
anchor anushree marriage: ಅನುಶ್ರೀ ಅವರು ಕರ್ನಾಟಕದ ಸಮಸ್ತ ಕುಟುಂಬಕ್ಕೆ ಮನೆ ಮಗಳಂತೆಯೇ. ವೇದಿಕೆಯಲ್ಲಿ ಪಟಪಟ ಎಂದು ಕನ್ನಡವನ್ನು ಸಲೀಸಾಗಿ ಮಾತನಾಡುತ್ತಾ, ಜೊತೆಗಾರರನ್ನು ಪ್ರೋತ್ಸಾಹಿಸುತ್ತಾ, ತುಸುಕಾಲೆಳೆಯುತ್ತಾ, ಆಗಾಗ ತಮಾಷೆ ಮಾಡುತ್ತಾ, ನಗುತ್ತಾ-ನಗಿಸುತ್ತಾ ಅನುಶ್ರೀಯವರು ಎಲ್ಲರಿಗೂ ಇಷ್ಟವಾಗಿದ್ದಾರೆ. ಸದ್ಯ ಕನ್ನಡ ಭಾಷೆಯ ನಿರೂಪಕರಲ್ಲಿ ಅಗ್ರಸ್ಥಾನ ಅನುಶ್ರೀಯವರದ್ದು.
ಹೌದು, ಕನ್ನಡ ಕಿರುತೆರೆಯ ಲೋಕದಲ್ಲಿ ನಂಬರ್ ಒನ್ ನಿರೂಪಕಿ ಎನಿಸಿಕೊಂಡು ಅನುಶ್ರೀಯವರು ರಿಯಾಲಿಟಿ ಶೋಗಳಿಗೆ, ರಾಜಕೀಯ ಕಾರ್ಯಕ್ರಮಗಳಿಗೆ, ಚಲನಚಿತ್ರಗಳ ಪ್ರಮೋಶನ್ ಹಾಗೂ ಬಿಡುಗಡೆಯ ಸಮಾರಂಭಗಳಿಗೆ, ಸೀರಿಯಲ್ ಸಂತೆಗಳಿಗೆ ಬಹುಬೇಡಿಕೆಯ ನಿರೂಪಕಿಯಾಗಿ ಮುಂಚೂಣಿಯಲ್ಲಿದ್ದಾರೆ.
ನಿರೂಪಕಿಯಾಗಿರುವ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟು, ಆಗಾಗ punching dialogue ಗಳನ್ನು ಹೊಡೆಯುತ್ತಾ, ಹಾಸ್ಯ ಚಟಾಕಿಯನ್ನು ಹಾರಿಸುತ್ತಾ ಇಡೀ ಕಾರ್ಯಕ್ರಮವು ಲವಲವಿಕೆಯಿಂದ ಕೂಡಿರುವಂತೆ ಮಾಡಿ, ಎಂತಹ ಸನ್ನಿವೇಶಗಳನ್ನು ನಿಭಾಯಿಸುವ, ನಿರಾಳಗೊಳಿಸುವ ಗಟ್ಟಿಗಿತ್ತಿ ಅನುಶ್ರೀಯವರು.
Personal Story : ನಾವೀಗ ಅನುಶ್ರೀ ಅವರ ಗೆಲುವಿನ ಕಾಲವನ್ನು ಸಂಭ್ರಮಿಸುತ್ತಿದ್ದೇವೆ. ಅಂದ ಹಾಗೆ ಅನುಶ್ರೀಯವರು ಉತ್ತುಂಗವನ್ನು ಏರಲು ನಡೆದುಕೊಂಡು ಬಂದ ಹಾದಿ ಕಷ್ಟಕರವಾಗಿತ್ತು; ಮೂಲತಃ ಮಂಗಳೂರಿನವರಾದ ಇವರು ತಮ್ಮ ಚಿಕ್ಕ ವಯಸ್ಸಿನಲ್ಲಿಯೇ, ತಂದೆಯಿಂದ ದೂರವಾದ ಕುಟುಂಬವನ್ನು ನಿಭಾಯಿಸುವ ಜವಾಬ್ದಾರಿಯನ್ನು ಹೊತ್ತರು.
