ತುಮಕೂರು: ಜ.18-23ರವರೆಗೆ ಆದಿಜಗದ್ಗುರು ಶಿವರಾತ್ರೇಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದ ಪ್ರಚಾರ ರಥಯಾತ್ರೆಗೆ ನಗರದಲ್ಲಿ ವೀರಶೈವ ಸಮಾಜದ ಮುಖಂಡರು ಸ್ವಾಗತಿಸಿದರು.
ನಗರದಲ್ಲಿ ರಥಯಾತ್ರೆಗೆ ಪುಷ್ಪಾರ್ಚನೆ ಮಾಡಿ ರಥೋತ್ಸವ ಸ್ವಾಗತಿಸಿ ಮಾತನಾಡಿದ ತುಮಕೂರು ನಗರ ವೀರಶೈವ ಸಮಾಜದ ಅಧ್ಯಕ್ಷ ಟಿ.ಬಿ.ಶೇಖರ್ ಸುತ್ತೂರು ಮಠದಲ್ಲಿ ನಡೆಯಲಿರುವ ಶಿವರಾತ್ರೇಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ದಲ್ಲಿ ಈ ಭಾಗದ ಸಮಾಜದವರು ಭಾಗವಹಿಸಬೇಕು, ಜಾತ್ರೆಯ ಆಚರಣೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಪೂಜ್ಯ ಸ್ವಾಮೀಜಿಗಳು ಈ ರಥಯಾತ್ರೆಯನ್ನು ಪ್ರಾರಂಭಿಸಿದ್ದಾರೆ ಎಂದರು.
ಕಳೆದ 2 ವರ್ಷಗಳಿಂದ ಶಿವರಾತ್ರೇಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ಸರಳ ವಾಗಿ ನಡೆದಿದ್ದು, ಈ ಬಾರಿ ಅದ್ದೂರಿ ಜಾತ್ರಾ ಮಹೋತ್ಸವವನ್ನು ಮಾಡಲು ಭಕ್ತರು ಒತ್ತಾಯ ಮಾಡಿರುವ ನಿಟ್ಟಿನಲ್ಲಿ ಜ.18-23ರವರೆಗೆ ಐದು ದಿನಗಳ ಕಾಲ ಜಾತ್ರಾ ಮಹೋತ್ಸವ ನಡೆಯಲಿದ್ದು, ಕೊಂಡೋತ್ಸವ, ಉಚಿತ ಸಾಮೂಹಿಕ ವಿವಾಹ ಸೇರಿ ದಂತೆ ಸಂಪ್ರದಾಯ ಬದ್ಧವಾಗಿ ಜಾತ್ರೆ ನಡೆಸಲು ಶ್ರೀಗಳು ಇಚ್ಛಿಸಿದ್ದು, ತುಮಕೂರು ಜಿಲ್ಲೆಯಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಬೇಕೆಂದು ಮನವಿ ಮಾಡಿದರು.
ಸುತ್ತೂರಿನಲ್ಲಿ ನಡೆಯಲಿರುವ ಶಿವರಾತ್ರೇಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದ ಪ್ರಚಾರ ರಥ 10 ಜಿಲ್ಲೆಗಳಲ್ಲಿ ರಥ ಪ್ರವಾಸ ಮಾಡುತ್ತಿದ್ದು, ಈ ಭಾಗದ ಜನರಿಗೆ ಜಾತ್ರೆಯ ಬಗ್ಗೆ ತಿಳಿಸಬೇಕು ಹಾಗೂ ಸಮುದಾಯವನ್ನು ಸಂಘಟಿಸಬೇಕೆನ್ನುವ ಒತ್ತಾಸೆಯಿಂದ ಶ್ರೀಗಳು ಈ ರಥಯಾತ್ರೆಗೆ ಚಾಲನೆ ನೀಡಿದ್ದು, ಇಂದು ತುಮಕೂರು ಜಿಲ್ಲೆಗೆ ಆಗಮಿಸಿದೆ ಎಂದು ಮಾಹಿತಿ ನೀಡಿ ದರು.
ಈ ವೇಳೆ ಸಮಾಜದ ಉಪಾಧ್ಯಕ್ಷ ಎಸ್.ಜಿ.ಚಂದ್ರಮೌಳಿ, ಕಾರ್ಯದರ್ಶಿ ಅತ್ತಿ ರೇಣುಕಾನಂದ, ವೀರಶೈವ ಬ್ಯಾಂಕ್ ಅಧ್ಯಕ್ಷರಾದ ರುದ್ರಪ್ಪ, ಮಾಜಿ ಅಧ್ಯಕ್ಷ ಮಂಜಣ್ಣ, ಚಂದ್ರಶೇಖರ್, ಮೋಹನ್‌ಕುಮಾರ್ ಪಟೇಲ್, ರುದ್ರೇಶ್, ಶಿವಕುಮಾರ್, ಪಿ.ರವಿಶಂಕರ್, ನಟರಾಜು, ಹೇಮಾ ಪಂಚಾಕ್ಷರಿ, ರುದ್ರಕುಮಾರ್ ಆರಾಧ್ಯ ಇತರರಿದ್ದರು

