ಚಿಕ್ಕನಾಯಕನಹಳ್ಳಿ : ತಾಲ್ಲೂಕು ಕಚೇರಿಯಲ್ಲಿ ದಗಲ್ಬಾಜಿಗಳು, ದಲ್ಲಾಳಿಗಳ ಕಾಟ ಮೀತಿ ಮೀರಿದೆ. ಇವರಿಂದ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದ್ದು ಲಂಚಗುಳಿತನ ಕಚೇರಿ ತುಂಬಾ ಆವರಿಸಿದೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಗರಂ ಆಗಿ ಇದನ್ನು ಕೂಡಲೇ ನಿಯಂತ್ರಿಸುವ0ತೆ ತಹಸೀಲ್ದಾರ್ ತೇಜಸ್ವಿನಿ ಅವರಿಗೆ ಚಾಟಿ ಬೀಸಿದರು.
ಪಟ್ಟಣದ ಲೋಕೋಪಯೋಗಿ ಇಲಾಖೆಯ ಸಭಾಂಗಣದಲ್ಲಿ ಸೋಮವಾರ ನಡೆದ ೨೦೨೨- ೨೩ ರ ತ್ರೈಮಾಸಿಕ ಕೆಡಿಪಿ ಸಭೆ ಯಲ್ಲಿ ತಹಸೀಲ್ದಾರ್ ಅವರನ್ನು ತರಾಟೆಗೆ ತೆಗೆದುಕೊಂಡರು. ೫೧ ಸಾವಿರ ಕುಟುಂಬಗಳಿಗೆ ೫೭ ಸಾವಿರ ಪಡಿತರ ಕಾರ್ಡ್ ವಿತರಣೆ ಯಾಗಿದೆ ಹೇಗೆ ಎಂದಾಗ ವೃದ್ದಾಪ್ಯ ವೇತನ ಪಡೆಯುವ ಉದ್ದೇಶದಿಂದ ಕೆಲವರು ಪ್ರತ್ಯೇಕ ವಾಸವೆಂದು ಒಬ್ಬರೇ ಇರುವ ಪಡಿತರ ಕಾರ್ಡ್ಗಳನ್ನು ಪಡೆದಿದ್ದಾರೆ. ಅದನ್ನು ಪರಿಶೀಲಿಸಿ ರದ್ದು ಪಡಿಸಲಾಗುವುದು ಎಂದು ತಹಸೀಲ್ದಾರ್ ತಿಳಿಸಿದರು.
ಕ್ರಾಸ್‌ಬೀಡ್, ಹೈಬ್ರೀಡ್ ಇತರೆ ಹಸುಗಳ ಕೃತಕ ಗರ್ಭಧಾರಣೆ ಮಾಡಿರುವ ಬಗ್ಗೆ ಪ್ರತ್ಯೇಕ ಪಟ್ಟಿ ನೀಡುವಂತೆ ಪಶುಪಾಲನಾ ಇಲಾಖೆಯ ನಿರ್ದೇಶಕ ನಾಗಭೂಷಣ್‌ಗೆ ತಿಳಿಸಿದರು. ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಅಂಗನವಾಡಿಗಳನ್ನು ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸಿಕೊಳ್ಳಿ ಕಟ್ಟಡವಿಲ್ಲದಿದ್ದರೆ ನಿವೇಶನಗಳನ್ನು ಗುರುತಿಸಿ ಕಟ್ಟಿಸಿಕೊಳ್ಳಿ, ಜಾಗ ಸಿಗದಿದ್ದರೆ ಸರಕಾರಿ ಶಾಲೆಗಳ ಆಟದ ಮೈದಾನದಲ್ಲಿ ನಿವೇಶನಗಳನ್ನು ಪಡೆದು ಅಂಗನವಾಡಿ ಕಟ್ಟಡಗಳನ್ನು ಕಟ್ಟಿಕೊಳ್ಳಬಹು ದೆಂದು ಸರಕಾರದ ಆದೇಶ ವಾಗಿದೆ ಎಂದು ತಿಳಿಸಿದರು.
ಡಿಸೆಂಬರ್ ಅತ್ಯಂದೊಳಗೆ ಜೆಜೆಎಂ ಕೆಲಸ ಮುಗಿಸಿ ೧೪೦ ಓವರ್‌ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಅನುದಾನ ಒದಗಿಸಲಾಗಿದ್ದು ೨೬ ಟ್ಯಾಂಕ್‌ಗಳನ್ನು ನಿರ್ಮಾಣ ಮಾಡಿದ್ದೀರ ಅನುದಾನವನ್ನು ಯಾವಾಗ ಖರ್ಚು ಮಾಡುತ್ತೀರಾ ಎಂದರು. ೧೦೦ ಟ್ಯಾಂಕ್‌ಗಳ ನಿರ್ಮಾಣಕ್ಕೆ ಅಗ್ರಿಮೆಂಟ್ ಆಗಿದ್ದು ಡಿಸೆಂಬರ್ ಅಂತ್ಯದೊಳಗೆ ಕಾಮಾಗಾರಿ ಪ್ರಾರಂಭಿಸಲಾಗುವುದು. ಉಳಿದ ಸ್ಥಳಗಳಲ್ಲಿ ನಿವೇಶನದ ಸಮಸ್ಯೆ ಇದೆ. ೨೩ ಗ್ರಾಮಗಳಲ್ಲಿ ಜೆಜೆಎಂ ಕಾರ್ಯಕ್ರಮವು ಸಂಪೂರ್ಣವಾಗಿ ಅನುಷ್ಠಾನವಾಗಿದೆ ಎಂದು ಎಇಇ ಸೋಮಶೇಖರ್ ನುಡಿದರು.
