ರಾಮನಗರ : ರಾಮನಗರ ಜಿಲ್ಲೆ ಮಾಗಡಿ ಪಟ್ಟಣದ ಕೆಎಸ್‌ಆರ್‌ಟಿಸಿಬಸ್ ನಿಲ್ದಾಣದಲ್ಲಿ ಬಳಿ ಇರುವ ಉಮಾಮಹೇಶ್ವರಿ ದೇವಸ್ಥಾನದ ಶಿವಲಿಂಗ ಕಣ್ಣು ತೆರೆದಿದೆ ಎಂಬ ವದಂತಿ ಹಬ್ಬಿ ಭಕ್ತ ಸಾಗರವೇ ಹರಿದುಬರ್ತಿದೆ. ಶಿವಲಿಂಗದಲ್ಲಿ ಕಣ್ಣು ತೆರೆದಿರುವ ಚಿತ್ರಗಳು ವೈರಲ್ ಆಗಿದ್ದವು ಇದನ್ನು ನೋಡಲು ದೇವಸ್ಥಾನದ ಬಳಿ ಜನ ಸೇರುತ್ತಿದ್ದಾರೆ.
ದೇವಸ್ಥಾನ 50 ವರ್ಷ ಹಳೆಯದಾಗಿದ್ದು, ಬಸವೇಶ್ವರ ದೇವಸ್ಥಾನ ಟ್ರಸ್ಟ್ ವತಿಯಿಂದ ಉಮಾಮಹೇಶ್ವರಿ ದೇವಸ್ಥಾನವನ್ನು 5 ವರ್ಷದ ಹಿಂದೆ ಜೀರ್ಣೋದ್ಧಾರ ಮಾಡಲಾಗಿತ್ತು.ಅರ್ಚಕ ರುದ್ರೇಶ್ ಶುಕ್ರವಾರ ದೇವಸ್ಥಾನಕ್ಕೆ ಬಂದಿರಲಿಲ್ಲ. ಅವರ ಸಹೋದರ ಚಂದನ್ ಪೂಜೆ ಮಾಡುತ್ತಿದ್ದರು. ಸಂಜೆ ಹೊತ್ತಿನಲ್ಲಿ ಪಟ್ಟಣದ ಹೊಸಪೇಟೆಯ ನಾಗೇಶ್ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮೊಬೈಲ್‌ನಲ್ಲಿ ಫೋಟೋ ತೆಗೆದುಕೊಂಡಿದ್ದಾರೆ. ನಂತರ ಫೋಟೋವನ್ನು ಗಮನಿಸಿದಾಗ ಲಿಂಗದಲ್ಲಿರುವ ಕಣ್ಣನ್ನು ಕಂಡು ಅರ್ಚಕ ರುದ್ರೇಶ್‌ಗೆ ತಿಳಿಸಿದ್ದಾರೆ. ಆಗ ಪರೀಕ್ಷೆ ಮಾಡಿದಾಗ ಲಿಂಗದಲ್ಲಿ ಕಣ್ಣು ಮೂಡಿರುವುದು ಕಂಡುಬಂದಿದೆ.ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ವಿಜಯಸಿಂಹ ಕೂಡ ಈ ಬಗ್ಗೆ ಪರೀಕ್ಷೆ ಮಾಡಿಸಿದ್ದು, ಅರ್ಚಕರ ಕೈಯಲ್ಲಿ ಶಿವಲಿಂಗವನ್ನು ಒರೆಸಿ ನೋಡಿದಾಗಲೂ ಬದಲಾವಣೆ ಕಂಡುಬಂದಿಲ್ಲ. ರಾತ್ರಿ ಆಗುತ್ತಿದ್ದಂತೆ ಕಣ್ಣು ಮುಚ್ಚಿಕೊಂಡ ರೀತಿಯಲ್ಲಿ ಕಾಣಿಸುತ್ತಿದ್ದು, ವಿಸ್ಮಯದ ದರ್ಶನಕ್ಕೆ ಜನರು ಸೇರುತ್ತಿದ್ದಾರೆ.

