ಗುಬ್ಬಿ: ರೋಗಿಗಳಿಗೆ ಹಾಲು ಹಣ್ಣು ವಿತರಣೆ, ರಕ್ತದಾನ ಶಿಬಿರ ಹಾಗೂ ಅನ್ನದಾನ ಮಾಡುವ ಮೂಲಕ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ 63 ನೇ ಹುಟ್ಟುಹಬ್ಬವನ್ನು ಗುಬ್ಬಿ ಪಟ್ಟಣದಲ್ಲಿ ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು ಆಯೋಜಿಸಿದ್ದರು.

ಸರ್ಕಾರಿ ಆಸ್ಪತ್ರೆಯಲ್ಲಿ ಒಳ ಮತ್ತು ಹೊರ ರೋಗಿಗಳಿಗೆ ಹಾಲು ಹಣ್ಣು ಬ್ರೆಡ್ ವಿತರಿಸಿ ನಂತರ ಜೆಡಿಎಸ್ ಕಚೇರಿಯಲ್ಲಿ ಬೆಳ್ಳಿ ರಕ್ತನಿಧಿ ಕೇಂದ್ರದ ಮೂಲಕ ರಕ್ತದಾನ ಶಿಬಿರ ಆಯೋಜಿಸಿ 30 ಮಂದಿ ಕಾರ್ಯಕರ್ತರ ಮೂಲಕ ರಕ್ತದಾನ ಮಾಡಿಸಿದರು. ನಂತರ ನೂರಾರು ಮಂದಿಗೆ ಅನ್ನದಾನ ಕೂಡಾ ನಡೆಸಿಕೊಟ್ಟರು.

ಕಾರ್ಯಕ್ರಮ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಎಸ್.ನಾಗರಾಜು, ಜನ ಮಾನಸದಲ್ಲಿ ನಿಂತ ಕುಮಾರಣ್ಣ ಅವರು ಸದಾ ಜನಪರ ಕಾಳಜಿ ವ್ಯಕ್ತಪಡಿಸುತ್ತಾರೆ. ಅವರ ಚಿಂತನೆಯ ಫಲ ಮಹತ್ವಾಕಾಂಕ್ಷೆ ಕಾರ್ಯಕ್ರಮ ಪಂಚರತ್ನ ಯೋಜನೆ ರೂಪುಗೊಂಡಿದೆ. ಈಗಾಗಲೇ ರಾಜ್ಯದಲ್ಲಿ ಸಂಚರಿಸುವ ಪಂಚರತ್ನ ರಥಯಾತ್ರೆ 19 ಕ್ಷೇತ್ರವಾಗಿ ಗುಬ್ಬಿಯಲ್ಲೂ ಸಹ ಸಕಾರಾತ್ಮಕ ಸ್ಪಂದನೆ ಕಂಡಿದೆ. ಇದರ ಫಲ ಈ ಬಾರಿ ಪ್ರಾದೇಶಿಕ ಪಕ್ಷ ಜೆಡಿಎಸ್ ಸ್ಪಷ್ಟ ಬಹುಮತ ಬಂದು ಮತ್ತೊಮ್ಮೆ ಕುಮಾರಣ್ಣ ಮುಖ್ಯಮಂತ್ರಿಗಳಾಗಿ ರೈತರ ಬಡವರ ದೀನ ದಲಿತರ ಪರ ಕೆಲಸ ಮಾಡಲಿದ್ದಾರೆ ಎಂಬ ವಿಶ್ವಾಸ ಮೂಡಿದೆ ಎಂದರು.

ಪಂಚರತ್ನ ಜೊತೆ ಜನತಾ ಜಲಧಾರೆ ಕೂಡಾ ಜನರ ಮನ ಗೆದ್ದಿದೆ. ಹೇಳಿದಂತೆ ನಡೆಸಿಕೊಳ್ಳುವ ಕುಮಾರಣ್ಣ ರೈತರ ಸಾಲ ಮನ್ನಾ ಈ ಬಾರಿ ಜೆಡಿಎಸ್ ಕೈ ಹಿಡಿಯಲಿದೆ. ಮುಂದಿನ ಅಧಿಕಾರದಲ್ಲಿ ಮಹಿಳೆಯರ ಸಾಲ ಮನ್ನಾ ಘೋಷಣೆ ಸಹ ವರದಾನ ಆಗಲಿದೆ ಎಂದ ಅವರು ಪಂಚರತ್ನ ಜೊತೆ ಗ್ರಾಮ ವಾಸ್ತವ್ಯ ಯಶಸ್ವಿಯಾಗಿದೆ. ಈ ಮೂಲಕ ಪ್ರೇರಣೆ ಆಗಿರುವ ನಾನು ಸಹ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ವಾಸ್ತವ್ಯ ಹೂಡಿ ಜನರ ಸಮಸ್ಯೆಗೆ ಸೂಕ್ತ ಪರಿಹಾರ ಕಂಡು ಹಿಡಿಯುವ ಕೆಲಸ ಮಾಡುವುದಾಗಿ ತಿಳಿಸಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಕಳ್ಳಿಪಾಳ್ಯ ಲೋಕೇಶ್ ಮಾತನಾಡಿ ಪಂಚರತ್ನ ಯೋಜನೆ ದೇಶದಲ್ಲೇ ಅತ್ಯುತ್ತಮ ಕಾರ್ಯಕ್ರಮ ಎನಿಸಿದೆ.  ರೈತರ ಸ್ವಾವಲಂಬಿ ಬದುಕು ಕಟ್ಟಿಕೊಡುವ ಯೋಜನೆ ಪ್ರಾದೇಶಿಕ ಪಕ್ಷ ಮಾತ್ರ ನೀಡುತ್ತದೆ. ರಾಷ್ಟ್ರೀಯ ಪಕ್ಷಗಳಿಂದ ಬೇಸತ್ತ ಜನರು ಈ ಬಾರಿ ಜೆಡಿಎಸ್ ಗೆ ಅಧಿಕಾರ ನೀಡಲಿದ್ದಾರೆ. ಮತ್ತೇ ಕುಮಾರಣ್ಣ ಮುಖ್ಯಮಂತ್ರಿಯಾಗಿ ಮಾದರಿ ರಾಜ್ಯ ಕಟ್ಟಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಸದಸ್ಯ ಜಿ.ಎಂ.ಶಿವಲಿಂಗಯ್ಯ, ಪಪಂ ಮಾಜಿ ಅಧ್ಯಕ್ಷ ಜಿ.ಡಿ.ಸುರೇಶಗೌಡ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಚಿಕ್ಕೀರಪ್ಪ, ಮುಖಂಡರಾದ ಗಂಗಸಂದ್ರ ಮಂಜಣ್ಣ, ಡಿ.ರಘು, ಗಂಗಾಧರ್, ಮಂಜಣ್ಣ, ಸಂತೋಷ ಇತರರು ಇದ್ದರು