ಭವಿಷ್ಯ ನುಡಿಯುವುದು ಆ ಭಗವಂತನ ಅನುಗ್ರಹ. ದಿನ ಬೆಳಗಾಗೆದ್ದು ಭಗವಂತನ ನೆನೆದು ನಿತ್ಯದ ಕಾಯಕದಲ್ಲಿ ತೊಡಗಿಕೊಳ್ಳುವ ಮುನ್ನ ಈ ಭವಿಷ್ಯವನ್ನೊಮ್ಮೆ ನೋಡಿಕೊಳ್ಳಿ. ಇಲ್ಲಿ ಹೇಳುವ ಎಚ್ಚರಿಕೆಯ ಮಾತುಗಳನ್ನೊಮ್ಮೆ ಗಮನದಲ್ಲಿ ಇಟ್ಟುಕೊಳ್ಳಿ. ಸಾಧ್ಯವಾದಷ್ಟೂ ಸಲಹೆಗಳನ್ನು ಅನುಸರಿಸಿ. ಜೀವನದಲ್ಲಿ ಸಮಸ್ಯೆಗಳು ಬಂದು ಹೋಗುವ ನೆಂಟರಂತೆ.
ಆದರೆ, ನಾವು ಮಾಡುವ ಪಾಪ- ಕರ್ಮಗಳು. ತಂದೆ- ತಂದೆ ಮೂಲಕ ನಮಗೆ ಬರುವ ರಕ್ತದ ಗುಣದಂತೆ. ಒಳ್ಳೆ ಕರ್ಮಕ್ಕೆ ಉತ್ತಮ ಫಲ- ಆರೋಗ್ಯ. ಕೆಟ್ಟ ಕರ್ಮಕ್ಕೆ- ಕೆಟ್ಟ ಫಲ, ಸಮಸ್ಯೆ. ಆದರೆ ಅದನ್ನು ಕೂಡ ನಾವು ಹೇಗೆ ವೈದ್ಯರಲ್ಲಿಗೆ ಹೋಗಿ, ಆರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿ ಇರಿಸಿಕೊಳ್ಳುತ್ತೀವೋ ಹಾಗೇ ಜೋಪಾನ ಮಾಡಬಹುದು.

ಮೇಷ
ನಿಮ್ಮ ಮಾತಿನ ಮೋಡಿಗೆ ಇತರರು ಒಳಗಾಗುತ್ತಾರೆ. ಮಕ್ಕಳ ವ್ಯಾಪಾರ- ವ್ಯವಹಾರಕ್ಕೆ ಹಣಕಾಸು ನೆರವು ನೀಡಲು ಪ್ರಯತ್ನಿಸುತ್ತೀರಿ. ಹಳೆಯ ಕಾರು, ದ್ವಿಚಕ್ರ ವಾಹನಗಳ ಮಾರಾಟ ಮಾಡುವ ಬಗ್ಗೆ ಆಲೋಚನೆ ಬರುತ್ತದೆ. ಈ ಹಿಂದೆ ಷೇರು ಪೇಟೆಯಲ್ಲಿ ಮಾಡಿದ್ದ ಹೂಡಿಕೆಯನ್ನು ಹಿಂಪಡೆಯಲಿದ್ದೀರಿ.

ವೃಷಭ
ಸ್ವತಂತ್ರ ಆಲೋಚನೆ ಮಾಡುವ ಮೂಲಕ ಇತರರಿಗೆ ಮಾದರಿ ಆಗುತ್ತೀರಿ. ಹಣದ ಅಗತ್ಯ ಕಂಡುಬಂದು, ಕ್ರೆಡಿಟ್ ಕಾರ್ಡ್ ಬಲಸಬೇಕಾಗುತ್ತದೆ ಅಥವಾ ಸ್ನೇಹಿತರ ಬಳಿ ಸಾಲ ಕೇಳುವ ಅನಿವಾರ್ಯ ಸೃಷ್ಟಿ ಆಗಲಿದೆ. ಸ್ವಂತ ವ್ಯಾಪಾರ, ವ್ಯವಹಾರ ಮಾಡುವವರಿಗೆ ಅಲ್ಪ ಹಿನ್ನಡೆ.

