ಕಳ್ಳತನ ಪ್ರಕರಣದಲ್ಲಿ ವಿಚಾರಣೆಗಾಗಿ ಜಯನಗರ ಪೊಲೀಸ್ ಠಾಣೆಗೆ ಹೋಗಿದ್ದ ಗಾರೆ ಕಾರ್ಮಿಕ ಶವವಾಗಿ ಪತ್ತೆಯಾಗಿದ್ದಾರೆ. ಪೊಲೀಸರ ಥಳಿತದಿಂದ ಮೃತಪಟ್ಟಿದ್ದಾರೆಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ತುಮಕೂರು: ಸೈಕಲ್ ಕಳ್ಳತನ ಪ್ರಕರಣದಲ್ಲಿ ವಿಚಾರಣೆಗಾಗಿ ಜಯನಗರ ಪೊಲೀಸ್ ಠಾಣೆಗೆ ಹೋಗಿದ್ದ ಗಾರೆ ಕಾರ್ಮಿಕ ಶವವಾಗಿ ಪತ್ತೆಯಾಗಿದ್ದಾರೆ. ತುಮಕೂರಿನ ಶೆಟ್ಟಿಹಳ್ಳಿ ಬಳಿಯ ನಾಯಕರ ಬೀದಿಯ ನಿವಾಸಿ ಹನುಮಂತರಾಯಪ್ಪ(58) ಮೃತ ದುರ್ದೈವಿ. ಇವರು ತುಮಕೂರಿನ ಜಯನಗರ ಪೊಲೀಸರ ಥಳಿತದಿಂದ ಮೃತಪಟ್ಟಿದ್ದಾರೆಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಈತ ಗಾರೆ ಕೆಲಸ ಮಾಡಿಕೊಂಡಿದ್ದು ಸೈಕಲ್ ಕಳ್ಳತನ ವಿಚಾರಕ್ಕೆ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಹೀಗಾಗಿ ಪೊಲೀಸರು ಶನಿವಾರ ರಾತ್ರಿ 10 ಗಂಟೆಗೆ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿ ಮಧ್ಯರಾತ್ರಿ 12.30 ಕ್ಕೆ ಬಿಟ್ಟು ಕಳಿಸಿದ್ದರು. ಬಳಿಕ ನಿನ್ನೆ ಸಂಜೆ 5 ಗಂಟೆಗೆ ಸಿವಿಲ್ ಡ್ರೇಸ್ ಹಾಗೂ ಯುನಿಪಾರ್ಮ್ ನಲ್ಲಿ ಬಂದಿದ್ದ ಇಬ್ಬರು ಪೊಲೀಸರು ಬೈಕ್ನಲ್ಲಿ ಮತ್ತೆ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಬಳಿಕ ಸಂಜೆ 6.30 ಸುಮಾರಿಗೆ ಪುನಃ ವಾಪಸ್ ಶೆಟ್ಟಿಹಳ್ಳಿ ರಿಂಗ್ ರಸ್ತೆ ಬಳಿ ಆತನನ್ನು ಬಿಟ್ಟು ಹೋಗಿದ್ದಾರೆ. ಪೊಲೀಸರೆ ಕಿರುಕುಳ ಕೊಟ್ಟು ಕೊಲೆ ಮಾಡಿದ್ದಾರೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇದಾದ ಬಳಿಕವೂ 112 ಗೆ ಕರೆ ಮಾಡಿದ್ರೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿಲ್ಲ ಅನ್ನೋ ಆರೋಪ ಕೇಳಿಬಂದಿದೆ. ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ

