ನಟ ಪುನೀತ್ ರಾಜಕುಮಾರ್ ಅವರು ನಮ್ಮ ಜೊತೆ ದೈಹಿಕವಾಗಿ ಇಲ್ಲದೆ ಇರಬಹುದು ಆದರೆ ಅವರ ನಗು ಅವರು ಮಾಡಿದ ಸಹಾಯಗಳು ಅವರು ನಮಗೆ ಹಾಗೂ ನಮ್ಮ ಸಮಾಜಕ್ಕೆ ನೀಡಿ ಹೋದ ಉತ್ತಮ ಸಂದೇಶಗಳು ಯಾವಾಗಲೂ ನಮ್ಮ ಜೊತೆಯಲ್ಲೇ ಇರುತ್ತದೆ. ಪುನೀತ್ ರಾಜಕುಮಾರ್ ಗೆ ಇಬ್ಬರು ಹೆಣ್ಣು ಮಕ್ಕಳಿದ್ದು ಹಿರಿಯ ಮಗಳು ದೃತಿ ಹಾಗೂ ಕಿರಿಯ ಮಗಳು ವಂದಿತ. ಹಿರಿಯ ಮಗಳು ದೃತಿ ವಿದೇಶದಲ್ಲಿ ಓದುತ್ತಿದ್ದು ತಮ್ಮ ಸ್ಕಾಲರ್ಶಿಪ್ ನಲ್ಲಿ ತಾವೇ ಕಾಲೇಜಿನ ಫೀಸನ್ನು ಕಟ್ಟಿ ದೂರದ ಜರ್ಮನಿಯಲ್ಲಿ ಓದುತ್ತಿದ್ದಾರೆ. ವಂದಿತಾ ಕಳೆದ ವರ್ಷವಷ್ಟೇ ಬೆಂಗಳೂರಿನಲ್ಲಿ ತಮ್ಮ ಎಸ್ ಎಸ್ ಎಲ್ ಸಿ ಯನ್ನು ಮುಗಿಸಿ ಇದೀಗ ಕಾಲೇಜಿಗೆ ಹೋಗುತ್ತಿದ್ದಾರೆ.
ಪುನೀತ್ ರಾಜ್ ಕುಮಾರ್ ರವರ ಇಬ್ಬರು ಮುದ್ದಿನ ಮಕ್ಕಳು ಕೂಡ ಓದಿನಲ್ಲಿ ಮುಂದು ತಮ್ಮ ತಂದೆಯ ಆಸೆಯಂತೆ ತಾವು ಚೆನ್ನಾಗಿ ಓದಿ ಅವರ ದಾರಿಯಲ್ಲೇ ಸಾಗಬೇಕೆಂಬುದು ಅವರಿಬ್ಬರ ಆಶಯವಾಗಿದೆ. ಅಪ್ಪುವಿನ ಹಿರಿಯ ಮಗಳು ದೃತಿ ಮೊನ್ನೆ ತಾನೆ ಗಂಧದಗುಡಿ ಸಿನಿಮಾವನ್ನು ನೋಡಿ ಬಾವುಕಳಾಗಿ ತಮ್ಮ ತಂದೆಯನ್ನು ನೆನೆದು ಕಣ್ಣೀರು ಹಾಕಿ ತಮ್ಮ ಸೋಶಿಯಲ್ ಮೀಡಿಯಾ ಕಥೆಗಳಲ್ಲಿ ಆ ಫೋಟೋಗಳನ್ನು ಹಂಚಿಕೊಂಡಿದ್ದರು. ಅಪ್ಪು ಹಿರಿಯ ಮಗಳು ದೃತಿಗೆ ಪರೀಕ್ಷೆ ಇದ್ದ ಕಾರಣ ಅಪ್ಪುವಿನ ವರ್ಷದ ಪುಣ್ಯತಿಥಿಗು ಕೂಡ ಅವರು ಬರಲು ಸಾಧ್ಯವಾಗಿರಲಿಲ್ಲ.
