ಈ ದಿನದ ರಾಶಿಫಲವು ಯಾರಿಗೆ ಶುಭ ತರಲಿದೆ..? ಯಾವ ರಾಶಿಯವರಿಗೆ ಅಶುಭ ಎನಿಸಲಿದೆ. ಇಲ್ಲಿ ನೀವು ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ
ಮೇಷ : ನಿಮ್ಮ ಆರ್ಥಿಕ ಜೀವನವು ಸುಧಾರಿಸಲಿದೆ. ಇಂದು ನೀವು ಮಕ್ಕಳ ಒತ್ತಾಯಕ್ಕೆ ಮಣಿದು ಹೊಸ ವಾಹನವನ್ನು ಖರೀದಿ ಮಾಡಲಿದ್ದೀರಿ. ಕಚೇರಿಗೆ ಸಂಬಂಧಿಸಿದ ಕೆಲಸದ ಮೇಲೆ ಜಾಗ್ರತಿ ಇರಲಿ. ಇಲ್ಲವಾದಲ್ಲಿ ಮೇಲಾಧಿಕಾರಿಗಳ ಕೋಪಕ್ಕೆ ಕಾರಣವಾಗಲಿದ್ದೀರಿ.
ವೃಷಭ : ಕಚೇರಿ ಕೆಲಸದ ನಿಮಿತ್ತ ಇಂದು ನೀವು ದಿಢೀರ್ ಪ್ರಯಾಣ ಕೈಗೊಳ್ಳಬೇಕಾಗಬಹುದು. ಕಚೇರಿಯಲ್ಲಿ ಕೆಲಸದ ಒತ್ತಡ ಕೂಡ ಹೆಚ್ಚಲಿದೆ. ಕೋರ್ಟ್ – ಕಚೇರಿಗೆ ಸಂಬಂಧಿಸಿದ ಕೆಲಸಗಳಲ್ಲಿ ಜಯ ಸಾಧಿಸಲಿದ್ದೀರಿ. ಮನೆಯಲ್ಲಿ ಪೀಠೋಪಕರಣಗಳನ್ನು ಖರೀದಿ ಮಾಡಲಿದ್ದೀರಿ.
ಮಿಥುನ : ಅವಿವಾಹಿತರಿಗೆ ಕಂಕಣ ಬಲ ಕೂಡಿ ಬರಲಿದೆ. ಹೀಗಾಗಿ ಮನೆಯಲ್ಲಿ ಸಂತಸದ ವಾತಾವರಣ ನೆಲೆಸಲಿದೆ. ಸ್ನೇಹಿತರು ನಿಮ್ಮನ್ನು ಕ್ಷುಲ್ಲಕ ಕಾರಣಕ್ಕೆ ದೂರ ಮಾಡಲಿದ್ದಾರೆ. ಇದರಿಂದ ನಿಮ್ಮ ಮನಸ್ಸಿಗೆ ತುಂಬಾನೇ ನೋವುಂಟಾಗಲಿದೆ.
ಕಟಕ : ಹಣವನ್ನು ಗಳಿಸಲು ಅಡ್ಡ ದಾರಿ ಹಿಡಿಯುತ್ತಿದ್ದೀರಿ. ಇದು ಎಂದಿಗೂ ಒಳ್ಳೆಯದಲ್ಲ. ಸುಲಭದಲ್ಲಿ ಸಿಕ್ಕ ಹಣವು ನಿಮ್ಮ ಕೈಯಲ್ಲಿ ನಿಲ್ಲೋದಿಲ್ಲ. ನಿಮ್ಮಲ್ಲಿರುವ ಹಣವನ್ನು ನೋಡಿ ನಿಮ್ಮ ಜೊತೆ ಬಂದವರು ಹೆಚ್ಚು ದಿನ ನಿಮ್ಮೊಂದಿಗೆ ಇರೋದಿಲ್ಲ.
ಸಿಂಹ : ನಿಮ್ಮ ಬಳಿ ಒಳ್ಳೆಯ ಪ್ರತಿಭೆ ಇದೆ. ಆದರೆ ನೀವು ಅತಿಯಾದ ಸೋಂಬೇರಿ. ಇದೇ ಕಾರಣಕ್ಕೆ ಅವಕಾಶ ವಂಚಿತರಾಗುತ್ತಿದ್ದೀರಿ. ನೀವು ಈ ಗುಣವನ್ನು ಬದಲಾಯಿಸಿಕೊಳ್ಳಲೇಬೇಕು. ದಾಂಪತ್ಯ ಜೀವನದಲ್ಲಿ ಹೊಂದಾಣಿಕೆ ಇರುವುದಿಲ್ಲ.
ಕನ್ಯಾ : ಹಣ ಸಂಪಾದನೆ ಮಾಡಲು ನೀವು ತುಂಬಾನೇ ಶ್ರಮ ಪಡುತ್ತಿದ್ದೀರಿ. ಇದರಿಂದ ಮಕ್ಕಳ ಬಾಲ್ಯ ಜೀವನದಲ್ಲಿ ನಿಮಗೆ ಹೆಚ್ಚು ಸಮಯ ಕೊಡಲು ಆಗೋದಿಲ್ಲ. ಹೊಸ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದೀರಿ. ಮುಂದಿನ ದಿನಗಳಲ್ಲಿ ಒಳ್ಳೆಯದಾಗುತ್ತದೆ.
