ಜನವರಿ 17, 2023 ರಂದು, ಶನಿಯು ಕುಂಭ ರಾಶಿಯನ್ನು ಪ್ರವೇಶಿಸಲಿದೆ. ಶನಿಯ ರಾಶಿ ಬದಲಾವಣೆಯಿಂದ 3 ರಾಶಿಯವರು ತಮ್ಮ ಜೀವನದಲ್ಲಿ ಕಷ್ಟಗಳ ಸರಮಾಲೆ ಎದುರಿಸಬೇಕಾಗುತ್ತದೆ

 ನವಗ್ರಹಗಳ ಪೈಕಿ ಶನಿ ಗ್ರಹಕ್ಕೆ ಜ್ಯೋತಿಷ್ಯದಲ್ಲಿ ವಿಶೇಷ ಸ್ಥಾನವಿದೆ. ಯಾರ ಜಾತಕದಲ್ಲಿ ಶನಿ ಶುಭ ಫಲ ನೀಡುವ ಸ್ಥಾನದಲ್ಲಿರುತ್ತಾನೆಯೋ ಅವರು ಮುಟ್ಟಿದ ಎಲ್ಲಾ ಕೆಲಸಗಳಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ಆದರೆ ಶನಿ ಗ್ರಹ ಅಶುಭ ಸ್ಥಾನದಲ್ಲಿದ್ದರೆ, ಪ್ರತಿ ಹಂತದಲ್ಲಿ ಕೈ ಸುಟ್ಟುಕೊಳ್ಳಬೇಕಾಗುತ್ತದೆ. ಇನ್ನು ಒಮ್ಮೆ ಆರಂಭವಾಗುವ ಶನಿ ದೆಸೆ ಕೂಡಾ ದೀರ್ಘ ಕಾಲದವರೆಗೆ ನಡೆಯುತ್ತದೆ. ಜನವರಿ 17, 2023 ರಂದು, ಶನಿಯು ಕುಂಭ ರಾಶಿಯನ್ನು ಪ್ರವೇಶಿಸಲಿದೆ. ಶನಿಯ ರಾಶಿ ಬದಲಾವಣೆಯಿಂದ 3 ರಾಶಿಯವರು  ತಮ್ಮ ಜೀವನದಲ್ಲಿ ಕಷ್ಟಗಳ ಸರಮಾಲೆ ಎದುರಿಸಬೇಕಾಗುತ್ತದೆ.  

2023 ರಲ್ಲಿ, ಶನೀಶ್ವರ ದೇವ ಕಾಡುವ ರಾಶಿಗಳು ಯಾವುವು ? :


ಮೇಷ ರಾಶಿ : 2023ರಲ್ಲಿ, ಮೇಷ ರಾಶಿಯವರ ಖರ್ಚು ಹೆಚ್ಚಾಗುತ್ತದೆ.  ಕುಟುಂಬದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಮನಸ್ಥಿತಿ ಸರಿಯಾಗಿರುವುದಿಲ್ಲ. ಆರೋಗ್ಯ ಹದಗೆಡಬಹುದು. ಏನೇ ಮಾಡಿದರೂ ಯಶಸ್ಸು ಕೈ ತಪ್ಪುತ್ತಲೇ ಇರಬಹುದು. ಅನಾವಶ್ಯಕ ಪ್ರಯಾಣಗಳು ಎದುರಾಗಲಿವೆ. ಆದರೆ ಯಾವುದೇ ಕಾರಣಕ್ಕೂ ನಿರಾಶೆಗೊಳ್ಳಬೇಡಿ. ಮಾಡುವ ಕೆಲಸವನ್ನು ಬಹಳ ಎಚ್ಚರಿಕೆಯಿಂದ ಮಾಡಿ. 

ಸಿಂಹ ರಾಶಿ : ಸಿಂಹ ರಾಶಿಯವರು ಕೂಡಾ 2023ರಲ್ಲಿ ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಕೆಲಸದ ಒತ್ತಡ ಹೆಚ್ಚುತ್ತದೆ. ಕುಟುಂಬ ಸದಸ್ಯರಿಂದಲೇ  ಮಾನಸಿಕ ನೋವೂ ಉಂಟಾಗಬಹುದು. ನಿಮ್ಮ ಕೈಯ್ಯಲ್ಲಿರುವ ಹಣವನ್ನು ಆದಷ್ಟು ಬೇಗ ಹೂಡಿಕೆ ಮಾಡುವುದು ಉತ್ತಮ. ಇಲ್ಲದಿದ್ದರೆ, ಅನಗತ್ಯ ವೆಚ್ಚಗಳು ಎದುರಾಗಿ ದೊಡ್ಡ ಪ್ರಮಾಣದ ನಷ್ಟ ಸಂಭವಿಸಬಹುದು.

ಧನು ರಾಶಿ :  ಈ ರಾಶಿಯವರಿಗೆ ಶನಿ ಸಾಡೇ ಸಾತಿಯಿಂದ ಮುಕ್ತಿ ಸಿಕ್ಕಿದರೂ, ಸ್ವಲ್ಪ ಸಮಯ ಯಾತನಾಮಯವಾಗಿಯೇ ಉಳಿಯಬಹುದು. ವೃತ್ತಿ ಜೀವನದಲ್ಲಿ ಅಡೆತಡೆಗಳು ಎದುರಾಗಬಹುದು. ಖರ್ಚು ಹೆಚ್ಚುತ್ತಲೇ ಇರುತ್ತದೆ. ಅಪಾಯಕಾರಿ ಹೂಡಿಕೆಗಳಿಂದ ಸಾಧ್ಯವಾದಷ್ಟು ದೂರವಿರಿ. ಭೂಮಿ-ಕಟ್ಟಡ, ವಾಹನದಲ್ಲಿ ಮಾತ್ರ ಹಣವನ್ನು ಹೂಡಿಕೆ ಮಾಡುವುದು ಸೂಕ್ತವಾಗಿರುತ್ತದೆ. ಯಾರ ಮೇಲೂ ಕುರುಡು ನಂಬಿಕೆ ಬೇಡ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.