ತುಮಕೂರು:ಮುಂಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಅಮ್‌ಆದ್ಮಿ ಪಕ್ಷ ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿಯೂ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದ್ದು,ಈಗಾಗಲೇ ಪಕ್ಷದ ಟಿಕೇಟ್ ಆಕಾಂಕ್ಷಿಗಳಲ್ಲಿಯೇ ಅಂತರಿಕ ಸ್ಪರ್ಧೆ ಏರ್ಪಟಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಡಾ.ವಿಶ್ವನಾಥ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು,ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ನಿಷ್ಠ 2-ರವರೆಗೆ ಟಿಕೇಟ್ ಆಕಾಂಕ್ಷಿಗಳು ಇದ್ದಾರೆ.ಅವರಲ್ಲಿ ಪಕ್ಷ ನೀಡುವ ಕಾರ್ಯಕ್ರಮ ಗಳನ್ನು ಯಾರು ಹೆಚ್ಚು ಯಶಸ್ವಿಯಾಗಿ ಜನರ ಬಳಿಗೆ ತೆಗೆದುಕೊಂಡು ಹೋಗುತ್ತಾರೋ ಅವರಿಗೆ ಪಕ್ಷದ ಟಿಕೇಟ್ ದೊರೆಯಲಿದೆ ಎಂದರು.

ತುಮಕೂರು ನಗರ ವಿಧಾನಸಭಾ ಕ್ಷೇತ್ರದಿಂದ ಟಿಕೇಟ್ ಬಯಸಿ, ಹೊಸದಾಗಿ ಪಕ್ಷಕ್ಕೆ ಜಗದೀಶ್ ಬಾಬು ಎಂಬ ಉದ್ಯಮಿಯೊಬ್ಬರು ಇಂದು ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ.ಇವರ ಜೊತೆಗೆ,ಪಕ್ಷದಲ್ಲಿ ಈಗಾಗಲೇ ಗುರುತಿಸಿಕೊಂಡಿರುವ ನಾಗೇಶ್,ಜಿಲ್ಲಾಧ್ಯಕ್ಷನಾದ ನಾನು ಹಾಗೂ ಷಪಿ ಅಹಮದ ಅವರುಗಳು ಅಕಾಂಕ್ಷಿಗಳಿದ್ದಾರೆ.ಟಿಕೇಟ್ ಕೇಳಲು ಪ್ರತಿಯೊ ಬ್ಬರಿಗೂ ಅಧಿಕಾರವಿದೆ. ಆದರೆ ಟಿಕೇಟ್ ನೀಡುವ ಅಧಿಕಾರವಿರುವುದು ಪಕ್ಷಕ್ಕೆ ಮಾತ್ರ. ಹಾಗಾಗಿ ನಾವೆಲ್ಲರೂ ಪಕ್ಷದ ಸಲಹೆ, ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ ಎಂದು ನುಡಿದರು.

ಅಮ್ ಆದ್ಮಿ ಪಾರ್ಟಿ ಹಿಂದು ಪರವೂ ಇಲ್ಲ.ವಿರುದ್ದವೂ ಇಲ್ಲ. ಧರ್ಮಾತೀತ ಪಕ್ಷವಾಗಿದೆ.ಇಂಡೋನೇಷಿಯಾದಲ್ಲಿ ನೋಟಿನಲ್ಲಿ ಲಕ್ಷ್ಮಿ ಮತ್ತು ಗಣೇಶನ ಪೋಟೋ ಇರುವುದನ್ನು ಉಲ್ಲೇಖಿಸಿ,ಭಾರತದಲ್ಲಿಯೂ ಈ ರೀತಿ ಇದ್ದರೆ ಚನ್ನಾಗಿತ್ತು ಎಂಬ ಸಲಹೆಯನ್ನು ಕೇಜ್ರಿವಾಲ್ ನೀಡಿದ್ದಾರೆಯೇ ಹೊರತು.ಗಾಂಧೀಜಿಯ ಬದಲಾಗಿ ಲಕ್ಷ್ಮಿ ,ಗಣೇಶನ ಪೋಟೋ ಇರಬೇಕು ಎಂಬುದು ಅವರ ವಾದವಲ್ಲ. ಅಲ್ಲದೆ ದೆಹಲಿ ರಾಜ್ಯದ ಮಂತ್ರಿಯೊಬ್ಬರು ರಾಜಿನಾಮೆ ನೀಡಲು ಅವರು ಭೌದ್ಧಧರ್ಮ ಸ್ವೀಕರಿಸಿದರು ಎಂಬುದಲ್ಲ.ಅವರೇ ವಯುಕ್ತಿಕ ಕಾರಣಗಳಿಂದ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಒಂದು ಸಣ್ಣ ರಾಜಕೀಯ ಪಕ್ಷದ ಇಂದು ರಾಷ್ಟಿçÃಯ ಪಕ್ಷವಾಗಿ ಹೊರಹೊಮ್ಮಿದೆ.ಇದಕ್ಕೆ ಜನರು ನೀಡುತ್ತಿರುವ ಬೆಂಬಲವೇ ಕಾರಣ ಎಂದು ವಿಶ್ವನಾಥ್ ತಿಳಿಸಿದರು.

ಎಎಪಿ ಪಕ್ಷಕ್ಕೆ ಸೇರ್ಪಡೆಗೊಂಡ ಉದ್ಯಮಿ ಜಗದೀಶ್ ಬಾಬು(ಜೀನಿ ಬಾಬು) ಮಾತನಾಡಿ, ನಾನು ವ್ಯಾಪಾರಸ್ತನಾಗಿ ಸಾಕಷ್ಟು ಸಮಾಜ ಸೇವೆಯಲ್ಲಿ ತೊಡಗಿದ್ದೇನೆ.

102 ಸರಕಾರಿ ಶಾಲೆಯ ಮಕ್ಕಳನ್ನು ದತ್ತು ಪಡೆದು, ಅವರ ಶಿಕ್ಷಣದ ಜವಾಬ್ದಾರಿ ಹೊತ್ತಿದ್ದೇನೆ. ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತಿರುವ ಎಎಪಿ ಪಕ್ಷದ ತತ್ವ ಸಿದ್ದಾಂತಕ್ಕೆ ಮನಸೋತು ಆ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ.ತುಮಕೂರು ನಗರದಿಂದ ಟಿಕೇಟ್ ಬಯಸಿದ್ದೇನೆ. ನಮ್ಮದು ಸಹ ರಾಜಕಾರಣಿ ಮನೆತನ. ನಮ್ಮ ದೊಡ್ಡಪ್ಪ ಸಿ.ಎನ್.ಭಾಸ್ಕರಪ್ಪ ತುಮಕೂರು ಲೋಕಸಭಾ ಕ್ಷೇತ್ರದ ಸದಸ್ಯರಾಗಿದ್ದರು. ಹಾಗಾಗಿ ರಾಜಕಾರಣ ಹೊಸದಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಪ್ರಭುಸ್ವಾಮಿ, ಮಂಜುನಾಥ್, ಉಮರ್ ಪಾರೂಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.