ಕೊರಟಗೆರೆ: ಅಡಿಕೆತಟ್ಟೆ ತಯಾರಿಸುವ ಫ್ಯಾಕ್ಟರಿ ಪರವಾನಗಿ ಮಾಡಿಕೊಡಲು 20 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಪಿಡಿಒ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ.

ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಎಲೆರಾಂಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಶೇಖರಯ್ಯ, ಪಿಡಿಒ ಕಿಶೋರ್ ಲಾಲ್ ಸಿಂಗ್ ಲೋಕಾಯುಕ್ತ ಬಲೆಗೆ ಬಿದ್ದವರಾಗಿದ್ದಾರೆ.
ಪರವಾನಗಿ ಮಾಡಿಕೊಡಲು ಎಲೆ ರಾಂಪುರ ಗ್ರಾಮದ ಆರ್. ನಾಗೇಶ್ ಎಂಬವರ ಬಳಿಯಲ್ಲಿ ಅಧ್ಯಕ್ಷ ಹಾಗೂ ಪಿಡಿಒ 20 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಈ ಸಂಬಂಧ ಮಾಹಿತಿ ಪಡೆದ ಲೋಕಾಯುಕ್ತ ಎಸ್.ಪಿ. ವಲಿಬಾಷ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ತಂಡ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಪಿಡಿಒ ಕಿಶೋರ್ ಲಾಲ್ ಸಿಂಗ್

ಡಿವೈಎಸ್ಪಿ ಉಮಶಂಕರ್, ಇನ್ಸ್ಪೆಕ್ಟರ್ ಕೆ.ಸುರೇಶ್, ಗಿರೀಶ್, ಮಹಮದ್ ಸಲಿಂ, ಶಿವರುದ್ರಪ್ಪ ಮೇಟಿ ತಂಡ ಕಾರ್ಯಾಚರಣೆಯಲ್ಲಿ ಭಾಗಿಯಾಗಿತ್ತು.