ಸಕಲೇಶಪುರ – ತಾಲೂಕಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆನೆ ಟಾಸ್ಕ್ ಫೋರ್ಸ್ ಕುರಿತು ಚರ್ಚೆ ಏರ್ಪಡಿಸಲಾಗಿತ್ತು. ಈ ಸಂಬಂಧ ಹಾಸನ ಸಂಸದರಾದ ಶ್ರೀಯುತ ಹೆಚ್. ಡಿ. ಪ್ರಜ್ವಲ್ ರೇವಣ್ಣ ಆಗಮಿಸಿದ್ದರು. ಆನೆ ಹಾವಳಿಯನ್ನು ತಡೆಗಟ್ಟುವಲ್ಲಿ ಅರಣ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ. ಮತ್ತು ಹಾನುಬಾಳುವಿನಲ್ಲಿ ದೇವಸ್ಥಾನದ ರಸ್ತೆಗೆ ಮಣ್ಣು ಹಾಕಲು ಹೋದಾಗ 10 ಜನರ ಮೇಲೆ ಅಟ್ರಾಸಿಟಿ ಕೇಸ್ ದಾಖಲಿಸಿರುವುದು ಸರಿಯಿಲ್ಲ ಎಂದು ಅರಣ್ಯ ಅಧಿಕಾರಿಗಳ ವಿರುದ್ಧ ಗರಂ ಆದರೂ. ಡಿ.ಎಫ್. ಒ. ಬಸವರಾಜು ಉತ್ತರಿಸುತ್ತಾ ಬೆಳೆ ಹಾನಿ ಮತ್ತು ಪ್ರಾಣ ಹಾನಿ ಆಗದಂತೆ ನಿಯಂತ್ರಣ ಕೊಠಡಿಗಳನ್ನು ತೆರೆದಿದ್ದೇವೆ. ಮತ್ತು ನಿಯಂತ್ರಣ ಕೊಠಡಿಯ ಫೋನ್ ನಂಬರ್ 24 ಘಂಟೆಗಳ ಕಾಲ ಚಾಲನೆಯಲ್ಲಿರುತ್ತದೆ. ಹಾಗೆನೇ ಸಕಲೇಶಪುರ, ಬೀಕ್ಕೊಡು, ಹೆತ್ತೂರು, ಮಗ್ಗೆ, ಬಾಳ್ಳುಪೇಟೆ. ಹೀಗೆ 5 ಕಡೆ Substation ತೆರೆಯಲಾಗಿದೆ.

10 ವರ್ಷಗಳಿಂದ ದಾಖಲಾದ ಪ್ರಕರಣಗಳು, ಗಾಯಗೊಂಡವರು 69 ಪ್ರಕರಣಗಳು 48 ಪ್ರಾಣ ಹಾನಿ ಆಗಿವೆ ಮತ್ತು 19 – 20 ನೇ ಸಾಲಿನಿಂದ ತಿಂಗಳಿಗೆ 2 ಸಾವಿರ ರೂಪಾಯಿಯಂತೆ 5 ವರ್ಷಗಳ ಕಾಲ Pension ಕೊಡಲು ಸರ್ಕಾರದ ಆದೇಶ. ಹಾನಿ ಆದಂತಹ ಕುಟುಂಬಗಳಿಗೆ ಒಟ್ಟಾರೆಯಾಗಿ 12 ಕೋಟಿ ರೂಪಾಯಿ ಸಹಾಯ ಧನ ನೀಡಿದ್ದೇವೆ. ಇದೇ ವೇಳೆಯಲ್ಲಿ ಅತ್ತಿಹಳ್ಳಿ ಅರಣ್ಯದ ನಿರ್ವಹಣೆ ಬಗ್ಗೆ ಚರ್ಚಿಸಲಾಯಿತು. ಕೊನೆಯಲ್ಲಿ ಶ್ರೀಯುತ ಹೆಚ್. ಡಿ. ಪ್ರಜ್ವಲ್ ರೇವಣ್ಣ ರವರು ಆನೆ ವಿಚಾರಕ್ಕೆ ಸಂಬಂಧಿಸಿದಂತೆ ಒಂದು ನಿಯೋಗ ಹೋಗುವುದು ಸೂಕ್ತ. ಮತ್ತು ರಾಷ್ಟ್ರೀಯ ಹೆದ್ದಾರಿ ಕಳಪೆ ಕಾಮಗಾರಿಯ ಬಗ್ಗೆ ಎಚ್ಚರಿಕೆ ನೀಡಿ ಇನ್ನೂ 2 ತಿಂಗಳೊಳಗೆ ಸಂಪೂರ್ಣ ಕಾಮಗಾರಿ ಮುಗಿಸಲು ಆದೇಶ ನೀಡಿ ಡೀನ್ಡ್ ಫಾರೆಸ್ಟ್ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಶ್ರೀಯುತ ಹೆಚ್. ಡಿ. ಪ್ರಜ್ವಲ್ ರೇವಣ್ಣ. ಸಂಸದರು. ಶ್ರೀ ಹೆಚ್. ಕೆ. ಕುಮಾರಸ್ವಾಮಿ. ಶಾಸಕರು, ಶ್ರೀಮತಿ ಅರ್ಚನಾ. ಜಿಲ್ಲಾಧಿಕಾರಿಗಳು. ಶ್ರೀಮತಿ ಮೇಘನಾ. ತಹಸೀಲ್ದಾರ್. ಶ್ರೀ ಕಾಂತರಾಜ್. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಸನ. ಶ್ರೀ ರಮೇಶ್. ತಹಸೀಲ್ದಾರ್ ಬೇಲೂರು. ಉಪಸ್ಥಿತರಿದ್ದರು. ಜಿಲ್ಲಾ ವರದಿಗಾರ – ಕುಮಾರ್ ಕೆ ಕೆ ವಾಟೇಹಳ್ಳಿ

