ಹಿಂದಿ ಕಿರುತೆರೆಯ ಹಿರಿಯ ನಟಿ ವೀಣಾ ಕಪೂರ್ ಅವರ ಕೊಲೆಯನ್ನು ಡಿ.6ರಂದು ಸ್ವತಃ ಅವರೇ ಮಗ ಮಾಡಿದ್ದ ವಿಷಯ ಬಾಲಿವುಡ್ ಅನ್ನು ಬೆಚ್ಚಿಬೀಳಿಸಿತ್ತು. ಅದೂ ತಾಯಿಯ ತಲೆಗೆ 40 ಬಾರಿ ಬೇಸ್ ಬಾಲ್ ಬ್ಯಾಟ್ ನಿಂದ ಹೊಡೆದು ಮಗ ಕೊಲೆ ಮಾಡಿದ್ದರು ಎಂಬ ಸುದ್ದಿ ತೀವ್ರ ಆತಂಕಕ್ಕೂ ಕಾರಣವಾಗಿತ್ತು. ಇದೀಗ ಕೊಲೆಯ ಹಿಂದಿನ ಕಾರಣವನ್ನು ಮುಂಬೈ ಪೊಲೀಸರು ಭೇದಿಸಿದ್ದು ತಾಯಿಯನ್ನು ಮಗ ಕೊಲ್ಲಲು ಹಲವು ವರ್ಷಗಳ ಕಾಲವಿದ್ದ ದ್ವೇಷ ಎಂದು ಹೇಳಲಾಗುತ್ತಿದೆ.

ವೀಣಾ ಕಪೂರ್ ಪುತ್ರ, ಆರೋಪಿ ಸಚಿನ್ ಮುಂಬೈ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದು, ‘ನನ್ನ ತಾಯಿಯನ್ನು ಹಲವು ವರ್ಷಗಳಿಂದ ದ್ವೇಷಿಸುತ್ತಿದ್ದೆ. ಅವರೊಂದಿಗೆ ಅಸಹನೆ ಇತ್ತು. ನಮ್ಮಿಬ್ಬರ ನಡುವಿನ ದ್ವೇಷವೇ ಅವರನ್ನು ಕೊಲೆ ಮಾಡುವಂತೆ ಮಾಡಿದೆ’ ಎಂದು ಹೇಳಿಕೊಂಡಿದ್ದಾರೆ. ಈ ಸಹನೆಯನ್ನು ಊಹಿಸಲೂ ಸಾಧ್ಯವಿಲ್ಲ ಎಂದು ಪೊಲೀಸರ ಮುಂದೆ ವಿವರವಾಗಿ ಹೇಳಿದ್ದಾನೆ ಎಂದು ಹೇಳಲಾಗುತ್ತಿದೆ

ಅಪಾರ್ಟ್ ಮೆಂಟ್ ವೊಂದರಲ್ಲಿ ವಾಸವಿದ್ದ ವೀಣಾ ಕಪೂರ್ ಕೊಲೆಯಾಗಿದ್ದಾರೆ ಎಂಬ ಸುಳಿವು ಪೊಲೀಸರಿಗೆ ದೊರೆತಿತ್ತು. ಪೊಲೀಸರು ಪರಿಶೀಲಿಸಿದಾಗ ಅದೊಂದು ಕೊಲೆ ಎಂದು ತಿಳಿದಿತ್ತು. ಕೂಡಲೇ ಕೊಲೆಗಾರರನ್ನು ಪೊಲೀಸರು ಬೆನ್ನು ಹತ್ತಿದ್ದರು. ನಟಿಯ ಪುತ್ರನನ್ನು ವಿಚಾರಣೆಗೆ ಒಳಪಡಿಸಿದಾಗ ತಾನೇ ಕೊಂದು, ಸಹಾಯಕನಿಂದ ದೇಹವನ್ನು ತೆರವುಗೊಳಿಸಿದ್ದಾಗಿ ತಿಳಿಸಿದ್ದ. ಆ ಶವವನ್ನು ನದಿಗೆ ಎಸೆದಿರುವುದಾಗಿಯೂ ಬಾಯ್ಬಿಟ್ಟಿದ್ದ.