ಸಕಲೇಶಪುರ: ಸಕಲೇಶಪುರ ತಾಲೂಕು ಬಾಳ್ಳುಪೇಟೆ, ಅಯೋಧ್ಯಾ ನಗರದ ಸಮುದಾಯ ಭವನದಲ್ಲಿ ಜಿಲ್ಲಾ ಮೊಗೇರ ಸಂಘ (ರಿ) ಹಾಸನ ಮತ್ತು ಮೊಗೇರ ಯುವ ವೇದಿಕೆ ಇವರ ವತಿಯಿಂದ ವ್ಯಕ್ತಿತ್ವ ವಿಕಸನ ಶಿಬಿರ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಬೆಳಿಗ್ಗೆ 10:30 ರ ಸಮಯಕ್ಕೆ ಪ್ರಾರಂಭವಾದ ವ್ಯಕ್ತಿತ್ವ ವಿಕಸನ ಶಿಬಿರದಲ್ಲಿ ತಾಲೂಕಿನಾದ್ಯಂತ ಮೊಗೇರ ಸಮುದಾಯದ ಬಂಧುಗಳು ಭಾಗಿಯಾಗಿ ವ್ಯಕ್ತಿತ್ವ ವಿಕಸನದ ಬಗ್ಗೆ ತರಬೇತಿ ಮತ್ತು ವಿಚಾರ ಸಂಕಿರಣವನ್ನು ನಡೆಸಿದರು. ಈ ತರಬೇತಿಯಲ್ಲಿ ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ಮತ್ತು ಮಹಿಳೆಯರು ಸೇರಿದಂತೆ ವಯಸ್ಕರು, ಪುರುಷರು ಭಾಗಿಯಾಗಿದ್ದರು.
ಅಶೋಕ್ ಕೊಂಚಾಡಿ ಮಾತನಾಡಿ 17 ಬಾರಿ ಚಪ್ಪಾಳೆ ಹಾಕುವುದರಿಂದ ನಮ್ಮ ದೇಹಕ್ಕೆ ಉತ್ತೇಜನ ಹಾಗೂ ರಕ್ತ ಸಂಚಲನಕ್ಕೆ ಅನುಕೂಲ ಮತ್ತು ಈ ಚಪ್ಪಾಳೆ ನಮ್ಮ ಮೊಗೇರ ಸಮುದಾಯದ ಒಗ್ಗಟ್ಟಿನ ಸಂಕೇತ ಎಂದರು ಹಾಗೆಯೇ ಸಂಘ ಮತ್ತು ಸಂಘಟನೆ ಇವೆರಡರ ವ್ಯತ್ಯಾಸವನ್ನು ಬಹಳ ಅಚ್ಚುಕಟ್ಟಾಗಿ ವಿವರಿಸಿದರು. ಸಂಘಕ್ಕಿಂತಲೂ ಸಂಘಟನೆ ಬಹಳ ಮಹತ್ವದ ಪಾತ್ರ ವಹಿಸುತ್ತದೆ ಅದು ಹೇಗಂದರೆ ಸಂಘಟನೆ ಎಂಬುದು ಸಮುದಾಯದ ಪರವಾಗಿ ಕೆಲಸ ನಿರ್ವಹಿಸುವಂತಹ ಪ್ರವೃತ್ತಿಯನ್ನು ಬೆಳೆಸಿಕೊಂಡಿರುತ್ತದೆ ಎಂದರು ಸಂಘಟನೆ ಎಂದರೆ ನಮ್ಮ ಸಮುದಾಯದ ಜನರಿಗೆ ಅನ್ಯಾಯ ಅಕ್ರಮ ದೌರ್ಜನ್ಯ ನಡೆದರೆ ಅದನ್ನು ತಡೆಯುವಲ್ಲಿ ಸಂಘಟನೆಯ ಪಾತ್ರ ಬಹಳ ಮುಖ್ಯ ಎಂದರು ಹಾಗೆಯೇ ಯಾವ ಒಬ್ಬ ವ್ಯಕ್ತಿಯನ್ನು ಟೀಕೆ ಮಾಡುವ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬಾರದು ಎಂದರು ಎಲ್ಲದಕ್ಕಿಂತ ಮುಖ್ಯವಾಗಿ ನಮಗೆ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳು ಬಹಳ ಅತಿ ಮುಖ್ಯ ಎಂದು ಹೇಳುತ್ತಾ ಪ್ರತಿಯೊಬ್ಬ ವಿದ್ಯಾರ್ಥಿಯು ಪುಸ್ತಕ ಮತ್ತು ಪೆನ್ನು ಹಿಡಿಯುವುದರಿಂದ ನಮ್ಮ ಸಂವಿಧಾನದ ಮೂಲಭೂತ ಹಕ್ಕುಗಳನ್ನು ಪಡೆಯಬಹುದು ಎಂದು ಉಪನ್ಯಾಸ ನೀಡಿದರು.
