ಸಕಲೇಶಪುರ: – ಮಠಸಾಗರದ ಕೃಷ್ಣಾಪುರ ರಸ್ತೆಯ ಗುದ್ದಲಿ ಪೂಜೆಯನ್ನು ಶಾಸಕ ಹೆಚ್.ಕೆ. ಕುಮಾರಸ್ವಾಮಿ ನೇರವೇರಿಸಿದರು.

ಸಕಲೇಶಪುರ ತಾಲ್ಲೂಕಿನ ಮಠಸಾಗರ ಕೃಷ್ಣಾಪುರದ ರಸ್ತೆಯು ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು, ಇಂದು ರಸ್ತೆಯ ಕಾಮಗಾರಿಗೆ ಮೂಹೂರ್ತ ಕೂಡಿ ಬಂದಿರುವುದು ಕೃಷ್ಣಾಪುರ ಜನತೆಗೆ ಸಂತಸ ತಂದಿದೆ.

ಗುದ್ದಲಿ ಪೂಜೆ ನೇರವೇರಿಸಿ ಮಾತನಾಡಿದ ಶಾಸಕ ಹೆಚ್.ಕೆ. ಕುಮಾರಸ್ವಾಮಿ ರಸ್ತೆ ಕಾಮಗಾರಿಗಾಗಿ 90 ಲಕ್ಷ ರೂಪಾಯಿ ಅನುದಾನ ಸರ್ಕಾರ ಬಿಡುಗಡೆ ಮಾಡಿದೆ ಎಂದರು. ಒಟ್ಟು 1.50 ಕೀ. ಮೀಟರ್ ಉದ್ದದ ರಸ್ತೆ ಕಾಮಗಾರಿಗಾಗಿ ಈ ಅನುದಾನ ಮಂಜೂರು ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಶಾಸಕರಾದ ಹೆಚ್. ಕೆ. ಕುಮಾರಸ್ವಾಮಿ. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಚಂಚಲ ಕುಮಾರಸ್ವಾಮಿ. ಮಳಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ್ ಶೆಟ್ಟಿ. ಪಂಚಾಯಿತಿ ಸದಸ್ಯ ಮದನ್. ಮಾಜಿ ಅಧ್ಯಕ್ಷ ರಘು. ಹೈದರ್, ಜಾನ್ ಮಠಸಾಗರ. ಯೋಗಿಶ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ವರದಿ: ಕುಮಾರ್ K K ವಾಟೇಹಳ್ಳಿ