ಇಂದು ಕಲ್ಪತರು ನಾಡಿನಲ್ಲಿ ಜೆಡಿಎಸ್ ರಥಯಾತ್ರೆ ಸಂಚರಿಸಲಿದೆ.10 ಕ್ಷೇತ್ರದಲ್ಲಿ 10 ದಿನ ಸಾಗಲಿರುವ ಯಾತ್ರೆ ಜಿಲ್ಲೆಯಲ್ಲಿ ಕುಸಿಯುತಿದ್ದ ಜೆಡಿಎಸ್ ಗೆ ಉಸಿರಾಗಲಿದೆ ಎಂಬ ಆಶಾಭಾವನೆ ಮೂಡಿದೆ..

  • ಜಿಲ್ಲೆಯಲ್ಲಿ ಕುಸಿಯುತಿದ್ದ ಜೆಡಿಎಸ್ ಗೆ  ಉಸಿರಾಗಲಿದೆಯಾ ಕುಮಾರಣ್ಣರ ಯಾತ್ರೆ
  • 10 ದಿನ 10 ಕ್ಷೇತ್ರದಲ್ಲಿ ಸಂಚರಿಸಲಿರುವ ರಥ
  • ಕಲ್ಪತರುನಾಡು ತುಮಕೂರು ಜೆ.ಡಿ.ಎಸ್ ಭದ್ರಕೋಟೆ ಎಂದೇ ಹೇಳಲಾಗುತಿತ್ತು

ತುಮಕೂರು: ಇಂದಿನಿಂದ ಕಲ್ಪತರು ನಾಡಿನಲ್ಲಿ ಜೆಡಿಎಸ್ ರಥಯಾತ್ರೆ ಸಂಚರಿಸಲಿದೆ.10 ಕ್ಷೇತ್ರದಲ್ಲಿ 10 ದಿನ ಸಾಗಲಿರುವ ಯಾತ್ರೆ ಜಿಲ್ಲೆಯಲ್ಲಿ ಕುಸಿಯುತಿದ್ದ ಜೆಡಿಎಸ್ ಗೆ ಉಸಿರಾಗಲಿದೆ ಎಂಬ ಆಶಾಭಾವನೆ ಮೂಡಿದೆ..

ಕಲ್ಪತರು ನಾಡು ತುಮಕೂರು ಜೆ.ಡಿ.ಎಸ್ ಭದ್ರಕೋಟೆ ಎಂದೇ ಹೇಳಲಾಗುತಿತ್ತು..ಆದರೆ ಇತ್ತಿಚಿನ ದಿನಗಳಲ್ಲಿ ಜೆ.ಡಿ.ಎಸ್ ಪ್ರಭಾವ ಜಿಲ್ಲೆಯಲ್ಲಿ ತಗ್ಗಿದೆ. ಬಿಜೆಪಿ ಪ್ರಾಬಲ್ಯ ಮೆರೆದಿದೆ. ೧೧ ಕ್ಷೇತ್ರದಲ್ಲಿ ಕೇವಲ ಮೂರು ಶಾಸಕರು ಮಾತ್ರ ಜೆಡಿಎಸ್ ನವರು..ಅದರಲ್ಲೂ ಗುಬ್ಬಿ ಶಾಸಕ ಶ್ರೀನಿವಾಸ್ ಪಕ್ಷದಿಂದ ಉಚ್ಛಾಟನೆಗೊಂಡಿದ್ದಾರೆ‌.. ಆ ಮೂಲಕ ಜೆಡಿಎಸ್ ಪ್ರಭಾವ ಮತ್ತಷ್ಟು ಕುಸಿದಿದೆ.. ತಿಪಟೂರು, ಶಿರಾದಲ್ಲಿ  ಸೂಕ್ತ ನಾಯಕರೇ ಇಲ್ಲದೇ ಕಾರ್ಯಕರ್ತರು ವಿಚಲಿತರಾಗಿದ್ದಾರೆ.. ಇಡೀ ಜಿಲ್ಲೆಯಲ್ಲಿ ಪಕ್ಷವನ್ನು ಮುನ್ನಡೆಸಿಕೊಂಡು ಹೋಗುವ ಸೂಕ್ತ ನಾಯಕನಿಲ್ಲದೇ ನಾವಿಕನಿಲ್ಲದ ದೋಣಿಯಂತಾಗಿದೆ ಜೆ.ಡಿಎಸ್ ಸ್ಥಿತಿ. ಇಂಥಹ ಸಂದರ್ಭದಲ್ಲಿ ನಾಳೆ ಪಂಚರತ್ನ ಯೋಜನೆ ಹೊತ್ತು ಬರುತ್ತಿರುವ ರಥಯಾತ್ರೆ ಹೊಸದೊಂದು ಅಶಾಕಿರಣ ಮೂಡಿಸಿದೆ..