ಸಹೋದರ ಅಭಿಜಿತ್ ಹಾಗೂ ತಾಯಿ ಶಶಿಕಲಾಳನ್ನು ನೋಡಿಕೊಳ್ಳುವ ಭರದಲ್ಲಿ ಓದುವ ವಯಸ್ಸಿನಲ್ಲಿಯೇ ಕೆಲಸವನ್ನು ಹುಡುಕಿಕೊಂಡರು. ಮೊದಲಿನಿಂದಲೂ ನಿರೂಪಣೆಯಲ್ಲಿ ಆಸಕ್ತಿ ಹೊಂದಿದ ಅನುಶ್ರೀ ಅವರು ಸ್ಥಳೀಯ ಕಾರ್ಯಕ್ರಮಗಳಿಗೆ ಹಾಗೂ ಟಿವಿ ಚಾನಲ್ಗಳಿಗೆ ನಿರೂಪಕಿಯಾಗಿ ಕಾರ್ಯನಿರ್ವಹಿಸಿದರು. ನಂತರ ಬೆಂಗಳೂರಿನತ್ತ ಮುಖ ಮಾಡಿ ನಿಂತ ಅನುಶ್ರೀ ಅವರಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು ಕಾರ್ಯಕ್ರಮವನ್ನು ನಿರ್ವಹಿಸುವ ಅವಕಾಶ ದೊರೆಯಿತು.

Anchor anushree marriage with whom ?
ಅಂದಿನಿಂದ ಅದೃಷ್ಟವೂ ಬೆನ್ನೇರಿ ಒಂದರ ನಂತರ ಮತ್ತೊಂದು ಅವಕಾಶಗಳು ದೊರೆತು ಪ್ರತಿ ಪ್ರೇಕ್ಷಕನ ಅಚ್ಚುಮೆಚ್ಚಿನ ನಿರೂಪಕಿಯಾಗಿದ್ದಾರೆ. ಸಭೆ ಸಮಾರಂಭಗಳಿಗೆ, ಕಾರ್ಯಕ್ರಮಗಳನ್ನು host ಮಾಡಲು ಹೋದಾಗ ಅನುಶ್ರೀ ಅವರಿಗೆ ಸಾಮಾನ್ಯವಾಗಿ ಕೇಳಿದ ಪ್ರಶ್ನೆ ಎಂದರೆ : ಮದುವೆ ಯಾವಾಗ??ಹುಡುಗ ಯಾರು?? ಹೇಗಿರಬೇಕು?? ಎಂದು.
ಸಂದರ್ಶನ ಒಂದರಲ್ಲಿ ಈ ಪ್ರಶ್ನೆಗೆ ಉತ್ತರಿಸಿರುವ ಅನುಶ್ರೀ ಅವರು, ‘ನಾನು ಬದುಕಿನಲ್ಲಿ ನೋಡುವುದು ಬಹಳಷ್ಟು ಇದೆ; ನೂರಾರು ಊರುಗಳನ್ನು ಸುತ್ತಬೇಕಿದೆ. ನಾನು ಯಾವಾಗಲೂ ಹೀಗೆ ಇರುತ್ತೇನೆಂದು ಹೇಳಲು ಸಾಧ್ಯವಿಲ್ಲ; ಕಂಕಣ ಭಾಗ್ಯವು ಕೂಡಿ ಬಂದಾಗ ಎಲ್ಲವೂ ತಾನಾಗಿಯೇ ನೆರವೇರುತ್ತದೆ… ಹುಡುಗ ತೀರ ಬೆಳ್ಳಗಿರಬೇಕು, ಒಳ್ಳೆಯ ಡ್ರೆಸ್ಸಿಂಗ್ ಸೆನ್ಸ್ ಹೊಂದಿರಬೇಕು, ನಾನು ಹೇಳುವ ಎಲ್ಲವನ್ನು ಒಪ್ಪಬೇಕು…ಈ ರೀತಿಯ ಯಾವುದೇ ಷರತ್ತುಗಳಿಲ್ಲ. ನಾನು ವಿವಾಹವಾಗುವ ಹುಡುಗನಿಗೆ ಹಾಡು, ಕುಣಿತ ಬಂದರೆ ನನಗೆ ಖುಷಿ’ ಎಂದಿದ್ದಾರೆ

