ಕಾಸರಗೋಡು: ಕರ್ನಾಟಕ ಮೂಲದ ಹೂವಿನ ಹಡಗಲಿ ತಾಲೂಕಿನ ಗಳಗನಾಥ ತಿರುಕಪ್ಪ ಎಂಬುವರ ಮಗ ಗಳಗನಾಥ ಪುಟ್ಟಪ್ಪ ಅಲಿಯಾಸ್ ಮಂಜುನಾಥ ಎಂಬ ಈ ವ್ಯಕ್ತಿ ಎಲ್ಲಿಯೇ ಕಂಡರು ಹತ್ತಿರದ ಪೊಲೀಸ್ ಠಾಣೆಗೆ ಒಪ್ಪಿಸುವಂತೆ ಕಾಸರಗೋಡು ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ

ಕರ್ನಾಟಕ ಮೂಲದ  ಮಂಜುನಾಥ ಅಲಿಯಾಸ್ ಗಳಗನಾಥ ಪುಟ್ಟಪ್ಪ ಎಂಬ ವ್ಯಕ್ತಿ ಕಾಸರಗೋಡು ಜಿಲ್ಲೆಯ ಚರಕಪರ ಎಂಬ ಗ್ರಾಮದಲ್ಲಿ ಗಾರೆ ಕೆಲಸ ಮಾಡುತ್ತಿದ್ದು ನಿನ್ನೆ ಭಾನುವಾರ ರಾತ್ರಿ ಐವತ್ತು ಸಾವಿರ ನಗದು, ಎರಡು ಮೊಬೈಲ್ ಫೋನ್ ಮತ್ತು ಚಿನ್ನದ ಉಂಗುರ ಕದ್ದು ಪರಾರಿಯಾಗಿದ್ದಾನೆ ಎಂದು ಸುರೇಶ್ ಎಂಬ ವ್ಯಕ್ತಿ ಕಾಸರಗೋಡು ಪೊಲೀಸರರಿಗೆ ದೂರು ದಾಖಲಿಸಿದ್ದಾರೆ

ಕಾಸರಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಉಡುಪಿ ಸುತ್ತ ಮುತ್ತ ಈ ವ್ಯಕ್ತಿ ಇರುವುದಾಗಿ ಮಾಹಿತಿ ಲಭ್ಯವಾಗಿದ್ದು ಕಳ್ಳನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