ತುಮಕೂರು ತಾಲ್ಲೂಕು ವಕ್ಕೋಡಿ ಗ್ರಾಮದ ಸರ್ವೆ ನಂಬರ್ 29ರಲ್ಲಿ ಮೂವತ್ತಕ್ಕೂ ಹೆಚ್ಚು ಬಡ ದಲಿತ ಕುಟುಂಬಗಳು ಸ್ವಂತ ದುಡಿಮೆಯಿಂದ ಸ್ವಂತ ಮನೆ ಕಟ್ಟಿಕೊಂಡು ವಾಸಿಸುತ್ತಿವೆ

ವಕ್ಕೋಡಿ ಗ್ರಾಮದ ಸರ್ವೆ ನಂಬರ್ 29/2ರಲ್ಲಿ 10ಎಕ್ಕರೆ 4ಗುಂಟೆ ಸರ್ಕಾರಿ ಗೋಮಾಳವಿದ್ದು ಎರಡು ಎಕ್ಕರೆಯನ್ನು ಸಾರ್ವಜನಿಕ ಸ್ಮಶಾನಕ್ಕಾಗಿ ಮೀಸಲಿಟ್ಟಿದ್ದು ಒಂದು ಎಕ್ಕರೆಯನ್ನು ಆಶ್ರಯ ಯೋಜನೆಯಡಿ ಸೈಟ್ ವಿತರಿಸಿದ್ದಾರೆ. ಮೂರು ಎಕ್ಕರೆಯನ್ನು ಸರ್ಕಾರಿ ಐಟಿಐ ಕಾಲೇಜೆಗೆ ಮಂಜೂರು ಮಾಡಿದೆ, ಉಳಿಕೆ ನಾಲ್ಕು ಎಕ್ಕರೆ ನಾಲ್ಕು ಗುಂಟೆ ಜಾಗದಲ್ಲಿ ಬಡ ದಲಿತ ಕುಟುಂಬಗಳು ಸ್ವಂತ ದುಡಿಮೆಯಿಂದ ಮನೆಗಳನ್ನು ಕಟ್ಟಿಕೊಂಡು ವಾಸಿಸುತ್ತಿವೆ

ಆದರೆ ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳ ಮಾಲೀಕರು ಸರ್ಕಾರಿ ಗೋಮಾಳದ ನಾಲ್ಕು ಎಕ್ಕರೆ ನಾಲ್ಕು ಗುಂಟೆ ಜಮೀನು ಕಬಳಿಸುವ ಸಂಚು ಹೂಡಿ ಕೆಲ ಮಾಧ್ಯಮಗಳ ವರದಿಗಾರರಿಗೆ ದುಡ್ಡು ಕೊಟ್ಟು ಕಪೋಲಕಲ್ಪಿತ ಸುಳ್ಳು ಸುದ್ದಿ ಪ್ರಕಟಿಸಿ ಬಡ ದಲಿತರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಯುತ್ತಿದೆ

ಸರ್ಕಾರಿ ಐಟಿಐ ಕಾಲೇಜಿಗೆ 2018ರಲ್ಲಿ ಜಾಗ ಮಂಜೂರು ಮಾಡಲಾಗಿದ್ದರು ಕೂಡ ಯಾರೂ ಕೂಡ ಅಲ್ಲಿಗೆ ಬಂದು ಇದು ಕಾಲೇಜಿನ ಜಾಗ ಎಂದು ಕನಿಷ್ಠಪಕ್ಷ ಒಂದು ಬೋರ್ಡ್ ಕೂಡ ಹಾಕಿರಲಿಲ್ಲ ಅದರೆ ಇಲ್ಲಿ ಮನೆ ಕಟ್ಟಿಕೊಂಡಿರುವ ದಲಿತರು 2022ರ ಏಪ್ರಿಲ್ 14ರಂದು ಅಂಬೇಡ್ಕರ್ ಜಯಂತಿ ಪ್ರಯುಕ್ತ ಮಾಜಿ ಶಾಸಕ ಸುರೇಶ್ ಗೌಡರನ್ನು ಕರೆಸಿ ಅವರಿಂದ ಅಂಬೇಡ್ಕರ್ ನಗರ ಎಂದು ನಾಮಫಲಕವನ್ನು ಅನಾವರಣಗೊಳಿಸಿದ ನಂತರ

ವಕ್ಕೋಡಿ ಗ್ರಾಮದ ಸರ್ವೆ ನಂಬರ್ 29ರ ಪಹಣಿ