Ration Card: ಪಡಿತರ ವಿತರಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ದೇಶಾದ್ಯಂತ ಹೊಸ ನಿಯಮ ಜಾರಿಗೆ ತಂದಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಫಲಾನುಭಾವಿಗಳಿಗೆ ಸರಿಯಾದ ಪ್ರಮಾಣದಲ್ಲಿ ಆಹಾರ ಧಾನ್ಯಗಳು ದೊರೆಯುವಂತೆ ಮಾಡಲು ಕೇಂದ್ರ ಸರ್ಕಾರ ಪಡಿತರ ಅಂಗಡಿಗಳಿಗೆ ಸಂಬಂಧಿಸಿದಂತೆ ಹೊಸ ಆದೇಶ ಹೊರಡಿಸಿದೆ. ಬನ್ನಿ ಈ ಕುರಿತಾದ ಅಪ್ಡೇಟ್ ಏನು ತಿಳಿದುಕೊಳ್ಳೋಣ
 

  • ಸರ್ಕಾರವು ಒದಗಿಸಿದ ಮಾಹಿತಿಯ ಪ್ರಕಾರ, ಈ ತಿದ್ದುಪಡಿಯು ಎನ್‌ಎಫ್‌ಎಸ್‌ಎ ಅಡಿಯಲ್ಲಿ
  • ಉದ್ದೇಶಿತ ಸಾರ್ವಜನಿಕ ವಿತರಣಾ ವ್ಯವಸ್ಥೆಯ (ಟಿಪಿಡಿಎಸ್) ಕಾರ್ಯಾಚರಣೆಗಳ ಪಾರದರ್ಶಕತೆಯನ್ನು
  • ಸುಧಾರಿಸುವ ಮೂಲಕ ಕಾಯಿದೆಯ ಸೆಕ್ಷನ್ 12 ರ ಅಡಿಯಲ್ಲಿ ತೂಕದ ಆಹಾರ ಧಾನ್ಯವನ್ನು ವಿತರಿಸುವ ಪ್ರಕ್ರಿಯೆಯನ್ನು ಮುಂದುವರಿಸುವ ಪ್ರಯತ್ನವಾಗಿದೆ. 

Ration Card Update: ನೀವು ಸಹ ಪಡಿತರ ಚೀಟಿ ಫಲಾನುಭವಿಗಳಾಗಿದ್ದರೆ ಮತ್ತು ಸರ್ಕಾರದ ಉಚಿತ ಪಡಿತರ ಯೋಜನೆಯ ಲಾಭವನ್ನು ಪಡೆಯುತ್ತಿದ್ದರೆ, ಈ ಸಂತಸದ ಸುದ್ದಿ ಕೇವಲ ನಿಮಗಾಗಿ. ಸರ್ಕಾರದ ಈ ಆದೇಶದ ಬಳಿಕ ಪಡಿತರ ಅಂಗಡಿಯವರು ಯಾವುದೇ ಪರಿಸ್ಥಿತಿಯಲ್ಲಿ ನಿಮಗೆ ಕಡಿಮೆ ಪಡಿತರ ನೀಡಲು ಸಾಧ್ಯವಿಲ್ಲ. ಹೌದು, ಸರ್ಕಾರವು ಪಡಿತರ ಅಂಗಡಿಗಳಿಗೆ ಹೊಸ ನಿಯಮವನ್ನು ಜಾರಿಗೆ ತಂದಿದೆ.

ಒಂದೆಡೆ ಸರ್ಕಾರ ಜನರ ಅನುಕೂಲಕ್ಕಾಗಿ ಉಚಿತ ಪಡಿತರ ವಿತರಣೆಯ ಅವಧಿಯನ್ನು ಡಿಸೆಂಬರ್ ವರೆಗೆ ವಿಸ್ತರಿಸಿದ್ದಾರೆ. ಇನ್ನೊಂದೆಡೆ ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ‘ಒನ್ ನೇಷನ್ ಒನ್ ರೇಶನ್ ಕಾರ್ಡ್’ ಯೋಜನೆಯೂ ಕೂಡ ಇಡೀ ದೇಶಾದ್ಯಂತ ಜಾರಿಯಾಗಿದ್ದು, ಬಳಿಕ ಎಲ್ಲ ಅಂಗಡಿಗಳಲ್ಲಿ ಆನ್ ಲೈನ್ ಎಲೆಕ್ಟ್ರಾನಿಕ್ ಪಾಯಿಂಟ್ ಆಫ್ ಸೇಲ್ (ಪಿಒಎಸ್ ) ಸಾಧನಗಳನ್ನು ಕಡ್ಡಾಯಗೊಳಿಸಲಾಗಿದೆ. ಸರ್ಕಾರದ ಈ ನಿರ್ಧಾರದಿಂದ ಈಗ ಯಾವ ಫಲಾನುಭವಿಗೂ ಕಡಿಮೆ ಪಡಿತರ ಸಿಗುವ ಸಾಧ್ಯತೆ ಇಲ್ಲ.

