ಬೆಂಗಳೂರು :  ಸಂಸದೆ ಸುಮಲತಾ ಮತ್ತು ಟೀಂ ಬಿಜೆಪಿಗೆ..? ಸುಮಲತಾ ಮತ್ತು ಆಪ್ತರು ಬಿಜೆಪಿಗೆ ಹೋಗೋದು ಬಹುತೇಕ ಖಚಿತವಾಗಿದ್ದು,  ಸುಮಲತಾ ಆಪ್ತನ ಬಿಜೆಪಿ ಸೇರ್ಪಡೆಗೆ ಡೇಟ್ ಫಿಕ್ಸ್ ಆಗಿದೆ. ನವೆಂಬರ್ 28ರಂದು ಇಂಡುವಾಳ ಸಚ್ಚಿದಾನಂದ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ತಮ್ಮ ಆಪ್ತ ಸಚ್ಚಿದಾನಂದ ಬಿಜೆಪಿ ಸೇರಲು ಸುಮಲತಾ ಹಸಿರು ನಿಶಾನೆ ತೋರಿದ್ಧಾರೆ.

ಸಚ್ಚಿದಾನಂದ  ರಾಜ್ಯ ಬಿಜೆಪಿ ನಾಯಕರ ಸಮ್ಮುಖದಲ್ಲಿ ಸೇರಲಿದ್ದಾರೆ. ಬೆಂಗಳೂರಿನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸೇರ್ಪಡೆ ಕಾರ್ಯಕ್ರಮ ನಡೆಯಲಿದೆ. ಇಂಡವಾಳು ಸಚ್ಚಿದಾನಂದ ಶ್ರೀರಂಗಪಟ್ಟಣ ಕ್ಷೇತ್ರದಿಂದ ಸ್ಪರ್ಧೆ ಬಯಸಿದ್ಧಾರೆ. ಸಚ್ಚಿದಾನಂದ  ಕಳೆದ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಪರ ನಿಂತಿದ್ದರು. ಹೀಗಾಗಿ ಕಾಂಗ್ರೆಸ್‌ನಿಂದ ಇಂಡವಾಳು ಸಚ್ಚಿದಾನಂದ ಉಚ್ಚಾಟನೆಗೊಂಡಿದ್ದರು. ಸುಮಲತಾ ಯಾವುದೇ ಪಕ್ಷದಲ್ಲಿದ್ದರೂ ಸಚ್ಚಿದಾನಂದ ಬೆಂಬಲಿಸುವೆ ಎಂದಿದ್ದರು. ಅಧಿಕೃತವಾಗಿ ಸೇರದಿದ್ದರೂ ಅಸೆಂಬ್ಲಿ ಎಲೆಕ್ಷನ್​​​ನಲ್ಲಿ ಬಿಜೆಪಿಗೆ ಸುಮಲತಾ ಬೆಂಬಲ ಸಾಧ್ಯತೆಯಿದೆ