ಮಿಥುನ
ಕಾಲು ನೋವು ವಿಪರೀತ ಕಾಡುತ್ತದೆ. ಸ್ವಂತದವರು ಅಂತ ಯಾರನ್ನು ನೀವು ಭಾವಿಸಿದ್ದೀರೋ ಅವರಿಂದಲೋ ಬಹಳ ನೋವು ಪಡುತ್ತೀರಿ. ನಿಮ್ಮಿಂದಾ ಸಾಧ್ಯವಾದಲ್ಲಿ ಅಗತ್ಯ ಇರುವ ಒಬ್ಬರಿಗೆ ಊಟದ ವ್ಯವಸ್ಥೆ ಮಾಡಿ. ಸಂಗಾತಿ- ಮಕ್ಕಳ ಮಾತನ್ನು ಸರಿಯಾಗಿ ಕೇಳಿಸಿಕೊಳ್ಳಿ.

ಕರ್ಕಾಟಕ
ಮಹತ್ತರವಾದ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಾಗುತ್ತದೆ. ಹೆಚ್ಚಿನ ಪ್ರತಿಫಲಾಪೇಕ್ಷೆ ಇಲ್ಲದೆ ನೀವು ಈ ಕೆಲಸವನ್ನು ಮಾಡಬೇಕಾಗುತ್ತದೆ. ಯಾವುದೇ ಆಕ್ಷೇಪ ಮಾಡಬೇಡಿ. ನಿಮ್ಮ ವರ್ಚಸ್ಸಿಗೆ ಧಕ್ಕೆ ಆಗಬಹುದು. ಬಹಳ ಸಮಯದ ನಂತರ ಹಳೇ ಗೆಳೆಯರ ಭೇಟಿ ಅಥವಾ ಮಾತುಕತೆ ಸಾಧ್ಯತೆ ಇದೆ.

ಸಿಂಹ
ಬಾಕಿ ಉಳಿದ ಯೋಜನೆಗಳನ್ನು ಪೂರ್ಣಗೊಳಿಸುವ ಬಗ್ಗೆ ಸಂಬಂಧಪಟ್ಟವರ ಜತೆಗೆ ಮಾತುಕತೆ ನಡೆಸಲಿದ್ದೀರಿ. ಪಿತ್ರಾರ್ಜಿತ ಆಸ್ತಿ ವಿಚಾರವಾಗಿ ಒಂದು ಒಪ್ಪಂದಕ್ಕೆ ಬರುವ ಸಾಧ್ಯತೆ ಇದೆ. ನಿರೀಕ್ಷೆ ಮಾಡಿದಂತೆ ಆದಾಯ ಬರುವುದಿಲ್ಲ. ಇತರರ ಮೇಲೆ ದೋಷಾರೋಪ ಮಾಡಬೇಡಿ.

ಕನ್ಯಾ
ನಿಮ್ಮ ಅಭಿಪ್ರಾಯಕ್ಕೆ ಮನ್ನಣೆ ದೊರೆಯಲಿದೆ. ಈ ಹಿಂದೆ ನೀವು ಪಟ್ಟ ಶ್ರಮಕ್ಕೆ ಈಗ ಗೌರವ ದೊರೆಯಲಿದೆ. ಹಣಕಾಸಿನ ಸಂಗತಿಗಳನ್ನು ಸಂಗಾತಿ ಜತೆಗೆ ಚರ್ಚಿಸಿ, ಆ ನಂತರ ಮುಂದಿನ ತೀರ್ಮಾನ ಕೈಗೊಳ್ಳಿ. ಅನಿವಾರ್ಯ ಸಂದರ್ಭದಲ್ಲೂ ಸುಳ್ಳು ಹೇಳಬೇಡಿ. ಏಕೆಂದರೆ, ಸಿಕ್ಕುಬಿದ್ದು ಅವಮಾನದ ಪಾಲಾಗುತ್ತೀರಿ.

