ಸಕಲೇಶಪುರ: ಡಾ. ಬಾ ಬಾ ಸಾಹೇಬ್ ಅಂಬೇಡ್ಕರ್ ರವರ 66 ನೇ ಪರಿನಿಬ್ಬಾಣ ದಿನವನ್ನು ಪ/ಜಾತಿ ಮತ್ತು ವರ್ಗಗಳ ಒಕ್ಕೂಟ ವತಿಯಿಂದ ಹಮ್ಮಿಕೊಂಡಿದ್ದು. ಈ ಸಂದರ್ಭದಲ್ಲಿ ತಾಲೂಕಿನ ಹೃದಯ ಭಾಗದ ಹಳೆಯ ಬಸ್ ನಿಲ್ದಾಣದ ಬಳಿ ಇರುವ ಡಾ. ಬಾ ಬಾ ಸಾಹೇಬ್ ಅಂಬೇಡ್ಕರ್ ರವರ ಪ್ರತಿಮೆಗೆ ಮಾಜಿ ಶಾಸಕರು ಹಾಗೂ ದಲಿತ ಮುಖಂಡರು ಮಾಲಾರ್ಪಣೆ ಮಾಡಿದರು.
ಮಾಜಿ ಶಾಸಕರಾದ ಎಚ್ಎಂ ವಿಶ್ವನಾಥ್ ಮಾತನಾಡಿ ಅಂಬೇಡ್ಕರ್ ದೈಹಿಕವಾಗಿ ನಮ್ಮ ಜೊತೆ ಇಲ್ಲದೆ ಇದ್ದರೂ, ಜೀವಂತವಾಗಿ ನಮ್ಮ ಅಂತರಾಳದಲ್ಲಿ ಇದ್ದಾರೆ ಏಕೆಂದರೆ ಅವರು ಕೊಟ್ಟಂತಹ ಸಂವಿಧಾನ ಜಗತ್ತಿನೆಲ್ಲೆಡೆ ಬೇರೂರಿ ಪಸರಿಸಿದೆ ಆ ಬೇರನ್ನು ನಾಶಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದರು. ಹಾಗೆಯೇ ಮಹಾ ಪುರುಷರು ಹುಟ್ಟುತ್ತಾರೆ ಆದರೆ ಸಾಯಲ್ಲ ಕಾರಣ ಅವರ ವಿಚಾರಗಳು ಜೀವಂತವಾಗಿರುವುದರಿಂದ ಅವರಿಗೆ ಸಾವಿಲ್ಲ ಎಂದರು. ಪುರಸಭಾ ಅಧ್ಯಕ್ಷ ಕಾಡಪ್ಪರವರು ಮಾತನಾಡಿ ಅಂಬೇಡ್ಕರ್ ರವರ ಆಶಯದಂತೆ ಬಿ. ಕೃಷ್ಣಪ್ಪ ರವರು ಎಲ್ಲಾ ದಲಿತರ ಮನೆಯೊಳಗೆ ಹೋರಾಟದ ಹಣತೆಯನ್ನು ಹಚ್ಚಿದ್ದೇನೆ. ಅದನ್ನು ಆರದ ಹಾಗೆ ನೋಡಿಕೊಳ್ಳಿ ಎಂದು ಹೇಳಿದ್ದಾರೆಂದು ಕಾಡಪ್ಪ ಉಲ್ಲೇಖಿಸಿದರು.


ಒಗ್ಗಟ್ಟಿನಿಂದ ಒಬ್ಬ ಸಮರ್ಥ ನಾಯಕನನ್ನು ನಾವೇ ಆಯ್ಕೆ ಮಾಡಬಹುದು ಎಂದು ಪರ್ವತಯ್ಯ ಹೇಳಿದರು. ಸಿಮೆಂಟ್ ಮಂಜು ರವರು ಮಾತನಾಡಿ ನಮಗೆ ಎಲ್ಲಿ ಸ್ವಾಭಿಮಾನ ಸಿಗುವುದಿಲ್ಲವೋ ಅಲ್ಲಿ ನಮ್ಮ ಚಪ್ಪಲಿಯನ್ನು ಸಹ ಬಿಡಬಾರದು ಎಂದಿದ್ದರು ಎಂದು ಅಂಬೇಡ್ಕರ್ ರವರ ವಿಚಾರ ಧಾರೆಯನ್ನು ಗುಣಗಾನ ಮಾಡಿದರು. ಕೊನೆಯಲ್ಲಿ H.E. ದೊಡ್ಡಯ್ಯ ಮಾತನಾಡಿ ಅಂಬೇಡ್ಕರ್ ರವರು ಒಂದು ಮಾತನ್ನು ಹೇಳುತ್ತಾರೆ ಅದೇನೆಂದರೆ ನೀವು ನನ್ನನ್ನು ಪ್ರತಿಮೆಯಲ್ಲಿ ಹುಡುಕಬೇಡಿ ಪುಸ್ತಕದಲ್ಲಿ ಹುಡುಕಿ ಎಂಬ ಮಾತನ್ನು ಹೇಳಿದರು ಎಂದು ನುಡಿದರು. ಇದೇ ವೇಳೆಯಲ್ಲಿ ತಾಲೂಕು ಕಚೇರಿ ಆವರಣದಲ್ಲಿರುವ ಅಂಬೇಡ್ಕರ್ ರವರ ಪ್ರತಿಮೆಗೂ ಮಾಲಾರ್ಪಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಶ್ರೀ ಎಚ್ ಎಂ ವಿಶ್ವನಾಥ್ ಮಾಜಿ ಶಾಸಕರು. ಶ್ರೀ ಕಾಡಪ್ಪ ಪುರಸಭಾ ಅಧ್ಯಕ್ಷರು. ಶ್ರೀ ನಲ್ಲುಲ್ಲಿ ಈರಪ್ಪ. ಅಧ್ಯಕ್ಷರು ಪ/ಜಾತಿ ಮತ್ತು ವರ್ಗಗಳ ಒಕ್ಕೂಟ. ಹಾಗೂ ತಾಲೂಕಿನ ಎಲ್ಲಾ ದಲಿತ ಮುಖಂಡರುಗಳು ಭಾಗಿಯಾಗಿದ್ದರು. ಜಿಲ್ಲಾ ವರದಿಗಾರ – ಕುಮಾರ್ K K ವಾಟೇಹಳ್ಳಿ

