ತುಮಕೂರಿನ ಮರಳೂರು ದಿಣ್ಣೆಯಲ್ಲಿ ಹಿಂದುಗಳ ಮನೆಯಲ್ಲಿ ಬೈಬಲ್ ವಿಚಾರ ಪ್ರಚಾರ ಮಾಡುತ್ತಿದ್ದ ಮೂವರನ್ನು ಬಜರಂಗ ದಳ ಕಾರ್ಯಕರ್ತರು ಪೊಲೀಸರಿಗೆ ಒಪ್ಪಿಸಿದ್ದಾರೆ
ತುಮಕೂರು: ಆಮಿಷ ಒಡ್ಡಿ ಮತಾಂತರಕ್ಕೆ ಯತ್ನಿಸಿದ ಆರೋಪದಲ್ಲಿ ಮೂವರು ಕ್ರೈಸ್ತ ಧರ್ಮದ ಪ್ರಚಾರಕರ ಬಂಧಿಸಲಾಗಿದೆ. ತುಮಕೂರು ನಗರದ ಮರಳೂರು ದಿಣ್ಣೆಯಲ್ಲಿ ಘಟನೆ ನಡೆದಿದೆ.
ಮರಳೂರು ದಿಣ್ಣೆ ನಿವಾಸಿ ರವಿ ಎನ್ನುವರ ಕುಟುಂಬ ಹಾಗೂ ಸ್ನೇಹಿತರಿಗೆ ಹಣದ ಆಮಿಷ ಒಡ್ಡಿದ ಆರೋಪದಲ್ಲಿ ಜಯನಗರ ಪೊಲೀಸರು ಜೆಸ್ಸಿ, ಸಾರಾ ಮತ್ತು ಚೇತನ್ ಎಂಬವರನ್ನು ಬಂಧಿಸಿದ್ದಾರೆ.
ಆರೋಪಿಗಳು ಸ್ವರ್ಗ ನರಕಗಳ ಬಗ್ಗೆ ಸೊಗಸಾಗಿ ವಿವರಣೆ ನೀಡುತ್ತಾ ಮರಳುಗೊಳಿಸುತ್ತಿದ್ದರು. ಕ್ರೈಸ್ತ ಧರ್ಮಕ್ಕೆ ಸೇರುವಂತೆ ಧಾರ್ಮಿಕ ಬೋಧನೆಗಳ ಮೂಲಕ ಮಾತ್ರವಲ್ಲ, ಹಣದ ಆಮಿಷ ಒಡ್ಡಿಯೂ ಪ್ರಯತ್ನಿಸುತ್ತಿದ್ದರು ಎಂದು ಆರೋಪಿಸಲಾಗಿದೆ.
ಇಲ್ಲಿನ ಹಿಂದೂಗಳ ಮನೆಯೊಂದಕ್ಕೆ ಈ ಮೂವರು ಬಂದು ಬೋಧನೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಪಡೆದ ಬಜರಂಗ ದಳ ಕಾರ್ಯಕರ್ತರು ಅಲ್ಲಿಗೆ ಧಾವಿಸಿದರು. ಮತ್ತು ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಿದರು.
ತಾವು ಮತಾಂತರ ಮಾಡಲು ಬಂದಿಲ್ಲ. ಸುವಿಚಾರಗಳನ್ನು ತಿಳಿಸಲು ಈ ಮನೆಯವರೇ ಕರೆಸಿಕೊಂಡಿದ್ದಕ್ಕಾಗಿ ಬಂದಿದ್ದೇವೆ ಎಂದು ಅವರು ಹೇಳಿದರು. ಆದರೆ, ಅದು ಸುಳ್ಳು ಎಂದು ವಾದಿಸಿ ಬಂಧಿಸಲಾಗಿದೆ. ಹಿಂದುಗಳ ಮನೆಗೆ ಯಾಕೆ ಬರುತ್ತೀರಿ ಎಂದು ಕೇಳಿದಾಗ, ಹಾಗಿದ್ದರೆ ಯಾರೂ ಬೇರೆ ಧರ್ಮದವರ ಮನೆಗೆ ಹೋಗಬಾರದಾ ಎಂಬೆಲ್ಲ ಪ್ರಶ್ನೆಗಳನ್ನು ಈ ಮೂವರು ಕೇಳಿದ್ದಾರೆ

