ಬೇಲೂರು – ಬೇಲೂರು ತಾಲೂಕು ಅರೇಹಳ್ಳಿ ಹೋಬಳಿ ಆರಕ್ಷಕ ಠಾಣೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಕುಂದು ಕೊರತೆಗಳ ಸಭೆ ಏರ್ಪಡಿಸಲಾಗಿತ್ತು.

ಈ ಸಭೆಯಲ್ಲಿ ಅರೇಹಳ್ಳಿ ಹೋಬಳಿಯ ಸುತ್ತ ಮುತ್ತಲಿನ ಗ್ರಾಮಸ್ಥರು ಭಾಗಿಯಾಗಿ, ಹಳ್ಳಿಗಳಲ್ಲಿ ಮದ್ಯ ಮಾರಾಟ ಹೆಚ್ಚಾಗಿದ್ದು, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗರು ಅತಿ ಹೆಚ್ಚು ಮದ್ಯ ವ್ಯಸನಿಗಳಾಗಿದ್ದಾರೆ. ಮತ್ತು ಹಲವಾರು ಕುಟುಂಬಗಳು ಬೀದಿ ಪಾಲಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಶಿಷ್ಟ ಜಾತಿಯ ಪರವಾಗಿ ಕಾನೂನು ಇದ್ದರೂ ಮೇಲಿಂದ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಮತ್ತು ಪ/ಜಾತಿಯ ಜಮೀನು ಕಬಳಿಸುವ ಹುನ್ನಾರ ನಡೆಯುತ್ತಿದೆ ಮತ್ತು ಇನ್ನಿತರ ವಿಷಯಗಳ ತಡೆಯುವ ಬಗ್ಗೆ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಪಿ. ಎಸ್. ಐ. ಶ್ರೀ ಸುರೇಶ್ ರವರು. ಎ. ಎಸ್. ಐ. ಸರ್ದಾರ್ ಪಾಷ ರವರು. ಶ್ರೀ ನಿಂಗರಾಜು. ಜಿಲ್ಲಾ ಸಂಚಾಲಕ ದಲಿತ ಸಂಘರ್ಷ ಸಮಿತಿ. ಶ್ರೀ ಅಣ್ಣಪ್ಪ. ಮಾಜಿ ತಾಲೂಕು ಪಂಚಾಯಿತಿ ಸದಸ್ಯರು. ಶ್ರೀ ಲಕ್ಷ್ಮಣ. ಗ್ರಾಮ ಪಂಚಾಯಿತಿ ಸದಸ್ಯರು. ಶ್ರೀ ಸಿದ್ದೇಶ್. ಮಾಜಿ ಸದಸ್ಯರು. ಶ್ರೀ ಮಲ್ಲಿಕಾರ್ಜುನ ನಾರ್ವೆ. ದಲಿತ ಮುಖಂಡರು ಹಾಗೂ ಎಲ್ಲಾ ದಲಿತ ಮುಖಂಡರುಗಳು ಸಾರ್ವಜನಿಕರು ಭಾಗಿಯಾಗಿದ್ದರು .
ಜಿಲ್ಲಾ ವರದಿಗಾರ – ಕುಮಾರ್ ಕೆ ಕೆ ವಾಟೇಹಳ್ಳಿ

