ಚನ್ನಗಿರಿ: ಮಣ್ಣು ಮುಕ್ಕ ಹಾವು ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಅರಣ್ಯ ಇಲಾಖೆ ಸಂಚಾರಿ ಪೊಲೀಸರು ಬಂಧಿಸಿದ್ದಾರೆ.

ಹುಬ್ಬಳಿ ಅರಣ್ಯ ಘಟಕದ ಡಿವೈಎಸ್ ಪಿ ಮುತ್ತಣ್ಣ ವಿ. ಸರಗೊಳ್ಳ ಅವರ ಮಾರ್ಗದರ್ಶನದಲ್ಲಿ ಪಿಎಸ್ ಐ ಮೇಘರಾಜ್ ಮತ್ತು ಸಿಬ್ಬಂದಿ ಕೈಮರ ವೃತ್ತದಲ್ಲಿ ಚೀಲದಲ್ಲಿ ಏನೋ ಹಿಡಿದುಕೊಂಡು ನಿಂತಿರುವುದನ್ನು ಕಂಡು ವಿಚಾರಿಸಲು ಹೋಗದಾಗ ಇಬ್ಬರು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಆಗ ಒಬ್ಬ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದು,‌ ಕೈಯಲ್ಲಿದ್ದ ಚೀಲ ಪರಿಶೀಲಿಸಿದ್ದಾಗ ಮಣ್ಣು ಮುಕ್ಕ ಹಾವು ಪತ್ತೆಯಾಗಿದೆ. ಇನ್ನೊಬ್ಬ ಪರಾರಿ ಆಗಿದ್ದಾನೆ.

ಆರೋಪಿಗಳು ಶಿವಮೊಗ್ಗ ತಾಲ್ಲೂಕಿನ ಮಹ್ಮದ್ ಯೂಸೂಫ್ , ಮಿಥುನ್ ಎಂದು ಗುರುತಿಸಲಾಗಿದೆ