ಚಿಕ್ಕನಾಯಕನಹಳ್ಳಿ: ಹಾವೇರಿಯಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರದ  ತೇರು ಚಿಕ್ಕ ನಾಯಕನಹಳ್ಳಿ ಪಟ್ಟಣದ ಮೂಲಕ ಹಾದು ಹೋಯಿತು.

ರಾಜ್ಯದಾದ್ಯಂತ ಸಂಚರಿಸುತ್ತಿರುವ ಕನ್ನಡದ ತೇರನ್ನು ಪಟ್ಟಣದ ಹುಳಿಯಾರು ಗೇಟ್ ನಲ್ಲಿ ಕಸಾಪ ಹಾಗು ಕನ್ನಡದ ಮನಸ್ಸು ಗಳು   ಅತ್ಯಂತ ಸಂಭ್ರಮದಿಂದ ಬರಮಾಡಿ ಕೊಂಡರು.

ಖಾಸಗಿ ಬಸ್ ನಿಲ್ದಾಣದ ಮೂಲಕ ಆಗಮಿಸಿದ ಕನ್ನಡದ ತೇರಿಗೆ  ನೆಹರು ವೃತ್ತದಲ್ಲಿ ಸಚಿವ ಜೆ.ಸಿ.ಮಾಧುಸ್ವಾಮಿ   ಹಿರಿಯ ಸಾಹಿತಿ ಎಂ.ವಿ.ನಾಗರಾಜರಾವ್, ಪುರಸಭಾಧ್ಯಕ್ಷೆ ಪುಷ್ಪಾ ಹನುಮಂತರಾಜು, ಸದಸ್ಯೆ ಉಮಾ, ಮುಖ್ಯಾಧಿಕಾರಿ ಶ್ರೀನಿವಾಸ್, ಕಸಾಪ ತಾಲೂಕು ಅಧ್ಯಕ್ಷ ರವಿಕುಮಾರ್, ಕನ್ನಡ ಸಂಘದ ವೇದಿಕೆ ಅಧ್ಯಕ್ಷ ಸಿ.ಬಿ. ರೇಣುಕ ಸ್ವಾಮಿ, ಕಲಾವಿದ ಮಗ್ಗದ ಮನೆ ಗಂಗಾಧರ್, ಕಸಾಪದ ಪದಾಧಿಕಾರಿಗಳು ಅದ್ದೂರಿ ಸ್ವಾಗತ ಕೋರಿದರು.