ಉಸ್ತುವಾರಿಯಾಗಿದ್ದರೆ ಸಸ್ಪೆಂಡ್ ಮಾಡುತ್ತಿದ್ದೆ
ಕರ್ನಾಟಕ ಆದಿಜಾಂಬವ ಅಭಿವೃದ್ದಿ ಇಲಾಖೆಯಲ್ಲಿ ಸೂಚಿಸಿದ ೧೦ ಪರ್ಸೆಂಟ್ ಕೆಲಸವಾಗಿಲ್ಲ. ನಿಗದಿತ ಕಾಲಮಿತಿಯೊಳಗೆ ಕೆಲಸಗಳು ಪೂರ್ಣಗೊಳ್ಳಬೇಕು. ಕೆಲಸದ ಪ್ರಗತಿ ಕಡಿಮೆ ಇದ್ದಲ್ಲಿ ಸಹಿಸುವುದಿಲ್ಲ. ಗಂಗಾ ಕಲ್ಯಾಣ ಯೋಜನೆಯ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದೀರಾ ನಾನೇನಾದರೂ ತುಮಕೂರು ಉಸ್ತುವಾರಿ ಸಚಿವನಾಗಿದ್ದರೆ ನಿಮ್ಮನ್ನು ಸಸ್ಪೆಂಡ್ ಮಾಡುತ್ತಿದ್ದೆ ಎಂದು ಇಲಾಖೆ ಮುಖ್ಯಸ್ಥ ರಾಜಶೇಖರ್ ಅವರಿಗೆ ಗದರಿದರು.
ಚಿಕ್ಕನಾಯಕನಹಳ್ಳಿಯನ್ನು ದುಡ್ಡಿನಿಂದ ಮುಚ್ಚಬಹುದು !
ತಾಲ್ಲೂಕಿಗೆ ೧೫೦೦ ಕೋಟಿ ಅನುದಾನ ತಂದಿದ್ದು, ಜೆಜೆಎಂಗೆ ೫೦೦ ಕೋಟಿ, ಸಣ್ಣ ನೀರಾವರಿ ಇಲಾಖೆಗೆ ೨೫೦ ಕೋಟಿ, ಸೇರಿದಂತೆ ಎಲ್ಲಾ ಇಲಾಖೆಗಳ ಎಲ್ಲಾ ಯೋಜನೆಗಳಿಗೆ ಅನುದಾನ ಒದಗಿಸಿದ್ದೇನೆ. ಜಿಲ್ಲಾ ಪಂಚಾಯತ್ ಇಂಜಿನಿಯರ್‌ಗಳಿಗೆ ಕೈ ತುಂಬಾ ಕೆಲಸ ನೀಡಿದ್ದೇನೆ. ಅದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ಎಂದು ಸಚಿವರು ಹೇಳಿದರು.
ಅಬಕಾರಿ ಡ್ರೈವರ್‌ಗಳು ಮಾಹಿತಿದಾರರು
ದೂರಿನನ್ವಯ ರೈಡ್ ಮಾಡಲು ಗ್ರಾಮಗಳಿಗೆ ತೆರಳಿದಾಗ ನಿಮ್ಮೊಂದಿಗೆ ಬರುವ ಡ್ರೆöÊವರು ಅವರಿಗೆ ಮುಂಚೆಯೇ ಮಾಹಿತಿ ನೀಡಿ ಮದ್ಯವನ್ನು ಮುಚ್ಚಿಡಿಸುತ್ತಾನೆ. ಆದ್ದರಿಂದ ಅಕ್ಕ ಪಕ್ಕದ ಮನೆಯನ್ನೊಮ್ಮೆ ಪರಿಶೀಲಿಸಿ ಅಕ್ರಮ ಮದ್ಯ ಕಂಡುಬAದಲ್ಲಿ ಕೇಸು ದಾಖಲಿಸುವಂತೆ ಅಬಕಾರಿ ಪಿಎಸ್‌ಐ ತಿಳಿಸಿದರು.
ಸಣ್ಣ ನೀರಾವರಿ ಇಲಾಖೆಯ ರಿವ್ಯೂ ಬೇಡ
ಸಣ್ಣ ನೀರಾವರಿ ಇಲಾಖೆಯ ಸಚಿವ ನಾನೇ ಇರುವುದರಿಂದ ನನಗೇನು ರಿವ್ಯೂ ಬೇಡ ಪೈಪ್‌ಲೈನ್ ಕಾಮಾಗಾರಿಗೆ ಯಾರಾದರೂ ಅಡ್ಡಿ ಪಡಿಸಿದರೆ ಅವರ ಮೇಲೆ ಕೇಸು ದಾಖಲಿಸಿ ಸಿಂಗದಹಳ್ಳಿಯಲ್ಲಿ ಜಾಕ್‌ವೇಲ್ ನಿರ್ಮಾಣಕ್ಕೆ ಆದ್ಯತೆ ನೀಡುವಂತೆ ಎಇಇ ಪ್ರಭಾಕರ್‌ಗೆ ತಿಳಿಸಿದರು. ಇಂಜಿನಿಯರ್‌ಗಳೊAದಿಗೆ ಪ್ರತ್ಯೇಕವಾಗಿ ಸಭೆ ಆಯೋಜಿಸುವಂತೆ ಇಓ ವಸಂತ್‌ಗೆ ಸೂಚಿಸಿ ಬೆಸ್ಕಾಂ ಎಇಇ ರಾಜಶೇಖರ್ ಗೈರು ಹಾಜರಿಯನ್ನು ಪ್ರಸ್ತಾಪಿಸಿದರು