ಇನ್ಮುಂದೆ ಪಡಿತರ ತೂಕದಲ್ಲಿ ಯಾವುದೇ ಅವ್ಯವಹಾರ ಇಲ್ಲ
ವಾಸ್ತವದಲ್ಲಿ, ರಾಷ್ಟ್ರೀಯ ಆಹಾರ ಭದ್ರತಾ ಕಾನೂನಿನಡಿಯಲ್ಲಿ, ಫಲಾನುಭವಿಗಳಿಗೆ ಸರಿಯಾದ ಪ್ರಮಾಣದ ಆಹಾರ ಧಾನ್ಯಗಳು ಲಭ್ಯವಾಗುವಂತೆ ನೋಡಿಕೊಳ್ಳಲು ಪಡಿತರ ಅಂಗಡಿಗಳಲ್ಲಿ ಎಲೆಕ್ಟ್ರಾನಿಕ್ ಮಾಪಕಗಳೊಂದಿಗೆ ಎಲೆಕ್ಟ್ರಾನಿಕ್ ಪಾಯಿಂಟ್ ಆಫ್ ಸೇಲ್ (ಇಪಿಒಎಸ್) ಸಾಧನಗಳನ್ನು ಲಿಂಕ್ ಮಾಡಲು ಕೇಂದ್ರ ಸರ್ಕಾರ ನಿಯಮ ರೂಪಿಸಿದೆ.  ಹೀಗಾಗಿ ಇನ್ಮುಂದೆ ಎಲ್ಲಾ ಪಡಿತರ ಅಂಗಡಿಯವರು,  ಎಲೆಕ್ಟ್ರಾನಿಕ್ ಮಾಪಕಗಳನ್ನು ಇಟ್ಟುಕೊಳ್ಳುವುದು ಕಡ್ಡಾಯವಾಗಿದೆ. ಸರ್ಕಾರವು ಇದಕ್ಕಾಗಿ ತಪಾಸಣೆಯನ್ನೂ ಸಹ ನಡೆಸಲಿದೆ, ಇದರಿಂದ ನಿಮ್ಮ ಪಾಲಿನ ಕೋಟಾ ಯಾರು ಕದಿಯುವಹಾಗಿಲ್ಲ.

ದೇಶಾದ್ಯಂತ ಹೊಸ ನಿಯಮ ಜಾರಿ
ಸರ್ಕಾರದ ಈ ಆದೇಶದ ನಂತರ, ಇದೀಗ ದೇಶದ ಎಲ್ಲಾ ನ್ಯಾಯಬೆಲೆ ಅಂಗಡಿಗಳು ಆನ್‌ಲೈನ್ ಎಲೆಕ್ಟ್ರಾನಿಕ್ ಪಾಯಿಂಟ್ ಆಫ್ ಸೇಲ್ ಅಂದರೆ ಪಿಒಎಸ್ ಸಾಧನಗಳೊಂದಿಗೆ ಸಂಪರ್ಕ ಹೊಂದಿವೆ. ಅಂದರೆ, ಈಗ ಪಡಿತರ ತೂಕದಲ್ಲಿ ಅವ್ಯವಹಾರಗಳಿಗೆ ಯಾವುದೇ ಅವಕಾಶವಿಲ್ಲ. ಪಡಿತರ ವಿತರಕರಿಗೆ ಸರ್ಕಾರವು ಹೈಬ್ರಿಡ್ ಮಾಡೆಲ್ ಪಾಯಿಂಟ್ ಆಫ್ ಸೇಲ್ ಯಂತ್ರಗಳನ್ನು ಒದಗಿಸಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆಯ (ಪಿಡಿಎಸ್) ಫಲಾನುಭವಿಗಳು ಯಾವುದೇ ಸಂದರ್ಭದಲ್ಲೂ ಕಡಿಮೆ ಪಡಿತರವನ್ನು ಪಡೆಯಬಾರದು. ಯಾವುದೇ ನೆಟ್‌ವರ್ಕ್ ಇಲ್ಲದಿದ್ದರೂ ಕೂಡ ಈ ಯಂತ್ರಗಳು ಆಫ್‌ಲೈನ್‌ನಲ್ಲಿ ಮತ್ತು ಆನ್‌ಲೈನ್ ಮೋಡ್‌ನಲ್ಲಿ ಕಾರ್ಯನಿರ್ವಹಿಸುತ್ತವೆ ಎಂಬುದು ಇಲ್ಲಿ ಗಮನಾರ್ಹ.