ತುಲಾ : ಮನೆಯ ಎಲ್ಲಾ ಜವಾಬ್ದಾರಿಯನ್ನು ನೀವೇ ಹೊತ್ತಿದ್ದೀರಿ. ಇಂದು ನಿಮಗೆ ಆರ್ಥಿಕ ಸಂಕಷ್ಟ ಇರಬಹುದು. ಆದರೆ ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ. ನಿಮ್ಮ ಕೆಲಸವು ಕಚೇರಿಯಲ್ಲಿ ಪ್ರಶಂಸೆಗೆ ಪಾತ್ರವಾಗಲಿದೆ. ಧೈರ್ಯಗುಂದಬೇಡಿ.
ವೃಶ್ಚಿಕ : ಸಂಗಾತಿಯ ಹೊಸ ಪ್ರಯತ್ನಗಳಿಗೆ ಬೆನ್ನೆಲುಬಾಗಿ ನಿಲ್ಲಿ. ಯಾವುದೇ ಕಾರಣಕ್ಕೂ ಅವರನ್ನು ನಿಂದಿಸಬೇಡಿ. ಮಕ್ಕಳ ಪಾಲನೆಯಲ್ಲಿ ನಿಮ್ಮ ಪಾಲು ಇದೆ ಎನ್ನುವುದು ನೆನಪಿನಲ್ಲಿ ಇರಲಿ. ಕಚೇರಿ ಕೆಲಸದಲ್ಲಿ ನಿಮ್ಮ ಒತ್ತಡ ಹೆಚ್ಚಲಿದೆ.
ಧನು : ನೀವು ಮೌನ ಸ್ವಭಾವದ ವ್ಯಕ್ತಿ. ಸಂಕೋಚ ಕೂಡ ನಿಮಗೆ ಅಷ್ಟೇ ಇದೆ. ಆದರೆ ನಿಮ್ಮ ಈ ಗುಣಗಳು ನಿಮ್ಮನ್ನು ಅವಕಾಶ ವಂಚಿತರನ್ನಾಗಿ ಮಾಡಬಹುದು. ಹೀಗಾಗಿ ಸೂಕ್ತವಾದ ಸಂದರ್ಭದಲ್ಲಿ ಧ್ವನಿ ಎತ್ತುವುದನ್ನು ಕಲಿಯಿರಿ. ಇದರಲ್ಲಿ ನಿಮಗೆ ಅನುಕೂಲವಾಗಲಿದೆ.
ಮಕರ : ಅತಿಯಾಗಿ ನಿಮ್ಮನ್ನು ನೀವು ಹೊಗಳಿಕೊಳ್ಳಬೇಡಿ. ನಿಮ್ಮ ಕೆಲಸವನ್ನು ನೋಡಿ ಜನರು ನಿಮ್ಮನ್ನು ಮೆಚ್ಚುವಂತಿರಬೇಕು. ಆ ಕಡೆಗೆ ನಿಮ್ಮ ಪ್ರಯತ್ನ ಇರಲಿ. ಉದ್ಯಮದಲ್ಲಿ ಯಶಸ್ಸನ್ನು ಕಾಣಲು ಇನ್ನಷ್ಟು ಪ್ರಯತ್ನ ಹಾಕಬೇಕು.
ಕುಂಭ : ನನಗಿಂತ ನಿಪುಣ ಮತ್ಯಾರಿಲ್ಲ ಎಂಬ ಆತ್ಮ ವಿಶ್ವಾಸದಲ್ಲಿದ್ದ ನಿಮಗೆ ಬಲವಾದ ಪೆಟ್ಟು ಬೀಳುವಂತಹ ಪ್ರಸಂಗವೊಂದು ನಡೆಯಲಿದೆ. ಇದು ನಿಮ್ಮನ್ನು ಅತಿಯಾಗಿ ಕುಗ್ಗಿಸಲಿದೆ. ಹೊಸ ಆಭರಣವನ್ನು ಖರೀದಿ ಮಾಡಲಿದ್ದೀರಿ.
ಮೀನ : ಇಂದು ನೀವು ಸಮಾಜದ ಗಣ್ಯ ವ್ಯಕ್ತಿಗಳನ್ನು ಭೇಟಿಯಾಗಲಿದ್ದೀರಿ. ಇದರಿಂದ ನಿಮ್ಮ ವರ್ಚಸ್ಸು ಕೂಡ ಹೆಚ್ಚಲಿದೆ. ನೀವು ಅತಿಯಾದ ಪರೋಪಕಾರ ಗುಣವನ್ನು ಹೊಂದಿದ್ದೀರಿ. ಇದರಿಂದ ಜನರ ಮೆಚ್ಚುಗೆಗೆ ಪಾತ್ರವಾಗಲಿದ್ದೀರಿ
-ಅರೆಯೂರು ಶ್ರೀ ವೈದ್ಯ ಜ್ಯೋತಿಷ್ಯ ಮಂದಿರ

