ಗುಬ್ಬಿ : ವಾಸಣ್ಣನವರು ಯಾವುದೇ ಪಕ್ಷದಿಂದ ಸ್ಪರ್ಧಿಸಿದರೂ ನಾವು ಅವರ ಜೊತೆಯಲ್ಲಿದ್ದು ಗೆಲ್ಲಿಸುತ್ತೆವೆ ಎಂದು ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ವೆಂಕಟೇಶ್ ತಿಳಿಸಿದರು.
ತಾಲೂಕಿನ ಎಂ ಹೆಚ್ ಪಟ್ನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ರಾಜೀನಾಮೆ ಪರ್ವ ಕಾರ್ಯಕ್ರಮದಲ್ಲಿ ಮಾತನಾಡಿ ವಾಸಣ್ಣನವರು ಯಾವುದೋ ಒಂದು ಜಾತಿಗೆ ಮಾತ್ರ ಸೀಮಿತವಲ್ಲ ಅವರು ಸರ್ವ ಜನಾಂಗದ ನಾಯಕ ಅದಕ್ಕಾಗಿ ಅವರು ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.
ವಾಸಣ್ಣ ಅಭಿಮಾನಿ ಬಳಗದ ಮುಖಂಡ ಕೆ ಆರ್ ವೆಂಕಟೇಶ್ ಮಾತನಾಡಿ ವಾಸಣ್ಣನವರ ಸರಳತೆ, ಅಭಿವೃದ್ಧಿ, ವ್ಯಕ್ತಿತ್ವ ಮತ್ತು ವಿಶ್ವಾಸವನ್ನು ಇಟ್ಟು ಈ ಕ್ಷೇತ್ರದ ಜನ ಈ ಬಾರಿಯೂ ಯಾವುದೇ ಪಕ್ಷದಿಂದ ಸ್ಪರ್ಧಿಸಿದರೂ ಅವರ ಜೊತೆಯಲ್ಲಿಯೇ ನಡೆದು ಅವರ ಬಲ ವನ್ನು ಮತ್ತಷ್ಟು ಹೆಚ್ಚಿಸಿ ಮುಂದಿನ ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ಗೆಲ್ಲಿಸಿ ಅವರನ್ನು ವಿರೋಧಿಸುವವರೆಗೆ ವಾಸಣ್ಣನ ತಾಕತ್ತು ಏನು ಎಂದು ತೊರೆಸುತ್ತೆವೆ ತಿಳಿಸಿದರು.
ಮುಖಂಡ ನರಸಿಂಹಮೂರ್ತಿ ಮಾತನಾಡಿ ವಾಸಣ್ಣ ಕಾಂಗ್ರೆಸ್ ಪಕ್ಷಕ್ಕೂ ಹೋದರು ಸರಿ ಪಕ್ಷೇತರ ಅಭ್ಯರ್ಥಿಯಾಗಿ ನಿಂತರೂ ಸಹ ನಾವೆಲ್ಲ ಅವರ ಜೊತೆಯಲ್ಲಿ ಇರುತ್ತೇವೆ ಎಂದು ತಿಳಿಸಿದರು.
ಮುಖಂಡ ದೇವರಾಜು ಮಾತನಾಡಿ ಇಪ್ಪತ್ತು ವರ್ಷಗಳಲ್ಲಿ ಯಾವುದೇ ರೀತಿಯ ತಾಲೂಕಿನಲ್ಲಿ ಸಮಸ್ಯೆಗಳು ಇಲ್ಲದಂತೆ ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಂಡು ಬಂದಿದ್ದಾರೆ ರೈತರ ಕಷ್ಟ ಸುಖಗಳು ಸಾರ್ವಜನಿಕ ಸಮಸ್ಯೆಗಳನ್ನು ನೇರವಾಗಿ ಹೇಳಿಕೊಳ್ಳಬಹುದಾದ ಶಾಸಕರೆಂದರೆ ಅದು ನಮ್ಮ ಗುಬ್ಬಿ ಶಾಸಕರು ಮಾತ್ರ ಎಂಬ ಹೆಮ್ಮೆ ನಮಗಿದೆ ಹಾಗಾಗಿ ಸ್ವಇಚ್ಛೆಯಿಂದ 1500 ಸದಸ್ಯರು ಜೆಡಿಎಸ್ ಪಕ್ಷದ ಬೂತ್ ಮಟ್ಟ ಹಾಗೂ ಪ್ರಾಥಮಿಕ ಸದಸ್ಯತ್ವಕ್ಕೆ ಸಾಮೂಹಿಕವಾಗಿ ರಾಜೀನಾಮೆ ನೀಡುತ್ತಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೇ ಸುನಿತಾ ಶಶಿಧರ್, ಗ್ರಾಮ ಪಂಚಾಯತಿ ಉಪಾಧ್ಯಕ್ಷೇ ಸುಮಿತ್ರ, ಗುರು ರೇಣುಕಾರಾಧ್ಯ, ಮುಖಂಡರಾದ ಗುರು ರೇಣುಕಾರಾಧ್ಯ, ಪದ್ಮ ನಾಗೇಶ್, ಯೋಗೀಶ್ ಗೌಡ, ತೀರ್ಥ ಪ್ರಸಾದ್, ನೇಮಣ್ಣ, ಮುಂತಾದವರಿದ್ದರು