ನಿಯಮ ಏನು?
ಸರ್ಕಾರವು ಒದಗಿಸಿದ ಮಾಹಿತಿಯ ಪ್ರಕಾರ, ಈ ತಿದ್ದುಪಡಿಯು ಎನ್‌ಎಫ್‌ಎಸ್‌ಎ ಅಡಿಯಲ್ಲಿ ಉದ್ದೇಶಿತ ಸಾರ್ವಜನಿಕ ವಿತರಣಾ ವ್ಯವಸ್ಥೆಯ (ಟಿಪಿಡಿಎಸ್) ಕಾರ್ಯಾಚರಣೆಗಳ ಪಾರದರ್ಶಕತೆಯನ್ನು ಸುಧಾರಿಸುವ ಮೂಲಕ ಕಾಯಿದೆಯ ಸೆಕ್ಷನ್ 12 ರ ಅಡಿಯಲ್ಲಿ ತೂಕದ ಆಹಾರ ಧಾನ್ಯವನ್ನು ಸುಧಾರಿಸುವ ಪ್ರಕ್ರಿಯೆಯನ್ನು ಮುಂದುವರಿಸುವ ಪ್ರಯತ್ನವಾಗಿದೆ. ವಾಸ್ತವದಲ್ಲಿ, ಪಡಿತರ ವಿತರಕರು ಕಡಿಮೆ ಆಹಾರ ಧಾನ್ಯಗಳ ತೂಕ ಮಾಡುವಾಗ ಸರಿಯಾಗಿ ತೂಕ ಮಾಡುವುದಿಲ್ಲ  ಎಂಬ ದೂರುಗಳು ಹಲವೆಡೆಯಿಂದ  ನಿರಂತರವಾಗಿ ಕೇಳಿಬಂದಿದ್ದವು. ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ (NFSA) ಅಡಿಯಲ್ಲಿ, ಸರ್ಕಾರವು ಪ್ರತಿ ವ್ಯಕ್ತಿಗೆ ಐದು ಕೆಜಿ ಗೋಧಿ ಮತ್ತು ಅಕ್ಕಿಯನ್ನು (ಆಹಾರ ಧಾನ್ಯಗಳು) ದೇಶದ ಸುಮಾರು 80 ಕೋಟಿ ಜನರಿಗೆ ಕ್ರಮವಾಗಿ ಕೆಜಿಗೆ 2-3 ರೂ.ಗಳ ಸಬ್ಸಿಡಿ ದರದಲ್ಲಿ ನೀಡುತ್ತಿದೆ ಎಂಬುದು ಇಲ್ಲಿ ಉಲ್ಲೇಖನೀಯ.

ಈ ಬದಲಾವಣೆಗಳು
ಆಹಾರ ಭದ್ರತೆ (ರಾಜ್ಯ ಸರ್ಕಾರಗಳ ನಿಯಮಗಳಿಗೆ ನೆರವು) ನಿಯಮಗಳು, 2015 ರ ಉಪ-ನಿಯಮಗಳು ಇಪಿಒಎಸ್ ಉಪಕರಣಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಲು ರಾಜ್ಯಗಳನ್ನು ಉತ್ತೇಜಿಸಲು ಮತ್ತು ಪ್ರತಿ ಕ್ವಿಂಟಾಲ್‌ಗೆ ರೂ.17.00 ಹೆಚ್ಚುವರಿ ಲಾಭದಿಂದ ಉಳಿತಾಯವನ್ನು ಉತ್ತೇಜಿಸಲು ನಿಯಮ (2)ರ ಉಪ ನಿಯಮ 7ಕ್ಕೆ ತಿದ್ದುಪಡಿ ಮಾಡಲಾಗಿದೆ. ಇದರ ಅಡಿಯಲ್ಲಿ, ಪಾಯಿಂಟ್ ಆಫ್ ಸೇಲ್ ಸಾಧನಗಳ ಖರೀದಿ, ಕಾರ್ಯಾಚರಣೆ ಮತ್ತು ನಿರ್ವಹಣೆಯ ವೆಚ್ಚಕ್ಕಾಗಿ ಒದಗಿಸಲಾದ ಹೆಚ್ಚುವರಿ ಮಾರ್ಜಿನ್ ನಿಂದ ಯಾವುದೇ ರಾಜ್ಯ / ಕೇಂದ್ರಾಡಳಿತ ಪ್ರದೇಶದಿಂದ ಉಳಿತಾಯ ಮಾಡಿದ್ದರೆ,ಅದನ್ನು ಎಲೆಕ್ಟ್ರಾನಿಕ್ ತೂಕದ ಮಾಪಕಗಳ ಖರೀದಿ, ಕಾರ್ಯಾಚರಣೆ ಮತ್ತು ನಿರ್ವಹಣೆಯೊಂದಿಗೆ ಹಂಚಿಕೊಳ್ಳಬಹುದು ಎನ್ನಲಾಗಿದೆ. ಈ ಎರಡನ್ನೂ  ಏಕೀಕರಣಕ್ಕಾಗಿ ಬಳಸಲಾಗುತ್ತಿದೆ. ಅಂದರೆ, ಫಲಾನುಭವಿಗಳಿಗೆ ಸಂಪೂರ್ಣ ಪಡಿತರವನ್ನು ತಲುಪಿಸಲು ಸರ್ಕಾರ ಇದೀಗ ಕಟಿಬದ್ಧಾಗಿದೆ ಎಂದರೆ ತಪ್ಪಾಗಲಾರದು.