ಮಧುಗಿರಿ: ಓಮನ್ ರಾಷ್ಟ್ರದ ಮಸ್ಕತ್ ನಲ್ಲಿ ನಡೆದ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ಮಧುಗಿರಿಯ ಯುವ ಪ್ರತಿಭೆ ಗಾಯಕ ಅರಳಾಪುರ ಶಿವುಗೆ ಗೌರವ ನೀಡಿ ಸನ್ಮಾನಿಸಲಾಯಿತು.

ಮಧುಗಿರಿ ತಾಲೂಕಿನ ಹರಳಾಪುರ ಗ್ರಾಮದ ಗಾಯಕ ಶಿವುರವರಿಗೆ ಹೊರದೇಶದ ಒಮಾನ್ ರಾಷ್ಟ್ರದ ಮಸ್ಕತ್ ನಲ್ಲಿ ನಡೆದ ೬೭ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ನಡೆದ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ತಾಲೂಕಿನ ಪ್ರತಿಭೆಯನ್ನು ಗುರುತಿಸಿ ಸಮ್ಮೇಳನದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ವರ ರಾಷ್ಟ್ರದಲ್ಲಿ ಕನ್ನಡ ಪ್ರತಿಭೆಯನ್ನು ಗುರುತಿಸಿ ಸನ್ಮಾನಿಸಿರುವುದು ಮಧುಗಿರಿ ತಾಲೂಕಿಗೆ ಹೆಮ್ಮೆಯ ಸಂಗತಿಯಾಗಿದೆ ಹಾಗೂ ಸಮ್ಮೇಳನದಲ್ಲಿ ಗಾಯಕ ಹರಳಾಪುರ ಶಿವುರವರಿಂದ ಕನ್ನಡ ಗೀತೆಗಳು ಹಾಡಿಸಿ ಖುಷಿ ಪಟ್ಟ ಹೊರದೇಶದ ಕನ್ನಡಿಗರು.