ಸಕಲೇಶಪುರ: – ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ವತಿಯಿಂದ ಏರ್ಪಡಿಸಿದ್ದ ವಿಶ್ವ ಮಣ್ಣು ದಿನಾಚರಣೆಯನ್ನು ಸಕಲೇಶಪುರದ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮವು ಸಕಲೇಶ್ವರ ಸ್ವಾಮಿ ದೇವಸ್ಥಾನದಿಂದ ಬೃಹತ್ ಮೆರವಣಿಗೆ ಮೂಲಕ ಸಾಗಿ ಕಾರ್ಯಕ್ರಮ ಮುಂದುವರೆದಂತೆ ” ಮಣ್ಣೇ ಹೊನ್ನು” ಮುಂದಿನ ಪೀಳಿಗೆಗೆ ಉದ್ಘಾಟನೆ ಸಮಾರಂಭ ಮಾಡಿದರು.

ಮುಂದುವರೆದಂತೆ ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಅಧ್ಯಕ್ಷರಾದ ಕೆ. ಸುಬ್ರಹ್ಮಣ್ಯ ರವರು ಸರ್ವಜ್ಞ ವಚನದ ಮೂಲಕ ಪ್ರಾಸ್ತಾವಿಕ ನುಡಿ ನುಡಿದರು. ಹಾಸನ ಜಿಲ್ಲಾ ಮಾಜಿ ಅಧ್ಯಕ್ಷರಾದ H.H. ಉದಯರವರು ಮಾತನಾಡಿ ಹಾಸನದಲ್ಲಿ ಮಣ್ಣು ಪರೀಕ್ಷೆ ಘಟಕ ಇರಲಿಲ್ಲ, ಆದರೆ ಈ ಮಣ್ಣು ಪರೀಕ್ಷೆ ಘಟಕದಿಂದ ಕಾಪಿ ಬೆಳೆಗಾರರಿಗೆ ಅನುಕೂಲ ಆಗುವುದು ಎಂಬ ಮನೋಭಾವನೆಯಿಂದ ಹಟ ಹಿಡಿದು ಕಷ್ಟ ಪಟ್ಟು ನನ್ನ ಅವಧಿಯಲ್ಲಿ ಮಣ್ಣು ಪರೀಕ್ಷೆ ಘಟಕ ತಂದಿರುವುದು ನನಗೆ ಹೆಮ್ಮೆ ಮತ್ತು ಸಂತಸ ತಂದಿದೆ ಎಂದರು. ಇದೇ ಸಂದರ್ಭದಲ್ಲಿ ಉದಯ್ ಮತ್ತು ದಂಪತಿಗೆ ಸನ್ಮಾನ ಮಾಡಲಾಯಿತು. ಶ್ರೀ ಪ್ರಕಾಶ್ ಸಂಬರಗಿ ರವರು 7 ಕಾಫಿ ಬೀಜದ ಏಳು ಬೀಳಿನ ಚಕ್ರ ಎಂಬ 7 ಪುಸ್ತಕಗಳನ್ನು ಬಿಡುಗಡೆ ಮಾಡಿ, ಮಾತನಾಡಿದ ಅವರು ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಈ ಒಂದು ವಿಶಿಷ್ಟ ಆಚರಣೆ ನನಗೆ ತುಂಬಾ ಖುಷಿ ತಂದಿದೆ ಎಂದರು. ಮೀನಿಗೆ ನೀರಿನಲ್ಲಿ ಈಜಲು ಗೋತ್ತೋ ಹಾಗೆ ರೈತರೇನು ದಡ್ಡರಲ್ಲ ರೈತರಿಗೆ ಈ ಭೂಮಿಯಲ್ಲಿ ಬೆಳೆ ಬೆಳೆಯಲು ತಿಳಿದುಕೊಂಡರೆ ಆತ್ಮಹತ್ಯೆ ಕಡಿಮೆ ಮಾಡಬಹುದು ಎಂದರು.

