ತುಮಕೂರು: ಇಲ್ಲಿನ ಮಧುಗಿರಿ ತಾಲೂಕಿನ ಮಿಡಿಗೇಶಿ ಹೋಬಳಿ ದಾಸೇನಹಳ್ಳಿಯಲ್ಲಿ ರೈತರೊಬ್ಬರ ಮೇಲೆ ಕರಡಿಯೊಂದು (Bear Attack) ದಾಳಿ ನಡೆಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದಾಸೇನಹಳ್ಳಿ ಗ್ರಾಮದ ನಾಗರಾಜಪ್ಪ (54) ಕರಡಿ ದಾಳಿಗೊಳಗಾದವರು.
ನಾಗರಾಜಪ್ಪ ಎಂದಿನಂತೆ ಮುಂಜಾನೆ ಜಾನುವಾರಗಳಿಗೆ ಮೇವು ತರಲೆಂದು ಹೊಲಕ್ಕೆ ತೆರಳಿದ್ದಾಗ ಏಕಾಏಕಿ ಬಂದ ಕರಡಿ ಮೈ ಮೇಲೆ ಎರಗಿದೆ. ಕೂಡಲೇ ಬಿಡಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಆಗದೇ ಇದ್ದಾಗ, ಜೋರಾಗಿ ಕಿರುಚಿಕೊಳ್ಳುತ್ತಿದ್ದಂತೆ ಕರಡಿ ಗಾಬರಿಗೊಂಡು ಓಡಿ ಹೋಗಿದೆ.
ನಾಗರಾಜಪ್ಪನ ಕಿರುಚಾಟ ಕೇಳುತ್ತಿದ್ದಂತೆ ಅಕ್ಕ ಪಕ್ಕದ ರೈತರು ಆಗಮಿಸಿದ್ದು, ಗಾಯಗೊಂಡಿದ್ದವರನ್ನು ಕೂಡಲೇ ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಚಿರತೆ, ಕಾಡಾನೆ ಹಾವಳಿ ಹೆಚ್ಚಾಗುತ್ತಿರುವಾಗಲೇ ಈಗ ಕರಡಿ ದಾಳಿ ನಡೆಸುತ್ತಿರುವುದು ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿದೆ.
ಕನ್ನಡ E NEWS ಕರ್ನಾಟಕದ ಜನರ ಧ್ವನಿಯಾಗಿ, ಅತ್ಯಂತ ವಿಶ್ವಾಸಾರ್ಹ ಮತ್ತು ವೇಗದ ಸುದ್ದಿಯನ್ನು ತಲುಪಿಸುವ ಧ್ಯೇಯದೊಂದಿಗೆ ಕನ್ನಡ E NEWS ಅನ್ನು ಪ್ರಾರಂಭಿಸಲಾಗಿದೆ. ನಮ್ಮದು ಕರ್ನಾಟಕ ರಾಜ್ಯದ ಅಂತರ್ಜಾಲ ಪತ್ರಿಕೆ (Official Online News Portal) ಮತ್ತು ನಿಮ್ಮೆಲ್ಲಾ ಸುದ್ದಿ ಅಗತ್ಯಗಳಿಗೆ ನಂಬರ್ ಒನ್ ಸುದ್ದಿ ತಾಣವಾಗುವ ಗುರಿ ಹೊಂದಿದ್ದೇವೆ.
ನಮ್ಮ ಉದ್ದೇಶ
ಮಾಹಿತಿ ತಂತ್ರಜ್ಞಾನದ ಈ ಯುಗದಲ್ಲಿ, ಪ್ರತಿ ಸುದ್ದಿಯೂ ನಿಮ್ಮ ಅಂಗೈಯಲ್ಲಿ ಕ್ಷಣಾರ್ಧದಲ್ಲಿ ತಲುಪಬೇಕು ಎಂಬ ಸದುದ್ದೇಶ ನಮ್ಮದು. ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಎಲ್ಲಾ ಪ್ರಮುಖ ಘಟನೆಗಳ ತಾಜಾ ಮತ್ತು ಅಧಿಕೃತ ಸುದ್ದಿಗಳನ್ನು ನಿಮಗೆ ತಲುಪಿಸುವುದೇ ನಮ್ಮ ಮೊದಲ ಆದ್ಯತೆ.
ನಾವು ಏನು ನೀಡುತ್ತೇವೆ?