ಅಪ್ಪುವಿನ ಮೊದಲನೇ ಮಗಳು ಧೃತಿ ಗಂಧದಗುಡಿಸಿ ಸಿನಿಮಾವನ್ನು ಕೂಡ ವಿದೇಶದಲ್ಲಿ ನೋಡಿದ್ದಾರೆ. ದೃತಿಯವರು ತಮ್ಮ ವಿದ್ಯಾಭ್ಯಾಸವನ್ನು ವಿದೇಶದಲ್ಲಿ ಮುಗಿಸಿ ವಾಪಸ್ ಭಾರತಕ್ಕೆ ಬಂದ ಬಳಿಕ ಅಪ್ಪುರವರು ಕಟ್ಟಿರುವ ತಮ್ಮದೇ ಆದ ಪಿಆರ್‌ಕೆ ಪ್ರೊಡಕ್ಷನ್ ಅಲ್ಲಿ ತಮ್ಮ ತಾಯಿ ಅಶ್ವಿನಿ ಪುನೀತ್ ರಾಜಕುಮಾರ್ ಜೊತೆ ಕೆಲಸ ಮಾಡುತ್ತಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಇಷ್ಟೇ ಅಲ್ಲದೆ ಅಪ್ಪುವಿನ ಮಗಳು ಧೃತಿ ಸಿನಿಮಾ ಕಾರ್ಯಗಳಲ್ಲೂ ಕೂಡ ತೊಡಗಿಕೊಂಡು ಮುಂದೆ ಸಿನಿಮಾವನ್ನು ಕೂಡ ಮಾಡುತ್ತಾರೆ ಎಂದು ಸುದ್ದಿ ಬಂದಿದೆ ಆದರೆ ಅಪ್ಪುವಿನ ಪತ್ನಿ ಅಶ್ವಿನಿ ಮೇಡಮ್ ರವರು ಮಕ್ಕಳನ್ನು ಸಿನಿಮಾ ರಂಗಕ್ಕೆ ತರುತ್ತಾರೋ ಇಲ್ಲವೋ ಎಂಬುದನ್ನು ನಾವು ಕಾದು ನೋಡಬೇಕಾಗಿದೆ.
ಪುನೀತ್ ರಾಜಕುಮಾರ್ ಅವರು ಕರ್ನಾಟಕದಲ್ಲಿ ಮರೆಯಲಾರದ ಮಾಣಿಕ್ಯವಾಗಿ ಎಲ್ಲರ ಮನದಲ್ಲೂ ಉಳಿದಿದ್ದಾರೆ. ಇತ್ತೀಚೆಗಷ್ಟೇ ತೆರೆಕಂಡ ಅಪ್ಪುವಿನ ಗಂಧದಗುಡಿ ಚಲನಚಿತ್ರಕ್ಕೆ ಬಾರಿ ಪ್ರಶಂಸೆ ವ್ಯಕ್ತವಾಗಿದ್ದು ಅಪ್ಪು ಕುಟುಂಬದವರೆಲ್ಲರೂ ಗಂಧದಗುಡಿಯನ್ನು ನೋಡಿ ಭಾವುಕರಾಗಿದ್ದಾರೆ. ಸುಧಾ ಮೂರ್ತಿ ಗಂಧದ ಗುಡಿ ಸಿನಿಮಾ ಕುರಿತು ಅದರ ವಿಮರ್ಶೆಯನ್ನು ಕೂಡ ಮಾಡಿದ್ದಾರೆ. ಇದರಿಂದ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದೀರಿ ಎಂದು ಎಲ್ಲರೂ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಇದೀಗ ಇದರ ಬೆನ್ನಲ್ಲೇ ಅಪ್ಪುವಿನ ಮಗಳು ದೃತಿ ಕೂಡ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿ ಪಿಆರ್ ಕೆ ಪ್ರೊಡಕ್ಷನ್ ನಲ್ಲಿ ಕೆಲಸ ಮಾಡುವುದಾಗಿ ಹೇಳಿದ್ದಾರೆ.