ಸೀತಾರಾಮ್ ಕೊಂಚಾಡಿ ಮಾತನಾಡಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಕೊಟ್ಟಂತಹ ಸಂವಿಧಾನ ಇಡೀ ವಿಶ್ವದಲ್ಲೇ ಮಹತ್ವಪೂರ್ಣವಾದ ಮೊದಲನೆಯ ಗ್ರಂಥ ಎಂದರು. ಸಂವಿಧಾನ ಎಂಬ ಗ್ರಂಥವನ್ನು ನಾವುಗಳಾದ ಮೊಗೇರ ಸಮುದಾಯದ ದಲಿತರು ಪಾಲಿಸಬೇಕು, ಪಾಲಿಸದಿದ್ದಲ್ಲಿ ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಸಾಧ್ಯವಿಲ್ಲ ಎಂದರು. ವೇದಿಕೆಯನ್ನು ಉದ್ದೇಶಿಸಿ ಸಮಾಜ ಸೇವಕ ಹಾಗೂ ಬಿಜೆಪಿ ಮುಖಂಡರಾದ ಸಿಮೆಂಟ್ ಮಂಜು ಮಾತನಾಡಿ ಹಲವಾರು ಅನುಕೂಲಗಳು ಹಾಗೂ ಸೌಕರ್ಯಗಳಿವೆ ಆದರೆ ಆ ಸೌಲಭ್ಯಗಳನ್ನು ಯಾವ ರೀತಿ ಪಡೆದುಕೊಳ್ಳಬೇಕು ಎಂಬುದು ಮುಖ್ಯ, ಆದಕಾರಣ ಇಂತಹ ಕಾರ್ಯಕ್ರಮಗಳಲ್ಲಿ ಬಾಬಾ ಸಾಹೇಬರ ವಿಚಾರಧಾರೆ ಮತ್ತು ಅರಿವು ಮೂಡಿಸುವ ನಿಟ್ಟಿನಲ್ಲಿ ಸಮುದಾಯದ ಜನರಿಗೆ ತಲುಪಿಸುವ ಇಂತಹ ಸಂಘಟನೆಗಳು ಅನಿವಾರ್ಯ ಎಂದರು.
ಇದೇ ಸಂದರ್ಭದಲ್ಲಿ ದ್ವಿತೀಯ ಪಿಯುಸಿ ಹಾಗೂ ಎಸ್ ಎಸ್ ಎಲ್ ಸಿ ಯಲ್ಲಿ 75% ಅಂಕಗಳನ್ನು ಪಡೆದು ಉತ್ತೀರ್ಣರಾದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಹಾಗೂ ನೆನಪಿನ ಕಾಣಿಕೆ ನೀಡಲಾಯಿತು. ಹಾಗೆಯೇ ಜಿಲ್ಲಾ ಹಾಗೂ ರಾಜ್ಯಮಟ್ಟದ ಕ್ರೀಡೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿ ನೆನಪಿನ ಕಾಣಿಕೆ ನೀಡಲಾಯಿತು.
ಈ ಸಂದರ್ಭದಲ್ಲಿ ವೇದಿಕೆ ಮೇಲೆ ಶ್ರೀ ಕೃಷ್ಣ ಕಾಟೇಹಳ್ಳಿ ಜಿಲ್ಲಾಧ್ಯಕ್ಷರು. ಶ್ರೀ ಅಣ್ಣಪ್ಪ ಸಂಸ್ಥಾಪಕ ಅಧ್ಯಕ್ಷರು, ಶ್ರೀ ಅಶೋಕ್ ಕೊಂಚಾಡಿ, ಸಲಹೆಗಾರರು ಹಾಗೂ ಸಂಘಟನೆಕಾರರು ಮಂಗಳೂರು. ಶ್ರೀ ಸೀತಾರಾಮ್ ಕೊಂಚಾಡಿ, ಅಂಬೇಡ್ಕರ್ ರಾಷ್ಟ್ರೀಯ ಪುರಸ್ಕೃತರು ಮಂಗಳೂರು. ಶ್ರೀ ವಿಜಯ್ ವಿಕ್ರಂ. ಲೇಖಕರು ಶ್ರೀ ಆದಿ ನಾಗಬ್ರಹ್ಮ ಮೊಗೆರ್ಕಳ ಚರಿತ್ರೆ ಮತ್ತು ಉಪ ತಹಸಿಲ್ದಾರ್ ವಿಟ್ಲ. ಶ್ರೀ ನಂದರಾಜ್ ಸಂಕೇಶ್. ಜ್ಯೋತಿಬಾಪುಲೆ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು. ಸಮಾಜ ಸೇವಕ ಹಾಗೂ ಬಿಜೆಪಿ ಮುಖಂಡರಾದ ಸಿಮೆಂಟ್ ಮಂಜು, ಶ್ರೀ ಜಯಪ್ರಕಾಶ್. ಮಾಲೀಕರು ಮಹಾತ್ಮ ಗಾಂಧಿ ಪೆಟ್ರೋಲ್ ಬಂಕ್ ಬಾಗೆ ಹಾಗೂ ಸಮುದಾಯದ ಮುಖಂಡರು, ಮಹಿಳೆಯರು, ವಿದ್ಯಾರ್ಥಿಗಳು ಸಾರ್ವಜನಿಕರು ಭಾಗಿಯಾಗಿದ್ದರು.
ವರದಿ: ಕುಮಾರ್ K K ವಾಟೇಹಳ್ಳಿ