ಇಂದು ತುಮಕೂರು ನಗರ ಕ್ಷೇತ್ರದಲ್ಲಿ ರಥಯಾತ್ರೆ ಸಂಚರಿಸಲಿದೆ.ಬೆಳಗ್ಗೆ 9ಕ್ಕೆ ಸಿದ್ದಗಂಗಾ ಮಠದಿಂದ ರಥಯಾತ್ರೆ ಆರಂಭವಾಗಲಿದೆ.. ನಗರದಲ್ಲಿ ಸುಮಾರು ೮ ಸ್ಥಳಗಳಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಭಾಷಣ- ಸಂವಾದ ಮಾಡಲಿದ್ದಾರೆ.. ರಾತ್ರಿ ದಿಬ್ಬೂರಿನ ದಲಿತರ ಮನೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಹೀಗೆ ಹತ್ತು ದಿನಗಳ ಕಾಲ ಜಿಲ್ಲೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ರಥಯಾತ್ರೆಯ ೧೦ ದಿನಗಳಲ್ಲೂ ಪಕ್ಷದಲ್ಲಿನ ಹತ್ತು ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ಲಾನ್ ನಡೆದಿದೆ. ಶಿರಾ ತಿಪಟೂರು ಕ್ಷೇತ್ರದಲ್ಲಿ ಸೂಕ್ತ ನಾಯಕರಿಲ್ಲದೇ ಪಕ್ಷ ನೆಲಕಚ್ಚಿದೆ.. ಇತ್ತ ತುಮಕೂರು ನಗರದಲ್ಲಿ ಟಿಕೆಟ್ ಗಾಗಿ ಸಮಾಜ ಸೇವಕ ಗೋವಿಂದ ರಾಜು ಹಾಗೂ ಅಟ್ಟಿಕಾ ಬಾಬು ನಡುವೆ ಫೈಟ್ ಜೋರಾಗಿದೆ.ಪಂಚರತ್ನ ಯಾತ್ರೆಯ ಸಂಪೂರ್ಣ ಜವಾಬ್ದಾರಿ ಹೊತ್ತಿರುವ ಗೋವಿಂದರಾಜು ನೂರಕ್ಕೆ ನೂರು ತಮಗೆ ಟಿಕೆಟ್ ಸಿಗಲಿದೆ ಎಂಬ ವಿಶ್ವಾಸವ್ಯಕ್ತಪಡಿಸುತ್ತಾರೆ.

ಕಾಂಗ್ರೆಸ್ ಮತ್ತು ಬಿಜೆಪಿಗೆ ಪಕ್ಷ ಸಂಘಟನೆ ಹೋಲಿಸಿಕೊಂಡರೇ ಜೆಡಿಎಸ್ ತೀರಾ ಹಿಂದೆ ಉಳಿದಿದೆ.. ಜೆಡಿಎಸ್ ನ ನಿಷ್ಠಾವಂತ ಕಾರ್ಯಕರ್ತರು ಕೂಡ ಪಕ್ಷ ಮುನ್ನಡೆಸುವ ಸೂಕ್ತ ನಾಯಕರಿಲ್ಲದೇ ಪಕ್ಷ ತೊರೆಯುತಿದ್ದಾರೆ..ಈ ನಡುವೆ ಜಿಲ್ಲೆಗೆ ಲಗ್ಗೆ ಇಡುತ್ತಿರುವ ಪಂಚರತ್ನ ರಥಯಾತ್ರೆ ಜೆ.ಡಿ.ಎಸ್. ಗೆ ಬೂಸ್ಟರ್ ಡೋಸ್ ಕೊಡಲಿದ್ದು ಮತ್ತೇ ಪುಟಿದೇಳಲಿದೆ ಎಂದು ದಳಪತಿಗಳು ವಿಶ್ವಾಸದಿಂದಿದ್ದಾರೆ