ತುಲಾ
ಯಾವುದೋ ಆತಂಕ ಇಡೀ ದಿನ ನಿಮ್ಮನ್ನು ಕಾಡಲಿದೆ. ಕುಟುಂಬದ ಹಿರಿಯರ ಸಲಹೆ ಪಡೆದು, ಮುಖ್ಯ ಕೆಲಸಗಳಲ್ಲಿ ಮುಂದುವರಿಯಿರಿ. ಯಾರ ಜತೆಗೂ ವಾಗ್ವಾದ ನಡೆಸದಿರಿ. ವಾಹನ ಚಾಲನೆ ಮಾಡುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಅನಿವಾರ್ಯ ಇಲ್ಲದಿದ್ದಲ್ಲಿ ವಾಹನ ಓಡಿಸಲೇಬೇಡಿ.

ವೃಶ್ಚಿಕ
ಎಷ್ಟು ಪ್ರಯತ್ನ ಪಟ್ಟರೂ ಹೆಚ್ಚಿನ ಖರ್ಚನ್ನು ತಡೆಯುವುದಕ್ಕೆ ಆಗುವುದಿಲ್ಲ. ಯಾವುದೋ ನಿಶ್ಚಿತ ಮೂಲದಿಂದ ಹಣ ಬರುವ ಖಾತ್ರಿ ಸಿಕ್ಕು, ಹೆಚ್ಚಿನ ಖರ್ಚು ಮಾಡಲು ಮುಂದಾಗುತ್ತೀರಿ. ಬಂಧುಗಳು, ಸ್ನೇಹಿತರು ನಿಮ್ಮ ಸಮಯಪ್ರಜ್ಞೆಯನ್ನು ಮೆಚ್ಚುತ್ತಾರೆ. ಕಣ್ಣು ನೋವು ನಿಮ್ಮನ್ನು ಕಾಡಬಹುದು.

ಧನು
ದೇವತಾರಾಧನೆ, ಅಧ್ಯಾತ್ಮ ಚಿಂತನೆಗೆ ಹೆಚ್ಚಿನ ಸಮಯ ಮೀಸಲಿಡುತ್ತೀರಿ. ಯಾವುದಾದರೂ ಮುಖ್ಯ ದಾಖಲೆಯನ್ನು ಎತ್ತಿಟ್ಟು, ಅದಕ್ಕಾಗಿ ವಿಪರೀತ ಹುಡುಕುವಂಥ ಸನ್ನಿವೇಶ ಸೃಷ್ಟಿಯಾಗುತ್ತದೆ. ಮಕ್ಕಳಿಗಾಗಿ ವಿಶೇಷ ಅಡುಗೆಯನ್ನು ಮಾಡುವ ಬಗ್ಗೆ ಆಲೋಚನೆ ಮಾಡುತ್ತೀರಿ.
- ಹೊಸ ವರ್ಷಾಚರಣೆಯಂದು ತುಮಕೂರಿನ ಈ ಪ್ರವಾಸಿ ತಾಣಗಳಿಗೆ ಪ್ರವೇಶ ನಿರ್ಬಂಧ
ತುಮಕೂರು: ಹೊಸ ವರ್ಷಾಚರಣೆ (New Year 2023) ಹಿನ್ನೆಲೆ ಜಿಲ್ಲೆಯ ಕೆಲವು ಪ್ರವಾಸಿ ತಾಣಗಳಿಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ತುಮಕೂರು ಜಿಲ್ಲಾಡಳಿತವು ಮಾರ್ಗಸೂಚಿ ಹೊರಡಿಸಿದ್ದು, ಪ್ರವಾಸಿ ತಾಣಗಳಾದ ದೇವರಾಯನದುರ್ಗ, ನಾಮದಚಿಲುಮೆ, ಬಸದಿಬೆಟ್ಟದಲ್ಲಿ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ ಹಾಕಲಾಗಿದೆ.
ಡಿಸೆಂಬರ್ 31ರಂದು ಬೆಳಗ್ಗೆ 8 ಗಂಟೆಯಿಂದ ಜನವರಿ 2ರ ಬೆಳಗ್ಗೆ 8 ಗಂಟೆವರೆಗೆ ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಲಾಗಿದೆ. ಹೊಸ ವರ್ಷಾಚರಣೆ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಜನರು ಗುಂಪು ಗುಂಪಾಗಿ ಸೇರುವುದರಿಂದ ವನ್ಯಜೀವಿಗಳಿಗೆ ತೊಂದರೆಯಾಗಲಿದೆ.
ಜತೆಗೆ ದೇವರಾಯನದುರ್ಗದಲ್ಲಿ ತಿರುವಿನ ರಸ್ತೆಗಳು ಹೆಚ್ಚಾಗಿ ಇರುವುದರಿಂದ ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಮಾತ್ರವಲ್ಲದೆ ಹೊಸ ವರ್ಷಾಚರಣೆ ನೆಪದಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಯುವ ಸಾಧ್ಯತೆಯೂ ಇದೆ. ಕೆಲವರು ಮದ್ಯಪಾನ ಮಾಡಿ ಜಾಲಿರೈಡ್ ನೆಪದಲ್ಲಿ ವಾಹನ ಚಲಾಯಿಸುವುದರಿಂದ ನಾಗರಿಕರಿಗೆ, ಉಳಿದ ಸಂಚಾರಿಗಳಿಗೆ ತೊಂದರೆಯಾಗುವುದಲ್ಲದೆ, ಅಪಘಾತವಾಗಿ ಸಮಸ್ಯೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲಾಡಳಿತ ಈ ಜಾಗಗಳಲ್ಲಿ ಸೆಲೆಬ್ರೇಷನ್ ನಡೆಸಲು ಬ್ರೇಕ್ ಹಾಕಿದೆ

