ ಒಂದು ಮಗುವಿನ ಕೈ ಮುರಿದು ಹೋಗಿದೆ