ಚಿಕ್ಕಬಳ್ಳಾಪುರ: ಮಾಂಡೌಸ್ ಚಂಡಮಾರುತದ(Mandous Cyclone) ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ(Chikkaballapura) ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ಸೋಮವಾರ ಜಿಲ್ಲಾಧಿಕಾರಿ ಎನ್ ಎಂ ನಾಗರಾಜು ರಜೆ(Holiday) ಘೋಷಣೆ ಮಾಡಿ ಆದೇಶ‌ ಪ್ರಕಟಿಸಿದ್ದಾರೆ. 

ನಿರಂತರ ಮಳೆಯ‌(Rain) ಜೊತೆ ಅತಿಯಾದ ಚಳಿ ಶೀತಗಾಳಿ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ರಜೆ ಘೋಷಣೆ ಮಾಡಿರುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. 

ಮುಂದಿನ ದಿನಗಳಲ್ಲಿ ರಜೆಯ ದಿನ ಶಾಲೆ ನಡೆಸುವ ಮೂಲಕ ಈ ರಜೆಯ ದಿನ ಸರಿದೂಗಿಸಲು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