ಕರ್ನಾಟಕದ ಖ್ಯಾತ ರಾಜಕಾರಣಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಪುನೀತ್ ರಾಜ್‍ಕುಮಾರ್ ಪತ್ನಿ ಅಶ್ವಿನಿ ಮೇಡಂ ಅವರಿಗೆ ಕರೆ ಮಾಡಿದ್ದಾರೆ ಎಂಬ ವಿಚಾರವೊಂದು ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.

ನಟ ಪುನೀತ್ ರಾಜ್‍ಕುಮಾರ್ ಅವರು ಕನ್ನಡ ಸಿನಿ ಇಂಡಸ್ಟ್ರಿಯಲ್ಲಿ ಸ್ಟಾರ್ ನಟರಾಗಿ ಮೆರೆದವರು. ಜೊತೆಗೆ ನಟ ಸಾರ್ವಭೌಮ ಡಾ | ರಾಜ್‍ಕುಮಾರ್ ಅವರ ಮಗ ಕೂಡ. ಇಂತಹ ಖ್ಯಾತ ನಟನನ್ನು ರಾಜಕೀಯಕ್ಕೆ ಕರೆತರಲು ಸಾಕಷ್ಟು ಮನವೊಲಿಸಲು ಪ್ರಯತ್ನ ಕೂಡ ನಡೆದಿತ್ತು. ಆದರೆ, ನಟ ಪುನೀತ್ ರಾಜ್‍ಕುಮಾರ್ ಸಿನಿಮಾ ಬಿಟ್ಟು ರಾಜಕಾರಣಕ್ಕೆ ಎಂಟ್ರಿ ಕೊಟ್ಟಿಲ್ಲ. ಸ್ನೇಹಿತರೆ ಇವತ್ತಿನ ರಾಜಕಾರಣ ಹೇಗಿದೆ ಅಂದ್ರೆ, ಒಬ್ಬ ಸಾಮಾನ್ಯ ವ್ಯಕ್ತಿ ಗೆದ್ದು ರಾಜಕಾರಣಿಯಾದ ಬಳಿಕ ತನಗೆ ಇಷ್ಟ ಬಂದಂತೆ ಭ್ರಷ್ಟಾಚಾರ ಮಾಡುತ್ತಾ ಇರುತ್ತಾರೆ. ಜನಗಳ ಬೆವರಿನ ಹಣದ ಜೊತೆ ಮಜಾ ಮಾಡುವ ರಾಜಕಾರಣಿಗಳನ್ನು ನಾವೆಲ್ಲಾ ಸಾಕಷ್ಟು ನೋಡಿದ್ದೇವೆ.

ಈ ಎಲ್ಲಾ ಬೆಳವಣಿಗೆ ಕಂಡಂತಹ ಡಾ | ರಾಜ್‍ಕುಮಾರ್ ಹಾಗೂ ಅವರ ಮಗ ಪುನೀತ್ ರಾಜ್‍ಕುಮಾರ್ ಅವರು ರಾಜಕೀಯಕ್ಕೆ ಎಂಟ್ರಿ ಕೊಡುವುದಕ್ಕೆ‌‌ ಹಿಂದೇಟು ಹಾಕಿದ್ದಾರೆ.‌ ಆದರೆ ಇದೀಗ ಪುನೀತ್ ರಾಜ್‍ಕುಮಾರ್ ಅವರ ಪತ್ನಿ ಅಶ್ವಿನಿ ಮೇಡಂ ಅವರನ್ನು ರಾಜಕೀಯಕ್ಕೆ ಕರೆತರಲು ಯತ್ನಿಸುತ್ತಿದ್ದಾರೆ ಎಂಬ ವಿಚಾರವೊಂದು ಹರಿದಾಡುತ್ತಿದೆ. ಖ್ಯಾತ ರಾಜಕಾರಣಿ ಬಿ ಎಸ್ ಯಡಿಯೂರಪ್ಪ ಅವರು ಅಶ್ವಿನಿ ಮೇಡಂ ಅವರಿಗೆ ಕರೆ ಮಾಡಿದ್ದಾರೆ ಎಂಬ ವಿಚಾರ ಕೇಳಿಬರುತ್ತಿದೆ. ಆದರೆ ಇದು ಎಷ್ಟರಮಟ್ಟಿಗೆ ಸತ್ಯ ಎಂಬುವುದು ಗೋಚರಿಸುತ್ತಿಲ್ಲ