ದೇಶದಲ್ಲಿ 40 ರಿಂದ 45 ರೈತರು ಆತ್ಮಹತ್ಯೆ ಮಾಡಿ ಕೊಳ್ಳುತ್ತಿದ್ದಾರೆ. ಕರ್ನಾಟಕದಲ್ಲೆ ಅತಿ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಈ ನಿಟ್ಟಿನಲ್ಲಿ ಕೃಷಿಕ ಶ್ರಮಪಟ್ಟು ಭೂಮಿಯಲ್ಲಿ ದುಡಿದರೆ ನಿರ್ಲೀಕ್ಷಿಸಿದಷ್ಟು ಸಂಪಾದಿಸಬಹುದು ಎಂದರು. ರಾಮಕೃಷ್ಣ ಪರಮರು ಮಾತನಾಡಿ ಸಂಶೋಧನೆಯ ಪ್ರಕಾರ ನಮ್ಮ ಕರ್ನಾಟಕದಲ್ಲಿ ಶೇ40/. ಮಣ್ಣು ಸವಕಳಿಯಾಗುತಿದೆ ಎಂದರು. ಪಿಹೆಚ್ ಮತ್ತು ಡ್ರಿಪ್ಸ್ ಸರ್ಕಲ್ ಬಳಸುವುದರ ಬಗ್ಗೆ ವಿವರಿಸಿ ಮಣ್ಣಿನ ಬಗ್ಗೆ ಪ್ರಾಯೋಗಿಕವಾಗಿ ದೃಶ್ಯದ ಮೂಲಕ ಸವಿಸ್ತಾರವಾಗಿ ತಿಳಿಸಿದರು.

ಥೈಲ್ಯಾಂಡ್ ರಾಜ ಭೂಮಿ ಬೋಲ್ ಎಂಬುವವರು Save Soil ಎಂಬ ಘೋಷಣೆ ಮೂಲಕ ಕೃಷಿಯಲ್ಲಿ ಪ್ರಖ್ಯಾತಿ ಪಡೆದು ವಿಶ್ವದ ಪಟ್ಟಿಯಲ್ಲಿ ಪ್ರಮುಖರಾಗಿದ್ದರಿಂದ ಅವರು ಹುಟ್ಟಿದ ಡಿಸೆಂಬರ್ 5 ನೇ ದಿನವನ್ನು ವಿಶ್ವ ಮಣ್ಣು ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದರು. ಶ್ರೀ ಸಿದ್ದೇಶ್ ನಾಗೇಂದ್ರ ರವರು ರೈತಭವನ ಎಂದೇ ಕರೆಯಲ್ಪಡುವ ಬಹು ದೊಡ್ಡ ಕಟ್ಟಡದ ನೀಲಿ ನಕ್ಷೆಯನ್ನು ಅನಾವರಣ ಮಾಡಿದರು. ಹಾಗೆ ಮಾತನಾಡುತ್ತಾ ನಾನು ನನ್ನ ಪೂಜ್ಯ ತಂದೆಯಾದ ದಿವಂಗತ M S. ನಾಗೇಂದ್ರ ರವರ ಸ್ಮರಣಾರ್ಥವಾಗಿ 10 ಲಕ್ಷ ರೂಪಾಯಿ ನೀಡುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಶ್ರೀ ಕೆ. ಸುಬ್ರಹ್ಮಣ್ಯ, ಅಧ್ಯಕ್ಷರು ಜಿಲ್ಲಾ ಪ್ಲಾಂಟರ್ಸ್ ಸಂಘ ಹಾಸನ. ಶ್ರೀ ರಾಜೀವ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಸನ. ಶ್ರೀ ಪ್ರಕಾಶ್ ಕಂಬರಗಿ, ಪ್ರಾಧ್ಯಾಪಕರು ಕೃಷಿ ವಿಜ್ಞಾನ ಕೇಂದ್ರ. ಶ್ರೀ ರಾಮಕೃಷ್ಣ ಪರಮರು, ಕೃಷಿ ವಿಜ್ಞಾನಿಗಳು. ಶ್ರೀ ಕೃಷ್ಣೇಗೌಡರು, ಪ್ರಾಧ್ಯಾಪಕರು ಹಾಗೂ ಹಾಸ್ಯ ಕಲಾವಿದರು. ಶ್ರೀ ಸಿದ್ದೇಶ್ ನಾಗೇಂದ್ರ, ರವರು ಸಮಾಜ ಸೇವಕರು. ಶ್ರೀ E.H. ಲಕ್ಮಣ,ರವರು ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಹಾಗೂ ಕಾಫಿ ಬೆಳೆಗಾರರು. ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು, ಮಹಿಳೆಯರು, ಬೆಳೆಗಾರರು ಉಪಸ್ಥಿತರಿದ್ದರು.

ಜಿಲ್ಲಾ ವರದಿಗಾರ – ಕುಮಾರ್ K K ವಾಟೇಹಳ್ಳಿ