ಸಕಲೇಶಪುರ – ಆನೆ ಟಾಸ್ಕ್ ಫೋರ್ಸ್ ಕಛೇರಿ ನೆನ್ನೆಯಷ್ಟೇ ಆರಂಭಗೊಂಡಿದ್ದು, ಆನೆಯಿಂದ ಪಾರಾಗಲು ಅರಣ್ಯ ಇಲಾಖೆಯವರು ಸಾರ್ವಜನಿಕರ ಸಹಾಯ ವಾಣಿ ನೀಡಿರುವುದು ಸರಿಯಷ್ಟೇ, ಆದರೆ ಆ ನಂಬರ್ ಗೆ ಕರೆ ಮಾಡಿದರೆ ಕನೆಕ್ಟ್ ಆಗುತ್ತಿಲ್ಲವೆಂದು ಯಡೇಹಳ್ಳಿ ಆರ್. ಮಂಜುನಾಥ್ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದಾರೆ. ಮೊನ್ನೆಯಷ್ಟೇ ಬೃಹತ್ ಪ್ರತಿಭಟನೆ ಮಾಡಿದರೂ ರೈತರಿಗೆ ಸುಳ್ಳು ಹೇಳುವುದನ್ನು ಅರಣ್ಯ ಅಧಿಕಾರಿಗಳು ಕರಗತ ಮಾಡಿಕೊಂಡಿದ್ದಾರೆ. ಆನೆಗಳ ಉಪಟಳ ಹೆಚ್ಚಾಗಲು ಅರಣ್ಯ ಇಲಾಖೆಯ ಅಧಿಕಾರಿಗಳೇ ನೇರ ಹೊಣೆ ಮತ್ತು ಈ ರೀತಿಯ ಬೇಜವಾಬ್ದಾರಿ ಹೇಳಿಕೆಯಿಂದ ಸಾರ್ವಜನಿಕರು ಸಿಡಿದೇಳುವ ಕಾಲ ದೂರವಿಲ್ಲ ಎಂದರು. ಜಿಲ್ಲಾ ವರದಿಗಾರ – ಕುಮಾರ್ ಕೆ ಕೆ ವಾಟೇಹಳ್ಳಿ.