ಜೆಡಿಎಸ್ ಉಚ್ಛಾಟಿತ ಶಾಸಕ ಎಸ್.ಆರ್ ಶ್ರೀನಿವಾಸ್ ಕಾಂಗ್ರೆಸ್ ಸೇರ್ಪಡೆಗೆ  ಕಾಂಗ್ರೆಸ್ ನಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ.  ಶ್ರೀನಿವಾಸ್ ಕಾಂಗ್ರೆಸ್  ಸೇರುವುದನ್ನು ವಿರೋಧಿಸಿ ಇದೀಗ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. 

  • ಗುಬ್ಬಿ ಶಾಸಕ ಕಾಂಗ್ರೇಸ್ ಸೇರ್ಪಡೆಗೆ ವಿರೋಧ 
  • ಎಸ್.ಆರ್ ಶ್ರೀನಿವಾಸ್ ವಿರುದ್ದ ತಿರುಗಿ ಬಿದ್ದ ಟಿಕೆಟ್ ಆಕಾಂಕ್ಷಿಗಳು
  • ದಶಕಂಠ ರಾವಣ ಪೊಸ್ಟರ್ ಅನಾವರಣ

ತುಮಕೂರು : ಗುಬ್ಬಿ ಶಾಸಕ ಕಾಂಗ್ರೇಸ್ ಸೇರ್ಪಡೆಗೆ ಜಿಲ್ಲೆಯ ಕಾಂಗ್ರೆಸ್ ಪಾಳಯದಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಜೆಡಿಎಸ್ ಉಚ್ಛಾಟಿತ ಶಾಸಕ ಎಸ್.ಆರ್ ಶ್ರೀನಿವಾಸ್ ಕಾಂಗ್ರೆಸ್ ಸೇರ್ಪಡೆಯನ್ನು ವಿರೋಧಿಸಿ ದಶಕಂಠ ರಾವಣ ಪೊಸ್ಟರ್ ಅನಾವರಣ ಮಾಡಲಾಗಿದೆ. ಜಂಟಿ ಸುದ್ದಿಗೋಷ್ಠಿ ನಡೆಸಿ ಈ ಪೋಸ್ಟರ್ ಬಿಡುಗಡೆಗೊಳಿಸಲಾಗಿದೆ.  

ಗುಬ್ಬಿ ಶಾಸಕ ಕಾಂಗ್ರೆಸ್ ಸೇರ್ಪಡೆಗೆ ಭಾರೀ ವಿರೋಧ :
ಜೆಡಿಎಸ್ ಉಚ್ಛಾಟಿತ ಶಾಸಕ ಎಸ್.ಆರ್ ಶ್ರೀನಿವಾಸ್ ಕಾಂಗ್ರೆಸ್ ಸೇರ್ಪಡೆಗೆ  ಕಾಂಗ್ರೆಸ್ ನಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ.  ಶ್ರೀನಿವಾಸ್ ಕಾಂಗ್ರೆಸ್  ಸೇರುವುದನ್ನು ವಿರೋಧಿಸಿ ಇದೀಗ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.  10 ತಲೆ ಇರುವ ರಾವಣನ ವಾಲ್ ಪೋಸ್ಟರ್ ಅನ್ನು ಸುದ್ದಿಗೋಷ್ಠಿ ಮಾಡಿ ಬಿಡುಗಡೆ ಮಾಡಲಾಗಿದೆ. ಈ ಮೂಲಕ ಶಾಸಕ ಗುಬ್ಬಿ ಶ್ರೀನಿವಾಸ್ ಅವರನ್ನು ರಾವಣನಿಗೆ ಹೋಲಿಸಿದ್ದಾರೆ. 

ಎಸ್.ಆರ್ ಶ್ರೀನಿವಾಸ್ ವಿರುದ್ದ ತಿರುಗಿ ಬಿದ್ದ ಟಿಕೆಟ್ ಆಕಾಂಕ್ಷಿಗಳು : 
ಮಾನವೂ ಇಲ್ಲದ ಮೌಲ್ಯವೂ ಇಲ್ಲದ ಹತ್ತು ಮುಖದ ರಾಜಕಾರಣಿ. ಮುಖವಾಡ ಕಳಚೋಣ ಬನ್ನಿ ಎಂದು  ಈ ಪೋಸ್ಟರ್ ಮೂಲಕ ಸಂದೇಶ ಸಾರಿದ್ದಾರೆ ಜಿಲ್ಲೆಯ ಕಾಂಗ್ರೆಸ್ ನಾಯಕರು. ಇನ್ನು ಈ ಪೋಸ್ಟರ್ ನಲ್ಲಿ 
ಎಸ್.ಆರ್ ಶ್ರೀನಿವಾಸ್ ಅವರ ಪೋಟೋ ಹಾಕದೆಯೇ ತಮ್ಮ ಸಂದೇಶವನ್ನು ರವಾನಿಸಿದ್ದಾರೆ ಈ ನಾಯಕರು.  ಜಂಟಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ಮುಖಂಡರಾದ ಪ್ರಸನ್ನ ಕುಮಾರ್ ಹಾಗೂ ಹೊನ್ನಗಿರಿ ಗೌಡ.  
 ಪೋಸ್ಟರ್ ಬಿಡುಗಡೆಗೊಳಿಸಿದ್ದಾರೆ. ಈ ಇಬ್ಬರೂ ನಾಯಕರು ಗುಬ್ಬಿ ಕ್ಷೇತ್ರದ  ಕಾಂಗ್ರೆಸ್ ಟಿಕೆಟ್  ಆಕಾಂಕ್ಷಿಗಳು ಎನ್ನಲಾಗಿದೆ. 

ಬಂಡಾಯದ ಎಚ್ಚರಿಕೆ :  
ಶ್ರೀನಿವಾಸ್  ಕಾಂಗ್ರೆಸ್ ಸೇರ್ಪಡೆಗೊಂಡು ಚುನಾವಣೆಗೆ ಸ್ಪರ್ಧಿಸುವುದಕ್ಕೆ ಗುಬ್ಬಿ ತಾಲೂಕು ಕಾಂಗ್ರೆಸ್ ಘಟಕದಿಂದ ವಿರೋಧ ವ್ಯಕ್ತವಾಗಿದೆ. ಅಲ್ಲದೆ ಒಂದು ವೇಳೆ ಶ್ರೀನಿವಾಸ್  ಚುನಾವಣೆಗೆ ಸ್ಪರ್ಧಿಸಿದ್ದೇ  ಆದರೆ ಅವರನ್ನು  ಸೋಲಿಸುವ ಪಣತೊಟ್ಟಂತಿದೆ.  ಈ ಮೂಲಕ ಶ್ರೀನಿವಾಸ್ ಗೆ ಕಾಂಗ್ರೆಸ್ ಟಿಕೆಟ್ ನೀಡಿದರೆ ಬಂಡಾಯ ಫಿಕ್ಸ್ ಎನ್ನುವ ಎಚ್ಚರಿಕೆಯ ಸಂದೇಶವನ್ನು ಕೂಡಾ ರವಾನಿಸಿದ್ದಾರೆ