ಕ್ಯಾಂಟರ್​ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಸಾವಿಗೀಡಾಗಿದ್ದಾರೆ. ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ಈ ಅಪಘಾತ ಸಂಭವಿಸಿದೆ.

ಗುಬ್ಬಿ ತಾಲೂಕಿನ ಕೊಂಡ್ಲಿಕ್ರಾಸ್ ಸಮೀಪ ಕಾರು ಮತ್ತು ಕ್ಯಾಂಟರ್ ನಡುವೆ ಡಿಕ್ಕಿ ಸಂಭವಿಸಿದೆ. ಪರಿಣಾಮ ಸ್ಥಳದಲ್ಲಿಯೇ ಮೂವರು ಸಾವಿಗೀಡಾಗಿದ್ದಾರೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.

ಮೃತರನ್ನು ಚಿಕ್ಕನಾಯಕನಹಳ್ಳಿ ತಾಲೂಕಿನ ನಡುವನಹಳ್ಳಿಯ ರಾಮಣ್ಣ(58), ಸಾಗರ್ (23), ಚಿಕನಾಯಕ್ನಳ್ಳಿ ತಾಲೂಕಿನ ಗೋಡೆಕೆರೆಯ ನಾರಾಯಣಪ್ಪ (54) ಮೃತರು ಎಂದು ಗುರುತಿಸಲಾಗಿದೆ. ಕ್ಯಾಂಟರ್ ವಾಹನ ತುಮಕೂರಿನಿಂದ ಕೆಬಿ ಕ್ರಾಸ್ ಕಡೆ ಪ್ರಯಾಣಿಸುತ್ತಿತ್ತು.

ಇಂಡಿಕಾ ಕಾರ್ ಕೆಬಿ ಕ್ರಾಸ್ ನಿಂದ ತುಮಕೂರು ಕಡೆ ಪ್ರಯಾಣಿಸುವಾಗ ಮುಖಾಮುಖಿ ಡಿಕ್ಕಿಯಾಗಿದೆ. ಕಾರಿನಲ್ಲಿದ್ದ ನಾಗರತ್ನ ಎಂಬುವರಿಗೆ ಗಾಯವಾಗಿದ್ದು, ಇವರು ನಾರಾಯಣಪ್ಪನ ಪತ್ನಿಯಾಗಿದ್ದಾರೆ. ಇವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