ಹಾಸನ: ಬೇಲೂರು ತಾಲೂಕು ವಿಧಾನಸಭಾ ಕ್ಷೇತ್ರದ ಬಿಜೆಪಿ ಆಕಾಂಕ್ಷಿ ಕೇವಲ ಗಂಗಾ ಪೂಜೆ ಮತ್ತು ಅರತಕ್ಷತೆ ಹಾಗೂ ಮದುವೆ ಸಮಾರಂಭಗಳಿಗೆ ಭೇಟಿ ಕೊಡುವುದು ಬಿಟ್ಟರೆ ಜನಸಾಮಾನ್ಯರ ಕುಂದು ಕೊರತೆಗಳಿಗೆ ಸ್ಪಂದಿಸದೆ ಆಕಾಂಕ್ಷಿಯಾಗಿ ಬಿಜೆಪಿ ನಾಯಕರ ಮನ್ನಣೆಗೆ ಪಾತ್ರರಾಗಿ, ದೀನ ದಲಿತರ, ಬಡವರ, ಕೂಲಿಕಾರ್ಮಿಕರ, ರೈತರ ಪರವಾದ ಕಾರ್ಯಕ್ರಮಗಳಿಗೆ ಭಾಗಿಯಾಗದಿರುವುದು ಬಿಜೆಪಿ ಅಭಿಮಾನಿಗಳಲ್ಲಿ ಅಸಾಮಧಾನ ಉಂಟು ಮಾಡಿದೆ. ದಿನನಿತ್ಯ ಶಾಲೆಗೆ ಓಡಾಡುವ ಮಕ್ಕಳ ಮತ್ತು ಸಾರ್ವಜನಿಕರ ಓಡಾಟಕ್ಕೆ ತೊಂದರೆ ಆಗುತ್ತಿರುವ ( KSRTC) ಸಾರಿಗೆ ಸಂಸ್ಥೆಯ ಬಗ್ಗೆ ವಿದ್ಯಾರ್ಥಿಗಳಿಂದ ಹಲವಾರು ಪ್ರತಿಭಟನೆ ನಡೆದರು ಸ್ಪಂದಿಸದೆ ಕೇವಲ ಟಿಕೇಟಿಗಾಗಿ ಹಂಬಲಿಸುತ್ತಿರುವ ಆಕಾಂಕ್ಷಿ ಕೊರಟಗೆರೆ ಪ್ರಕಾಶ್ ರವರು ಇನ್ನು ಮುಂದೆಯಾದರೂ ಅರಿತು ಜನರ ಸ್ಪಂದನೆಗೆ ತಾಲೂಕಿನಾದ್ಯಂತ ಎಲ್ಲಾ ಜನರ ಕಷ್ಟ ಸುಖಗಳಿಗೆ ಭಾಗಿಯಾದರೆ ನಿಮ್ಮೆಲ್ಲ ಅಭಿಮಾನಿಗಳ ಸಮ್ಮತವಿದೆ ಎಂದು ಅಭಿಮಾನಿಗಳ ಅಭಿಪ್ರಾಯ.

ಜಿಲ್ಲಾ ವರದಿಗಾರ – ಕುಮಾರ್ K K ವಾಟೇಹಳ್ಳಿ