ಕನ್ನಡ E NEWS ನಲ್ಲಿ ನೀವು ಕರ್ನಾಟಕ ಮತ್ತು ಸುತ್ತಮುತ್ತಲಿನ ಸಮಗ್ರ ಸುದ್ದಿಗಳನ್ನು ಪಡೆಯಬಹುದು. ನಿಖರತೆ ಮತ್ತು ಪಾರದರ್ಶಕತೆಗೆ ಒತ್ತು ನೀಡಿ, ನಾವು ಈ ಕೆಳಗಿನ ಪ್ರಮುಖ ವಿಭಾಗಗಳ ಸಮಗ್ರ ಮಾಹಿತಿಯನ್ನು ಪ್ರಕಟಿಸುತ್ತೇವೆ:
ರಾಜಕೀಯ (Politics): ರಾಜ್ಯ ಮತ್ತು ದೇಶದ ರಾಜಕೀಯ ವಿದ್ಯಮಾನಗಳ ಆಳವಾದ ವಿಶ್ಲೇಷಣೆ ಮತ್ತು ನವೀಕೃತ ಮಾಹಿತಿ.
ಸಿನಿಮಾ (Cinema): ಸ್ಯಾಂಡಲ್ವುಡ್ ಹಾಗೂ ಇತರ ಮನರಂಜನಾ ಲೋಕದ ಎಲ್ಲಾ ಬಿಸಿಬಿಸಿ ಸುದ್ದಿಗಳು.
ಕ್ರೀಡೆ (Sports): ಸ್ಥಳೀಯ ಮತ್ತು ಜಾಗತಿಕ ಕ್ರೀಡಾ ಲೋಕದ ರೋಚಕ ಸಂಗತಿಗಳು.
ಕ್ರೈಂ (Crime): ಪ್ರಮುಖ ಅಪರಾಧ ಪ್ರಕರಣಗಳ ಸತ್ಯಾಸತ್ಯತೆ ಮತ್ತು ನಿಖರ ವರದಿಗಳು.
ಜಿಲ್ಲಾ ಸುದ್ದಿ (District News): ನಿಮ್ಮದೇ ಜಿಲ್ಲೆಯ ಸಮಗ್ರ ಬೆಳವಣಿಗೆಗಳು ಮತ್ತು ಸ್ಥಳೀಯ ಸಮಸ್ಯೆಗಳ ಬಗ್ಗೆ ವಿಶೇಷ ಗಮನ.
ನಮ್ಮ ಬದ್ಧತೆ
ನಾವು ಕೇವಲ ಸುದ್ದಿಯನ್ನು ಪ್ರಕಟಿಸುವುದಿಲ್ಲ, ಬದಲಿಗೆ ನಿಖರತೆ, ಸಮಗ್ರತೆ ಮತ್ತು ಸಮಯಪ್ರಜ್ಞೆಗೆ ಬದ್ಧರಾಗಿದ್ದೇವೆ. ಪ್ರತಿಯೊಂದು ಮಾಹಿತಿಯನ್ನು ಕೂಲಂಕಷವಾಗಿ ಪರಿಶೀಲಿಸಿ, ಯಾವುದೇ ಅಪಪ್ರಚಾರಕ್ಕೆ ಆಸ್ಪದ ನೀಡದೆ ಸತ್ಯಾಂಶವನ್ನು ಮಾತ್ರ ನಿಮ್ಮ ಮುಂದೆ ಇಡುತ್ತೇವೆ. ನಿಮ್ಮ ಬದುಕಿನ ಮೇಲೆ ಪರಿಣಾಮ ಬೀರುವ ಪ್ರತಿಯೊಂದು ಸುದ್ದಿಯನ್ನೂ ಮೊದಲು ತಲುಪಿಸುವ ಮೂಲಕ, ನಿಮ್ಮ ದೈನಂದಿನ ಜೀವನದ ಭಾಗವಾಗಲು ನಾವು ಬಯಸುತ್ತೇವೆ.
ಕನ್ನಡ E NEWS – ಪ್ರತಿ ಸುದ್ದಿಯೂ ನಿಮ್ಮ ಅಂಗೈಯಲ್ಲಿ…
ವಿಳಾಸ
ಸಂಪಾದಕರು ಕನ್ನಡ E NEWS ಅಂಬೇಡ್ಕರ್ ನಗರ ವಕ್ಕೋಡಿ ಮೈನ್ ರೋಡ್ ತುಮಕೂರು 9972189131 kannadaenews@gmail.com