ತುಮಕೂರು: ಗ್ರೀನ್ ಬರ್ಗ್ ಇಂಟರ್ನ್ಯಾಷನಲ್ ಸ್ಕೂಲ್‌ನಲ್ಲಿ ವಾಲ್ಮೀಕಿ ಜಯಂತಿಯನ್ನು ಭಕ್ತಿ ಮತ್ತು ಉತ್ಸಾಹದಿಂದ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಾಲ್ಮೀಕಿ ಮಹರ್ಷಿಯ ಜೀವನಗಾಥೆ, ಅವರ ಕಾವ್ಯಪ್ರತಿಭೆ ಹಾಗೂ ರಾಮಾಯಣದ ಸಂದೇಶಗಳ ಕುರಿತು ಮನಮೋಹಕ ಭಾಷಣಗಳು, ಪಠಣ ಮತ್ತು ಭಜನೆಗಳನ್ನು ಮಂಡಿಸಿದರು.

ಶಾಲೆಯ ಪ್ರಿನ್ಸಿಪಾಲ್ ಪುಷ್ಪಲತಾ ಎನ್ ಅವರು ಕಾರ್ಯಕ್ರಮಕ್ಕೆ ಅಧ್ಯಕ್ಷತೆ ವಹಿಸಿ ಮಾತನಾಡಿ, “ಮಹರ್ಷಿ ವಾಲ್ಮೀಕಿಯವರು ಮಾನವೀಯತೆ, ಧರ್ಮ ಮತ್ತು ಸತ್ಯದ ಮಾರ್ಗದರ್ಶಕರು. ಅವರ ತತ್ವಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು” ಎಂದು ಹೇಳಿದರು.

ಶಿಕ್ಷಕರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವಾಲ್ಮೀಕಿ ಮಹರ್ಷಿಗೆ ಪುಷ್ಪಾಂಜಲಿ ಸಲ್ಲಿಸಿದರು.

ಕಾರ್ಯಕ್ರಮ ಯಶಸ್ವಿಗೆ ತರಗತಿ ಶಿಕ್ಷಕರು ಮತ್ತು ಸಾಂಸ್ಕೃತಿಕ ವಿಭಾಗದ ಸಂಯೋಜಕರು ಶ್ರಮಿಸಿದ್ದರು.

Leave a comment