ವಿಧಾನ ಪರಿಷತ್ ಸದಸ್ಯ (MLC) ಹಾಗೂ ಬಿಜೆಪಿ (BJP) ರಾಜ್ಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ರವಿಕುಮಾರ್ (Ravikumar) ಅವರ ಕಾರು ಬೈಕ್‌ವೊಂದಕ್ಕೆ ಡಿಕ್ಕಿ ಹೊಡೆದಿರುವ ಘಟನೆ ಕೋಲಾರದ (Kolar) ತಾಲ್ಲೂಕಿನ ಲಕ್ಷ್ಮೀ ಸಾಗರ ಗೇಟ್ ರಾಷ್ಟ್ರೀಯ ಹೆದ್ದಾರಿ-75 (National Highway) ರಲ್ಲಿ ನಡೆದಿದೆ.

ಘಟನೆಯಲ್ಲಿ ಹೊಸಕೋಟೆ ತಾಲ್ಲೂಕಿನ ಗೋಪಾಲ್(45) ಗಾಯಗೊಂಡಿದ್ದಾರೆ. ಆದ್ರೆ, ಗಾಯಳುವನ್ನು ಆಸ್ಪತ್ರೆಗೆ ಸೇರಿಸಲು ಹಿಂದೇಟು ಹಾಕಿದ್ದರಿಂದ ರೊಚ್ಚಿಗೆದ್ದ ಸ್ಥಳೀಯರು ಎಂಎಲ್‌ಸಿ ರವಿಕುಮಾರ್‌ಗೆ ಫುಲ್‌ಕ್ಲಾಸ್ ತೆಗೆದುಕೊಂಡಿದ್ದಾರೆ. ನೀನ್ಯಾವ ಸೀಮೆ ಎಂಎಲ್‌ಸಿ ಎಂದು ಹರಿಹಾಯ್ದಿದ್ದಾರೆ. 

ಹೊಸಕೋಟೆ ತಾಲ್ಲೂಕಿನ ಶಿವನಾಪುರ ಗ್ರಾಮದ ಗೋಪಾಲ್, ಬೈಕ್‌ನಲ್ಲಿ ಕೋಲಾರಕ್ಕೆ ತೆರಳುತ್ತಿದ್ದರು. ಅದೇ ಮಾರ್ಗವಾಗಿ ಎಂಎಲ್‌ಸಿ ರವಿಕುಮಾರ್ ಕೋಲಾರಕ್ಕೆ ಆಗಮಿಸುತ್ತಿದ್ದ ವೇಳೆ ಅಪಘಾತ (Road Accident) ಸಂಭವಿಸಿದೆ. ಬಳಿಕ ಗಾಯಾಳುವನ್ನು ಆಸ್ಪತ್ರೆಗೆ (Hospital) ಸೇರಿಸಲು ಹಿಂದೇಟು ಹಾಕಿದ್ದರಿಂದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಸ್ಥಳೀಯರ ಆಕ್ರೋಶ ಕಂಡು ಎಂಎಲ್‌ಸಿ ರವಿಕುಮಾರ್ ದಂಗಾಗಿದ್ದಾರೆ. ನಂತರ ಸ್ಥಳಕ್ಕೆ ವೇಮಗಲ್ ಪೋಲೀಸರು ಭೇಟಿ ನೀಡಿ ಸ್ಥಳೀಯರನ್ನ ಸಮಾಧಾನಪಡಿಸಿದ್ದಾರೆ. ಗಾಯಾಳುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೇಮಗಲ್ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