ಕೊಪ್ಪಳ: ಹುಲಿಗೆಮ್ಮ ದೇವಸ್ಥಾನದ (Huligemma Devi Temple) ಪಾದಯಾತ್ರೆಗೆ ಹೊರಟಿದ್ದರ ಮೇಲೆ ಖಾಸಗಿ ಬಸ್‌ (Private Bus) ಹರಿದು ಸ್ಥಳದಲ್ಲಿಯೇ ಮೂವರ ಸಾವನ್ನಪ್ಪಿ, ನಾಲ್ಕು ಜನರಿಗೆ ಗಾಯಗೊಂಡ ಘಟನೆ ಕೂಕನಪಳ್ಳಿ ಗ್ರಾಮದ ರಾ.ಹೆ. 50 ರಲ್ಲಿ ನಡೆದಿದೆ.

ಅನ್ನಪೂರ್ಣ(40),ಪ್ರಕಾಶ್(25), ಶರಣಪ್ಪ(19) ಮೃತರು. ಸಿಂದಗಿಯಿಂದ ಬೆಂಗಳೂರಿಗೆ (Bengaluru) ತೆರಳುತ್ತಿದ್ದ ಖಾಸಗಿ ಸ್ಲೀಪರ್‌ ಕೋಚ್‌ ಬಸ್‌ ಹರಿದ ಪರಿಣಾಮ ಮೂವರು ಮೃತಪಟ್ಟಿದ್ದಾರೆ.

ಅಪಘಾತ ಮಾಡಿದ ಖಾಸಗಿ ಬಸ್

ಗದಗ ಜಿಲ್ಲೆಯ ರೋಣ ತಾಲೂಕಿನ ತಳ್ಳಿಹಾಳ ಗ್ರಾಮದ ಇವರು ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದ ಹುಲಿಗೆಮ್ಮ ದೇವಸ್ಥಾನಕ್ಕೆ ಶನಿವಾರ ಪಾದಯಾತ್ರೆಗೆ ಹೊರಟಿದ್ದರು. ಇನ್ನು ಕೇವಲ ಕೇವಲ 3 ಗಂಟೆ ಕಳೆದರೆ ಇವರು ದೇವಸ್ಥಾನ ತಲುಪುತ್ತಿದ್ದರು.

ಪ್ರಾಣಾಪಾಯದಿಂದ ಪಾರಾದ ನಾಲ್ವರನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನಾ ಸ್ಥಳಕ್ಕೆ ಎಸ್ಪಿ ಡಾ ರಾಮ್ ಅರಸಿದ್ದಿ ಭೇಟಿ ಪರಿಶೀಲನೆ ನಡೆಸಿದ್ದಾರೆ. ಮುನಿರಾಬಾದ್‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ಖಾಸಗಿ ಬಸ್‌ ಚಾಲಕನನ್ನು ಬಂಧಿಸಿಲಾಗಿದೆ

Leave a comment