ಮಕರ
ಸಂಗಾತಿ- ಮಕ್ಕಳ ಜತೆಗೆ ಉತ್ತಮ ಸಮಯವನ್ನು ಕಳೆಯುತ್ತೀರಿ. ದೀರ್ಘ ಕಾಲದ ಗೆಳೆಯ ಅಥವಾ ಗೆಳತಿ ಜತೆಗೆ ಮುಖ್ಯವಾದ ನಿರ್ಧಾರಕ್ಕೆ ಸಂಬಂಧಿಸಿದಂತೆ ಮಾತಿನ ಚಕಮಕಿ ಆಗಬಹುದು. ನಾನು ಮಾಡಿದ್ದೇ ಸರಿ ಎಂಬ ಧೋರಣೆ ಒಳ್ಳೆಯದಲ್ಲ. ಸ್ವಂತ ವಿಮರ್ಶೆ ಮಾಡಿಕೊಂಡು, ಅಂತಿಮ ನಿರ್ಧಾರಕ್ಕೆ ಬನ್ನಿ.

ಕುಂಭ
ಎಲ್ಲವೂ ನಿಮ್ಮ ವಿರುದ್ಧವೇ ಇದೆಯೇನೋ ಎಂಬಂತೆ ನಿಮಗೆ ಬೇಸರವಾಗುತ್ತದೆ. ನೀವು ಆಡುವ ಮಾತಿಗೆ ಇಲ್ಲದ ಅರ್ಥ ಕಲ್ಪಿಸಲಾಗುತ್ತದೆ. ನಿಮ್ಮ ಬುದ್ಧಿವಂತಿಕೆ ಹಾಗೂ ಪ್ರಬುದ್ಧತೆಯ ಕಾರಣಕ್ಕೆ ಹಲವು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತೀರಿ. ಕ್ರಿಯೇಟಿವ್ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಒತ್ತಡದ ದಿನ.

ಮೀನ
ಪ್ರೇಮಿಗಳಿಗೆ ಅತ್ಯುತ್ತಮವಾದ ದಿನ ಇದು. ಮನೆಯಲ್ಲಿ ಮದುವೆ ಬಗ್ಗೆ ಪ್ರಸ್ತಾವ ಮಾಡಬಹುದು. ಮನರಂಜನೆ ಸಲುವಾಗಿ ಹಣವನ್ನು ಖರ್ಚು ಮಾಡಲಿದ್ದೀರಿ. ತಂದೆ- ತಾಯಿಯ ಆಶೀರ್ವಾದ ನಿಮ್ಮ ಮೇಲೆ ಇರಲಿದೆ. ಸೋದರ ಸಂಬಂಧಿಗಳು ನೆರವು ಕೇಳಿಕೊಂಡು ಬರಬಹುದು


